ಬಂಟ್ವಾಳ: ಕೋವಿಡ್ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಕಾವಳಪಡೂರು ಗ್ರಾ.ಪಂ.ನ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ನಡೆಯಿತು.

ಕೋವಿಡ್ ನಿಂದ ಪಾರಾಗುವ ಉದ್ದೇಶದಿಂದ ಗ್ರಾಮದ ಪ್ರತಿಯೊಬ್ಬರೂ ವ್ಯಾಕ್ಸಿನೇಷನ್ ಪಡೆಯುವಂತೆ ಅವರು ಮನವಿ ಮಾಡಿದರು. ಹೊರರಾಜ್ಯ ಹೊರ ಜಿಲ್ಲೆಗಳಿಂದ ಬರುವಂತಹವರು ಬಗ್ಗೆ ನಿಗಾ ಇರಲಿ. ಅವರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಆಶಾ ಕಾರ್ಯಕರ್ತೆಯರು ಎಂದು ಅವರು ಹೇಳಿದರು.
ವಗ್ಗದಲ್ಲಿ ಕೋವಿಡ್ ಕೇರ್ ಸೆಂಟರ್ ನ ವ್ಯವಸ್ಥೆ ಮಾಡಲಾಗಿದ್ದು ಅದರ ಉತ್ತಮ ನಿರ್ವಹಣೆಗೆ ಟಾಸ್ಕ್ ಫೋರ್ಸ್ ಸಹಾಯ ಮಾಡಿ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಸರಿಯಾದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕೋವಿಡ್ ಸೊಂಕಿನಿಂದ ಮನೆಯಲ್ಲಿರುವ ಬಡ ಕುಟುಂಬಗಳಿಗೆ ಶಾಸಕರ ವೈಯಕ್ತಿಕ ನೆಲೆಯಿಂದ ಕಿಟ್ ನೀಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅನಾವಶ್ಯಕ ಭಯಬೇಡ, ನಿಯಮ ಪಾಲನೆ ಮಾಡುವಂತೆ ಅವರು ಮನವಿ ಮಾಡಿದರು.
ಗ್ರಾಮದಲ್ಲಿ 34 ಮಂದಿ ಸೋಂಕಿತರಿದ್ದು ಎಲ್ಲರೂ ಆರೋಗ್ಯವಂತರಾಗಿದ್ದಾರೆ. ಅದರಲ್ಲಿ 2 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಎಲ್ಲಾ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟಾಸ್ಕ್ ಫೋರ್ಸ್ ಮಾಹಿತಿ ನೀಡಿತು.
ಈ ಸಂದರ್ಭದಲ್ಲಿ ಕಾವಳಪಡೂರು ಗ್ರಾ.ಪಂ. ಅಧ್ಯಕ್ಷೆ ರಜನಿ, ಉಪಾಧ್ಯಕ್ಷೆ ಲಕ್ಷ್ಮೀ, ತಹಶಿಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಇಒ ರಾಜಣ್ಣ, ಪಿಡಿಒ ಶ್ರೀಧರ್, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಗ್ರಾಮ ಕರಣೀಕೆ ಆಶಾಮೆಹಂದಲೆ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
