ಇಂದು ಎರಡು ವಿಶೇಷ. ಒಂದು ಜಗಜ್ಯೋತಿ ಬಸವಣ್ಣನವರ ಜಯಂತಿ. ಮತ್ತೊಂದು ಯಾವುದೇ ಕಾರ್ಯಕ್ರಮವನ್ನು ಪ್ರಾರಂಭಿಸಬಹುದಾದ ದಿನ ಅಕ್ಷಯ ತೃತೀಯಾ. ಈ ದಿನ ಯಾವುದೇ ಕಾರ್ಯಾರಂಭಕ್ಕೆ ಉತ್ತಮವಾದ ದಿನ. ಯಾರನ್ನೂ ಕೇಳದೆ ಪ್ರಾರಂಭಿಸಬಹುದಾದ ಒಳ್ಳೆಯ ದಿನ. ಹಾಗೆಯೇ ಮುಸ್ಲಿಮ್ ಬಾಂಧವರಿಗೆ ಪವಿತ್ರ ರಂಜಾನ್ ತಿಂಗಳ ಪ್ರಾರಂಭ. ಹಲವಾರು ಕಡೆ ಸುಗ್ಗಿಹಬ್ಬ. ಮದುವೆ, ಗೃಹಪ್ರವೇಶ, ಮಗುವಿನ ನಾಮಕರಣ, ಸೀಮಂತ, ಅಂಗಡಿ ಪ್ರಾರಂಭ, ಕಟ್ಟಡ ಉದ್ಘಾಟನೆ ಇವೆಲ್ಲ ಮಾಮೂಲಿ ಇದ್ದದ್ದೇ. ನೀವು ಹೊರಟು ರೆಡಿಯಾಗಲು ಮಾತ್ರ ಬಾಕಿ.
ದಿನಾಚರಣೆಗಳಾದ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ, ಗೃಹ ಪ್ರವೇಶದ ವಾರ್ಷಿಕೋತ್ಸವ, ಪೂಜೆ ಹೀಗೆ ದಿನಾಚರಣೆಗಳು, ಕಾರ್ಯಕ್ರಮಗಳು ಒಂದರ ಹಿಂದೊಂದು ಬರುತ್ತವೆ. ಬಂದ ಆಚರಣೆಗಳನ್ನು ಇತರರಿಗೆ ತೋರಿಸಲಿಕ್ಕಾಗಿ, ಆಡಂಬರಕ್ಕಾಗಿ ಅಲ್ಲ, ಬದಲಾಗಿ ನಮ್ಮ ಆತ್ಮ ಸಂತೋಷಕ್ಕಾಗಿ, ಸರಳವಾಗಿ ನಾವೇ ನಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚುವಂತೆ ಆಚರಿಸಿಕೊಳ್ಳೋಣ. ಆಡಂಬರ ಮಾಡಿ ಗುಂಡಿಗೆ ಬೀಳದಿರೋಣ. ನೀವೇನಂತೀರಿ?

@ಪ್ರೇಮ್@