ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗ ವ್ಯಾಪ್ತಿಗೆ ಒಳಪಟ್ಟ ಜಿನಭಜನಾ ಸೀಸನ್ ೬ರ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.


ಒಟ್ಟು ೯೧ ತಂಡಗಳು, ೫೧೦ ರ್ಸ್ಪಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯರ ವಿಭಾಗದಲ್ಲಿ ಬಜಗೋಳಿಯ ಅನಂತಶ್ರೀ ಭಜನಾ ತಂಡ ಪ್ರಥಮ,ಉಜಿರೆಯ ಶುಕ್ಲಾ ಜಿನಭಜನಾ ತಂಡ ಮತ್ತು ಶೃತ ಜಿನಭಜನಾ ತಂಡಗಳು ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಪಡೆದುಕೊಂಡವು.
ಕಿರಿಯರ ವಿಭಾಗದಲ್ಲಿ ಉಜಿರೆಯ ಬ್ರಾಹ್ಮರಿ ಜಿನಭಜನಾ ತಂಡ ಪ್ರಥಮ, ಹೊಸ್ಮಾರಿನ ಜ್ವಾಲಾಮಾಲಿನಿ ಜಿನಭಜನಾ ತಂಡ ದ್ವಿತೀಯ ಮಂಗಳೂರಿನ ಸಂಸ್ಕಾರ ಜಿನಭಜನಾ ತಂಡ ತೃತೀಯ ಸ್ಥಾನ ಪಡೆದು ಪ್ರಶಸ್ತಿ ಗಳಿಸಿತು.
ಬೆಳಗ್ಗೆ ಕಾರ್ಯಕ್ರಮವನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ.ಅನಿತಾ ಸುರೇಂದ್ರ ಕುಮಾರ್ ಉದ್ಘಾಟಿಸಿದರು. ಸಮಾರೋಪದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮತ್ತು ವಲಯಾಧ್ಯಕ್ಷ ಪುಷ್ಪರಾಜ್ ಜೈನ್ ಅವರು ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಶುಭ ಹಾರೈಸಿದರು.
ಭಾರತೀಯ ಜೈನ್ ಮಿಲನ್ ವಲಯ ಉಪಾಧ್ಯಕ್ಷ ಸುದರ್ಶನ ಜೈನ್ ಸಮಾರೋಪದ ಮಾತುಗಳನ್ನಾಡಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಅಖಿಲ ಕರ್ನಾಟಕ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೆ ಕೇಸರಿ ರತ್ನರಾಜಯ್ಯ, ಜಿನಭಜನೆ ಸ್ಪರ್ಧೆ ಸಂಯೋಜಕಿ ಸೋನಿಯಾ ಯಶೋವರ್ಮ, ಮಂಗಳೂರು ವಿಭಾಗ ನಿರ್ದೇಶಕ ಧನ್ಯಕುಮಾರ್ ರೈ, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಕಾರ್ಯದರ್ಶಿ ಮಧುಶ್ರೀ ಜಿತೇಶ್, ಪ್ರಮುಖರಾದ ಪೂರಣ್ ವರ್ಮಾ, ಶ್ವೇತಾ ಜೈನ್, ರಾಜವರ್ಮ ಆರಿಗ, ಸುನಿಲ್ ಕುಮಾರ್, ಡಾ. ಸುದೀಪ್ ಜೈನ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.












