Wednesday, February 12, 2025

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-33

ನಮಗೆಲ್ಲಾ ತಿಳಿದಂತೆ ಹೃದಯ ನಡುಗುವ ಸುದ್ದಿ ತಿಳಿಯಿತು ಮೊನ್ನೆ. ಹಲವಾರು ವಾಹನಗಳಲ್ಲಿ ಭಾರತೀಯ ಯೋಧರು ಕಾಶ್ಮೀರಕ್ಕೆ ತೆರಳುವಾಗ ಭಯೋತ್ಪಾದಕರು ಒಂದು ಬಸ್ಸಿಗೆ ಗುಂಡಿಟ್ಟು ನಲವತ್ತ ನಾಲ್ಕು ಜನ ಭಾರತೀಯ ಯೋಧರು ಹುತಾತ್ಮರಾದರು. ಅಲ್ಲೊಂದು ಸಣ್ಣ ಡೌಟು. ರಾಜಕೀಯ ನಾಯಕರ ವಾಹನಗಳು ಬರುವಾಗ ಉಳಿದೆಲ್ಲಾ ವಾಹನಗಳನ್ನು ತಡೆಹಿಡಿಯುವ ಭದ್ರತಾ ಪಡೆ ಸೈನಿಕರ ವಾಹನ ಬರುವಾಗ ಭಯೋತ್ಪಾದಕರ ವಾಹನವನ್ನು ನುಸುಳಲು ಅವಕಾಶ ಮಾಡಿಕೊಟ್ಟದ್ದು ಏಕೆ, ಹೇಗೆ ಎಂಬುದು. ಅದೇನೇ ಇರಲಿ, ಅಧ್ರ ನೀರಲ್ಲಿ, ಚಳಿಯಲ್ಲಿ, ಕಲ್ಲು ಮುಳ್ಳುಗಳಲ್ಲಿ, ಕಾಡಲ್ಲಿ, ಆಹಾರ ನೀರಿಲ್ಲದೆ, ಸರಿಯಾದ ಬಟ್ಟೆ, ಶೂಗಳಿಲ್ಲದೆ, ಯುದ್ಧ ಸಾಮಾಗ್ರಿಗಳೂ ಇಲ್ಲದೆಯೂ ದೇಶಕ್ಕಾಗಿ ಹೋರಾಡುತ್ತಿರುವ, ತಮ್ಮ ಪ್ರಾಣವನ್ನೆ ಮುಡುಪಿಟ್ಟ, ತನ್ನ ವೈಯಕ್ತಿಕ ಸುಖವ ಬಲಿಕೊಟ್ಟ, ಯೋಧರಿಗಾಗಿ ಸರಕಾರ ಏನೋ ಮಾಡಿರಬಹುದು. ಪ್ರಜೆಗಳಾದ ನಾವು ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬಹುದು.
ಸರಕಾರ ಅದಕ್ಕಾಗಿ ಈಗ ಯೋಧರಿಗೆಂದೇ ದೆಹಲಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಖಾತೆಯೊಂದನ್ನು ತೆರೆದಿದೆ. ನಾವದಕ್ಕೆ ರೂ. ಒಂದನ್ನು ಕೂಡಾ ಹಾಕಬಹುದು. ಅದು ನೇರವಾಗಿ ಯೋಧರಿಗೆ ಸೇರುವುದು. ಅದರ ವಿಳಾಸ ಹೀಗಿದೆ.

A/C Name- Army Welfare Fund Battle Casualties
A/C No- 90552010165915

IFSC code- SYNB0009055

Address -South Extension Branch, New Delhi

ನಾವು ಭಾರತೀಯರು ಒಂದು ರೂಪಾಯಿಗಳಿಂದ ಪ್ರಾರಂಭಿಸಿ ಎಷ್ಟಾದರೂ ನಮ್ಮ ಕೈಲಾದಷ್ಟು ಸಹಾಯವನ್ನು ಯೋಧರಿಗೆ ಈ ಮೂಲಕ ಮಾಡುವ ಅವಕಾಶವಿದೆ. ಇದನ್ನು ಭಾರತೀಯರಾದ ನಾವು ಉಪಯೋಗಿಸಿಕೊಳ್ಳ ಬಹುದಾಗಿದೆ.
ಸರ್ವ ಜನರ ಹಿತ ಬಯಸುವ ನಾವು ಕಂಬನಿ ಮಿಡಿಯುತ್ತಿದ್ದೇವೆ, ಶಾಂತಿಗಾಗಿ ಪ್ರಾರ್ಥಿಸುತ್ತಿದ್ದೇವೆ. ಭಯೋತ್ಪಾದಕರ ಗುಂಪನ್ನು ಹೊರತಾಗಿ ಸಾಮಾನ್ಯ ಪ್ರಜೆಗಳು ಅವರು ಹಿಂದು,ಮುಸ್ಲಿಮ್, ಕ್ರಿಶ್ಚಿಯನ್,ಜೈನ, ಪಾರ್ಸಿ, ಬೌದ್ಧ ಯಾರೇ ಆಗಿರಲಿ, ಎಲ್ಲರೂ ತಮ್ಮ ಜೀವನದಲ್ಲಿ ಪ್ರೀತಿ, ಶಾಂತಿಯನ್ನೇ ಬಯಸುವರೇ ಹೊರತು ಕೊಲ್ಲುವುದನ್ನಲ್ಲ. ಪ್ರತಿಯೊಬ್ಬರೂ ಶಾಂತಿಯ ಬಯಸಿ, ಶಾಂತಿಯ ಜೀವನ ನಡೆಸಿದಲ್ಲಿ ರಕ್ತಪಾತಕ್ಕೆ ಅವಕಾಶವಿಲ್ಲ, ದೇಹಗಳು ಬಲಿಯಾಗಬೇಕಿಲ್ಲ ಅಲ್ಲವೇ? ನೀವೇನಂತೀರಿ?

@ಪ್ರೇಮ್@

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...