ಸರ್ವರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಈ ಅಂಕಣವು ಇಪ್ಪತ್ತೈದನೇ ವಾರಕ್ಕೆ ತಲುಪಿದ ಸಂತಸವನ್ನೂ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಅದರೊಂದಿಗೆ ಮುಂದಿನ ವಾರದ ಲೇಖನ ಮುಂದಿನ ವರುಷ ಬರುವ ಕಾರಣ ಪ್ರತಿಯೊಬ್ಬ ಓದುಗರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳನ್ನೂ ಉಣಬಡಿಸುತ್ತಿರುವೆ.ಒಟ್ಟಾರೆ ಈ ವಾರ ಶುಭಾಶಯಗಳ ಸುರಿಮಳೆ!
ಜೀವನದಲ್ಲಿ ಹೊಸ ವರುಷಗಳು ಬರುತ್ತವೆ, ಹೋಗುತ್ತವೆ, ಆದರೆ ಮಲಗಲು ಬಿಡದಂಥ ಹೊಸ ಕನಸುಗಳನ್ನು ನಾವು ಕಟ್ಟಿಕೊಂಡು ಅವುಗಳ ಹಿಂದೆ ಓಡಬೇಕಾಗಿದೆ. ಹೊಸ ಕನಸುಗಳು, ಹೊಸ ಐಡಿಯಾಗಳು, ನವನವೀನ ಕಾರ್ಯಗಳಿಗೆ ಆಲೋಚನೆಗಳು ಇವು ಪ್ರತಿ ವರುಷವೂ ಹೊಸದಾದಾಗ ನಾವು ಹೊಸ ವರುಷ ಬರಲು ಸಂಭ್ರಮದಿಂದ ಕಾಯುತ್ತೇವೆ, ಹಾಗೇನೇ ಆ ವರುಷ ಕಳೆಯುವಾಗಲೂ ನಮಗೆ ನಮ್ಮ ಸಾಧನೆಯ ಬಗ್ಗೆ ಹೆಮ್ಮೆಯೆನಿಸುತ್ತದೆ! ಅದರ ಬದಲು ನನ್ನ ಈ ವರ್ಷದ ಸಾಧನೆ ಶೂನ್ಯವೆನಿಸಿದಾಗ ಬೇಸರವಾಗುವುದಿಲ್ಲವೇ?
ಸಾಧನೆ ಚಿಕ್ಕದಾದರೂ ಹೊಸದಾಗಿರಬೇಕು. ನಮ್ಮನ್ನು ನಾಲ್ಕು ಜನ ಗುರುತಿಸಬೇಕೆಂಬ ಬಯಕೆ ಮಾನವ ಸಹಜ ಗುಣ. ಹಾಗಾಗಲು ನಾವೇನು ಮಾಡಿದ್ದೇವೆ ಎಂಬುದೂ ಬೇಕಲ್ಲವೇ?
ಈ ಹೊಸ ವರುಷ 2019ಕ್ಕೆ ಹೊಸ ಯೋಜನೆಗಳನ್ನು ತಯಾರಿಸೋಣ. ನಮ್ಮ ಜೀವನವನ್ನು ನಾವೇ ಮೇಲೆತ್ತುವ ಕಾರ್ಯ ಮಾಡೋಣ. ಇತರರಿಗೆ ಸಾಧ್ಯವಾದರೆ ಸ್ವಲ್ಪ ಸಹಾಯ ಮಾಡೋಣ. ಇಲ್ಲದಿದ್ದರೆ ಸುಮ್ಮನಿರೋಣ. ಬೇರೆಯವರ ಮನ ನೋಯಿಸುವುದಿಲ್ಲ ಎಂಬ ಪಣ ತೊಡೋಣ. ಅಷ್ಟು ಸಾಕಲ್ಲವೇ ಹೊಸ ವರುಷದ ಪ್ಲಾನಿಂಗ್? ಸಂತಾಕ್ರೂಸರೂ ಖುಷಿ ಪಟ್ಟು ನಿಮಗೊಂದು ವರ ನೀಡಿ ಬಿಡಬಹುದು! ನೀವೇನಂತೀರಿ?



@ಪ್ರೇಮ್@
Feed back @ [email protected]