Sunday, February 1, 2026

ಲಾಕ್ ಡೌನ್: ಫಿತ್ರ್ ಝಕಾತ್ ನೀಡುವ ಬಗ್ಗೆ ಪ್ರಕಟನೆ ಹೊರಡಿಸಿದ ದ.ಕ. ಜಿಲ್ಲಾ ಖಾಝಿ

ಬಂಟ್ವಾಳ: ರಮಝಾನ್ ತಿಂಗಳ ಕೊನೆಯಲ್ಲಿ ನೀಡುವ ಫಿತ್ರ್ ಝಕಾತ್ (ಕಡ್ಡಾಯ ದಾನ) ಈ ಬಾರಿ ಹೇಗೆ ವಿತರಿಸಬಹುದು ಎಂಬ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ‌.

ರಮಝಾನ್ ತಿಂಗಳ ಕೊನೆಯ ದಿನ ರಾತ್ರಿ ಚಂದ್ರ ದರ್ಶನವಾಗಿ ಈದ್ ದಿನದ ಬೆಳಗ್ಗೆ ವಿಶೇಷ ಪ್ರಾರ್ಥನೆಗೆ ತೆರಳುವ ಮೊದಲು ಅರ್ಹರಿಗೆ ನೀಡಿ ಮುಗಿಸಬೇಕಾದ ಫಿತ್ರ್ ಝಕಾತ್ ಅನ್ನು ಈ ಬಾರಿ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಹೇಗೆ ನೀಡಬೇಕೆಂಬ ಸಂಶಯ ಮುಸ್ಲಿಮರಲ್ಲಿ ಇತ್ತು.

ಈ ಬಗ್ಗೆ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಫಿತ್ರ್ ಝಕಾತ್ ನೀಡುವ ನಿಯಮಗಳ ಬಗ್ಗೆ ಪ್ರಕಟನೆಯನ್ನು ಹೊರಡಿಸಿದ್ದಾರೆ‌.

1) ಫಿತ್ರ್ ಝಕಾತ್ ಅನ್ನು ರಮಝಾನ್ ತಿಂಗಳ ಪ್ರಾರಂಭದಿಂದಲೇ ನೀಡಬಹುದು. ಆದರೆ ಝಕಾತ್ ಸ್ವೀಕರಿಸಿದವನು ಹಬ್ಬದ ದಿನದ ವರೆಗೆ ಜೀವಂತವಾಗಿರಬೇಕು. ಹಾಗಾದರೆ ಮಾತ್ರ ಝಕಾತ್ ಸ್ವೀಕಾರಾರ್ಹವಾಗುತ್ತದೆ.

2) ಫಿತ್ರ್ ಝಕಾತ್ ಅನ್ನು ನೀಡಲು ಹಾಗೂ ಪಡೆಯಲು ತೊಡಕಾಗುವ ಲಾಕ್ ಡೌನ್ ಇರುವುದರಿಂದ ಫಿತ್ರ್ ಝಕಾತ್ ಅನ್ನು ವಿತರಿಸಲು ಶರೀಅತ್ ಗೆ ವಿರುದ್ಧವಾಗದಂತೆ ಝಕಾತ್ ನ ಸಾಮಗ್ರಿಗಳನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆಗಾಗಿ ಜಮಾಅತ್ ಸಮಿತಿಗಳು ರೂಪಿಸಬಹುದು.

3) ಮೇಲೆ ವಿವರಿಸಿದ ರೀತಿಯಲ್ಲಿ ವಿತರಿಸಲು ಸಾಧ್ಯವಾಗದಿದ್ದರೆ “ಫಿತ್ರ್ ಝಕಾತ್ ಅನ್ನು ಅದರ ಸಮಯಕ್ಕೆ ಮನೆಗೆ ಜನರು ಬಂದರೆ ನೀಡುವೆನು” ಎಂಬ ನಿಯ್ಯತ್ (ಸಂಕಲ್ಪ) ನೊಂದಿಗೆ ಝಕಾತ್ ನ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಇರಿಸಬೇಕು ಎಂದು ಖಾಝಿಯವರ ಪ್ರಕಟನೆ ತಿಳಿಸಿದೆ.

More from the blog

ಇಂದು ಕೇಂದ್ರ ಬಜೆಟ್ ಮಂಡನೆ..

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಇಂದು ಮಂಡಿಸಲಿದ್ದಾರೆ.ಸದನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡನೆ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...