Wednesday, February 12, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-34

ಮತ್ತೆ ಬಂದಿದೆ ಲೋಕಸಭಾ ಚುನಾವಣೆ. ಸರಕಾರದ ಸೂತ್ರ ನಮ್ಮ ಕೈಲಿಲ್ಲ. ಆದರೆ ಮತದಾನ ಮಾಡಿ ನಾಯಕರನ್ನು, ಪಕ್ಷವನ್ನು ಆರಿಸುವ ಜವಾಬ್ದಾರಿ, ಕರ್ತವ್ಯ ನಮ್ಮದು. ನಮ್ಮ ಸಂವಿಧಾನದ ಪ್ರಕಾರ ಯಾವಾಗ ಏನು ಬೇಕಾದರೂ ಆಗಬಹುದು. ಅಂದರೆ ಗರಿಷ್ಠ ಮತಗಳು ಬಂದಿದ್ದರೂ ವಿಶ್ವಾಸ ಮತಗಳಿಕೆಯಲ್ಲಿ ವಿಫಲರಾದರೆ, ಸಮ್ಮಿಶ್ರ ಸರಕಾರ ಬರಬಹುದು, ಕರ್ನಾಟಕದಲ್ಲಿ ನಡೆದಂತೆ. ಆದರೆ ನಮಗೆ ಪಕ್ಷ ಮುಖ್ಯವಾಗಬಾರದು, ಬದಲಾಗಿ ನಾಯಕ ಮುಖ್ಯವಾಗಿರಬೇಕು. ನಮ್ಮ ಜನಪ್ರತಿನಿಧಿ ನಿಜವಾದ ಪ್ರಾತಿನಿಧ್ಯವನ್ನು ಮೆರೆವವ, ಕಲಿತವ, ತಿಳಿದವ, ನಮ್ಮ ಊರನ್ನು ಮುಂದೆ ತರುವವ, ತನ್ನ ಇರವನ್ನು ಪ್ರಜಾಸೇವೆಯಲ್ಲಿ ತೊಡಗಿಸಿಕೊಂಡವ ಆಗಿರಬೇಕು.
ಸಾಕಷ್ಟು ಹಣವಿರುವವ ಚುನಾವಣೆಯಲ್ಲಿ ನಾಯಕ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾನೆ ಎಂದಾದರೆ ಹಲವರು ಕುರಿಗಳಂತೆ ಅವನ ಹಿಂದೆ ಹಣಕ್ಕಾಗಿ ಸುತ್ತುತ್ತಿರುತ್ತಾರೆ! ಅವನಿಗೆ ಸಂಗಡಿಗರು ಹೆಚ್ಚಾಗಿರುತ್ತಾರೆ. ಹೆಂಡ, ಹಣಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳದೆ ನಿಜ ಜೀವನದಲ್ಲಿ ಹೀರೋಗಳಾದ ಕಷ್ಟಪಟ್ಟು ದುಡಿಯುವ, ಕಷ್ಟದ ಮಹತ್ವ ತಿಳಿದು ದೇಶವನ್ನು ಮುನ್ನಡೆಸುವವರನ್ನು ಆರಿಸೋಣ.
ಸರದಾರ್ ವಲ್ಲಭ ಬಾಯಿ ಪಟೇಲ್ ರಂಥ, ಲಾಲ್ ಬಹಾದ್ದೂರ್ ಶಾಸ್ತ್ರೀಜೀಯಂಥ ದಕ್ಷ ನಾಯಕರು ನಮಗೆ ಸಿಗಲಿ. ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದಾದ್ಯಂತ ಸಾರಲಿ, ಸೈನಿಕರನ್ನು ಕೊಂದ ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಬುದ್ಧಿ ಕಲಿಸುವ ನಾಯಕರು ಬರಲಿ, ಹಗರಣಗಳನ್ನು, ಬ್ಯಾಂಕ್ ಹಗಲು ದರೋಡೆ ಮಾಡಿದ ಖದೀಮರನ್ನು ಸೆರೆಮನೆಗೆ ತಳ್ಳಿ ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುವಂತಾಗಲಿ, ನಾವು ದುಡಿದ ಹಣಕ್ಕೆ ನಾವೇ ಸೇವಾ ತೆರಿಗೆ,ಇತರ ತೆರಿಗೆ ನೀಡಿ ಬ್ಯಾಂಕಿನವರಿಗಷ್ಟು ತಿನ್ನಿಸದೆ ನಮ್ಮ ಬೆವರಿನ ಹಣ ನಮ್ಮ ಮಕ್ಕಳನ್ನು ಸೇರುವಂತಾಗಲಿ. ಸಕಲ ರಾಷ್ಟ್ರಗಳೊಂದಿಗೆ ಸೌಹಾರ್ಧತೆ ಮೂಡಲಿ. ವಿಜ್ಞಾನ ತಂತ್ರಜ್ಞಾನ ಮತ್ತಷ್ಟು ಬೆಳೆಯಲಿ, ಭಾರತದ ಸಂಸ್ಕೃತಿ ಹಾಳಾಗದಿರಲಿ. ನಮ್ಮವರೇ ನಮ್ಮನ್ನಾಳಲಿ. ಮತ್ತೆ ದೇಶ ವಿದೇಶಿಯರ ಪಾಲಾಗದಿರಲಿ. ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುವ ನಾಯಕರನ್ನು ಸರ್ವರೂ ಸೇರಿ ಆರಿಸೋಣ, ನೀವೇನಂತೀರಿ?

 

@ಪ್ರೇಮ್@

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...