ಬಂಟ್ವಾಳ: ಬಿ.ಸಿ.ರೋಡು ಕೈಕಂಬದ ಮೀನು ಮಾರುಕಟ್ಟೆಯು ಅನಧಿಕೃತವಾಗಿದೆ ಎಂದು ಬಂಟ್ವಾಳ ಪುರಸಭೆಯು ಅದರ ತೆರವಿಗೆ ಮುಂದಾಗಿದ್ದು, ಆದರೆ ಮೀನು ವ್ಯಾಪಾರಸ್ಥರು ಮಾರುಕಟ್ಟೆಯನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.

ಸೋಮವಾರ ಪುರಸಭೆಯ ಆರೋಗ್ಯ ನಿರೀಕ್ಷಕ ರವಿಕೃಷ್ಣ ಹಾಗೂ ತಂಡ ಬಂಟ್ವಾಳ ನಗರ ಪೊಲೀಸರ ನೆರವಿನೊಂದಿಗೆ ಮಾರುಕಟ್ಟೆ ತೆರವಿಗೆ ತೆರಳಿತ್ತು. ಆದರೆ ವ್ಯಾಪಾರಿಗಳು ತೆರವಿಗೆ ವಿರೋಧ ವ್ಯಕ್ತಪಡಿಸಿದ್ದು, ತಮಗೆ ಮಾರುಕಟ್ಟೆ ನಿರ್ಮಿಸುವಂತೆ ಬೇಡಿಕೆಯನ್ನಿಟ್ಟಿದ್ದಾರೆ.
ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಮಾರುಕಟ್ಟೆ ತೆರವಿಗೆ ಸೂಚನೆ ನೀಡಿದ್ದು, ಹೀಗಾಗಿ ಪುರಸಭೆ ಅದರ ತೆರವಿಗೆ ಮುಂದಾಗಿತ್ತು. ಪ್ರಸ್ತುತ ಯಾವುದೇ ತೆರವು ಕಾರ್ಯ ನಡೆದಿಲ್ಲ. ಮೀನು ವ್ಯಾಪಾರಿಗಳು ಮುಖ್ಯಾಧಿಕಾರಿ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ತಿಳಿಸಿದ್ದಾರೆ.
