Monday, January 26, 2026

ಸರ್ಕಾರದ ನೀತಿ ವಿರೋಧಿಸಿ ಕ್ವಾರಿ ಮತ್ತು ಕ್ರಷರ್ ಗಳನ್ನು ಸ್ಥಗಿತ ಗೊಳಿಸಲು ಮಾಲಕರ ನಿರ್ಧಾರ.

ಮಂಗಳೂರು: ಕರ್ನಾಟಕ ಉಪ ಖನಿಜ ರಿಯಾಯಿತಿ 1994 ನಿಯಮಗಳಲ್ಲಿರುವ ನ್ಯೂನ್ಯತೆಗಳು ಹಾಗೂ ಅದರಿಂದ ಗುತ್ತಿಗೆದಾರರಿಗೆ ಆಗುವ ತೊಂದರೆಗಳನ್ನು ಸರಿಪಡಿಸುವ ವರೆಗೆ ರಾಜ್ಯ ವ್ಯಾಪ್ತಿಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಗಳನ್ನು ಸ್ಥಗಿತಗೊಳಿಸಲು ಕರೆ ನೀಡಲಾಗಿದೆ ಎಂದು ದ.ಕ ,ಉಡುಪಿ ಸ್ಟೋನ್ ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ಮನೋಜ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಫೆಡರೇಷನ್ ಆಫ್ ಕರ್ನಾಟಕ ಕಾರಿ ಮತ್ತು ಸ್ಫೋಸ್ ಕ್ರಷರ್ ಓನರ್ ಅಸೋಷಿ ಯೇಷನ್ (ರಿ), ಬೆಂಗ ಳೂರು ಇದರ ವತಿಯಿಂದ ಇತ್ತೀಚೆಗೆ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಟೋನ್ ಕ್ರಷರ್ ಅಸೋಷಿಯೇಷನ್ ಸಭೆ ಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ ಎಂದು ಮನೋಜ್ ಶೆಟ್ಟಿ ತಿಳಿಸಿದ್ದಾರೆ.

ಸಂಘಟನೆ ಯಿಂದಸರಕಾರದ ಮುಂದಿಟ್ಟಿರುವ ಬೇಡಿಕೆಗಳು

ಕಳೆದ 40 ವರ್ಷಗಳಿಂದ ಸರ್ಕಾರವು ತನ್ನ ಕಾಮಗಾರಿಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಗುತ್ತಿಗೆದಾರರಿಗೆ ಬಿಲ್‌ಗಳನ್ನು ಪಾವತಿಸುವ ಸಮಯದಲ್ಲಿ ಕಟ್ಟಡದ ಕಲ್ಲಿನ ಸಾಮಗ್ರಿಗಳ ರಾಜಧನವನ್ನು ಕಡಿತಗೊಳಿಸಲು ಸರ್ಕಾರಿ ವೇದಾಸ್‌ (ವರ್ಕ್‌ ಎಕ್ಸಿಕ್ಯೂಟಿಂಗ್‌ ಡಿಪಾರ್ಟ್‌ ಮೆಂಟ್ ಮತ್ತು ಏಜೆನ್ಸಿಗಳು) ಗೆ ಅನುಮತಿ ನೀಡಿತು. ಇದು ಇಂದಿನ ವರೆಗೆ ಆಚರಣೆಯಲ್ಲಿದೆ. ಈಗ ಸರ್ಕಾರವು ಈಗಾಗಲೇ ಸಂಗ್ರಹಿಸಿರುವ ರಾಜಧನವನ್ನು ಪುನಹ: ಕ್ಯಾರಿ ಮಾಲೀಕರಿಗೆ ನೀಡುವಂತೆ ಬೇಡಿಕೆಗಳನ್ನು ಮುಂದಿಟ್ಟಿದೆ. ಇದು ಆಚರಣೆಗೆ ಬಂದಲ್ಲಿ ಕ್ವಾರಿ ಮಾಲೀಕರು ದಿವಾಳಿಯಾಗುತ್ತಾರೆ ಮತ್ತು ರೈತರಂತೆ ಆತ್ಮಹತ್ಯೆಗೆ ಕಾರಣವಾಗಬಹುದು ಎಂದು ಮನೋಜ್ ಶೆಟ್ಟಿ ತಿಳಿಸಿದ್ದಾರೆ.

ಕೆಜಿಎಫ್ ನಿಯಮಗಳಿಗೆ ತಿದ್ದುಪಡಿಗಳ ಪ್ರಕಾರ 

ಕಾನೂನು ಬದ್ಧವಾಗಿ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ನಡೆಸಲು,ಕೆ ಎಂಎಂಸಿಎಚ್ ನಿಯಮಗಳಲ್ಲಿ ತೀವ್ರ ಬದಲಾವಣೆಗಳ ಅಗತ್ಯವಿದೆ ಮತ್ತು ಇದನ್ನು ಉದ್ಯಮಗಳೊಂದಿಗೆ ಸಮಾಲೋಚಿಸಿ ಮಾಡಬೇಕು.

ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರಕ್ಕೆ ಗುತ್ತಿಗೆ ನೀಡಿರುವ ಬಗ್ಗೆ ಕೆಎಂಎಂಸಿ‌ಗೆ ಅಗತ್ಯವಾದ ತಿದ್ದುಪಡಿಗಳನ್ನು ತರದ ಕಎಸ್‌‌ಎಸ್‌ಸಿಗೆ ಗುತ್ತಿಗೆ ನೀಡುವ ಮೂಲಕ ಸರ್ಕಾರವು ದುಡುಕುತ್ತಿದೆ, ಇದು ಉದ್ಯಮಕ್ಕೆ ಮತ್ತು ಇಡೀ ರಾಜ್ಯದ ಅಭಿವೃದ್ಧಿಗೆ ಮಾರಕ.ಕೆಎಂಎಂಸಿಆರ್ ನಿಯಮಗಳಿಗೆ ತಿದ್ದುಪಡಿ ತರುವಲ್ಲಿವರೆಗೆ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಕೇಂದ್ರಕ್ಕೆ ನೀಡಿರುವ ಗುತ್ತಿಗೆಯನ್ನು ಸ್ಥಗಿತಗೊಳಿ ಸಬೇಕಾಗಿ ವಿನಂತಿಸುವುದಾಗಿ ಮನೋಜ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ದ.ಕ,ಉಡುಪಿ ಕ್ವಾರಿ ಮತ್ತು ಕ್ರಷರ್ ಮಾಲಕರ ಸಂಘದ ಪದಾಧಿಕಾರಿಗಳಾದ ಮೋಹನ್ ಅಮೀನ್, ಸಾಜು ನಿಲಿಯಾರ್,ಪ್ರಸಾದ್ ಮೇಲಂಟ, ಅಬ್ದುಲ್ ನಝೀರ್ ಮತ್ತು ಸರಕಾರಿ ಕಾಮಗಾರಿ ಗಳ ಗುತ್ತಿಗೆದಾರರರ ಸಂಘದ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್ ಕಾರ್ಯ ದರ್ಶಿ ಜಯಶೀಲ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...