ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಕಾಲೇಜು ಐಕ್ಯೂಎಸಿ ಮತ್ತು ಉದ್ಯೋಗ ಕೋಶದ, ಯು.ಎನ್.ಡಿ.ಪಿ ಮತ್ತು ಹೆಡ್.ಹೆಲ್ಡ್.ಹೈ ಫೌಂಡೇಶನ್ ಬೆಂಗಳೂರು ಇದರ ಪ್ರಾಜೆಕ್ಟ್ ಕೋಡ್ ಉನ್ನತಿಯ ವತಿಯಿಂದ ನವೆಂಬರ್ 4 ರಂದು ಕಾಲೇಜು ಕ್ಯಾಂಪಸ್ ನಲ್ಲಿ ಉದ್ಯೋಗ ಮೇಳ ಅಯೋಜಿಸಲಾಗಿದೆ.


ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಇನ್ನಿತರ ಪದವಿ ಪಾಸಾದವರು ತಮ್ಮ ದಾಖಲೆಯನ್ನು ಸಮೇತವಾಗಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸುಮಾರು 15 ಕಂಪೆನಿಗಳು 200 ಕ್ಕೂ ಹೆಚ್ಚು ಉದ್ಯೋಗಗಳಿದ್ದು, ಅಭ್ಯರ್ಥಿಗಳು ತಮ್ಮ ಉದ್ಯೋಗದ ಕನಸುನ್ನು ನನಸು ಮಾಡಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಕೆ. ಶರತ್ ಕುಮಾರ್ ಪ್ರಕಟಣೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9164502107 , 7349562058,7338219054 ಇವರನ್ನು ಸಂಪರ್ಕಿಸಬಹುದು.












