ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅವರು ನಿನ್ನೆ ಸಂಜೆ ಮಂಗಳೂರಿನ ಸಿನೆಮಾ ಮಂದಿರದಲ್ಲಿ ಕಾಂತಾರ ಕನ್ನಡ ಚಲನಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಿದರು.


ಸಿನೆಮಾ ವೀಕ್ಷಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನು ಸಿನೆಮಾ ನೋಡದೆ ಬಹಳ ದಿನಗಳಾಗಿವೆ. ಕಾಂತಾರ ಸಿನೆಮಾ ಒಂದು ಪ್ರದೇಶದ ನಡೆ-ನುಡಿ, ಸಂಸ್ಕೃತಿ, ಆಚಾರ-ವಿಚಾರಗಳನ್ನೊಳಗೊಂಡು ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರವು ಯುವಕರಿಗೆ ಹೊಸ ಕತೆ ಹಾಗೂ ಹಿಂದಿನ ನಂಬಿಕೆಗಳನ್ನು ನೆನಪಿಸುತ್ತದೆ ಎಂದರು.
ಪತ್ನಿ ಡಾ.ಹೇಮಾವತಿ ಹೆಗ್ಗಡೆ, ಮೊಮ್ಮಗಳು ಮಾನ್ಯ ಸಹಿತ ಸಂಬಂಧಿಕರ ಜೊತೆ ಚಿತ್ರ ವೀಕ್ಷಣೆ ಮಾಡಿದ್ದು ಇವರಿಗೆ ಕಾಂತಾರ ಚಿತ್ರ ತಂಡ ಸಾಥ್ ನೀಡಿದೆ.












