ರಜೆಯ ಮಜಾ ಅನುಭವಿಸಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪೋಷಕರೇ..ಬೇಸಿಗೆ ಶಿಬಿರ ಒಂದೆರಡು ದಿನದ ಮಟ್ಟಿಗೆ ತೊಂದರೆಯಿಲ್ಲ, ಮಕ್ಕಳು ಎಷ್ಟು ಕಲಿತರೂ ನಮಗೆ ಸಾಲದು. ಕ್ರಾಫ್ಟ್, ಸಂಗೀತ, ನೃತ್ಯ, ವಾದ್ಯ, ತಬಲ, ಅಬಾಕಸ್, ಸ್ಪೆಲಿಂಗ್, ಬ್ರೈನ್ ಪವರ್..ಹೀಗೆ ಕ್ಲಾಸ್ ಗಳಿಗೆ ಲೆಕ್ಕವೇ ಇಲ್ಲ..ಮಕ್ಕಳಿಗೆ ಸ್ವಾತಂತ್ರ್ಯ, ಸ್ವತಂತ್ರವಾಗಿ ತನ್ನದೇ ದೃಷ್ಟಿಯಲ್ಲಿ ಪರಿಸರ ವೀಕ್ಷಸಲು, ಪರಿಸರದಲ್ಲಿನ ವಿಸ್ಮಯಗಳನ್ನು ತಿಳಿದುಕೊಳ್ಳಲು, ಹೋಗಲಿ ಹಗಲು ರಾತ್ರಿ ಹೇಗೆಂದು ತಿಳಿಯಲೂ ಕೂಡಾ ಯೂಟ್ಯೂಬ್ ಸರ್ಚ್ ಮಾಡಿಯೇ ತಿಳಿಯುವ ಕಾಲ ಬಂದಿದೆ.
ಮಕ್ಕಳನ್ನು ಕ್ಯೂರಿಯಾಸಿಟಿ ಇರುವ ಮಕ್ಕಳಾಗಲು, ಮಕ್ಕಳಾಗಿ ಯೋಚನೆ ಮಾಡಲು ಬಿಡಬೇಕೇ ಹೊರತು ನಮ್ಮ ತಲೆಯಲ್ಲಿರುವುದನ್ನೆಲ್ಲ ಅವರಿಗೆ ತುರುಕಿ ಅವರನ್ನು ಫ್ರಿಜ್ಗಳ ಹಾಗೆಯೋ ಶಾಪಿಂಗ್ ಮಾಲ್ ಗಳ ಹಾಗೆಯೋ ಇರಿಸಬಾರದು. ಅಲ್ಲಿ ಎಲ್ಲವೂ ಇದೆ. ಆದರೆ ನಮ್ಮ ಕೈಗೆಟಕುವ ದರದಲ್ಲಲ್ಲ, ಬದಲಾಗಿ ಆರೋಗ್ಯಕ್ಕೂ ಒಳ್ಳೆಯದಾದದ್ದು ಅದಲ್ಲ, ಶೋ ಮಾತ್ರ! ಮಕ್ಕಳು ಉಪಯುಕ್ತ , ಇತರರು ಅನುಕರಿಸುವಂಥವರಾಗಬೇಕೇ ಹೊರತು ಇತರರು ದೂರ ಇಡುವ ಸ್ವಭಾವದವರಾಗದಂತೆ ಇರಿಸಬೇಕು. ಅವರ ಆಲೋಚನೆಗಳಿಗೂ ಮಹತ್ವ ಅವಕಾಶ ಕೊಡುವಂತಾಗಬೇಕು. ಅವರಿಗೆ ಅವರ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಕ್ಕಿದಾಗ ಅವರು ಏನಾದರೂ ಸಾಧಿಸುವತ್ತ ಒಲವು ತೋರುತ್ತಾರೆ. ಆದರೆ ಬಲವಂತದಿಂದ ಎಲ್ಲವನ್ನೂ ಅವರೆಡೆಗೆ ತುರುಕಿದರೆ ಯಾವುದೇ ವಿಷಯದ ಬಗ್ಗೆ ಆಸಕ್ತಿ ಇರದೆ ಮೂಕರಾಗುತ್ತಾರೆ. ಎಗರಾಡುತ್ತಾರೆ, ಕಿರುಚಾಡುತ್ತಾರೆ. ತಮ್ಮ ಅಸಹಾಯಕತೆ ಹಾಗೂ ಅತೃಪ್ತಿಯನ್ನು ಎಲ್ಲಾ ಕಡೆ ಕಕ್ಕುತ್ತಾರೆ.
ಆದಕಾರಣ ಅವರಿಗೂ ಸ್ವಾತಂತ್ರ್ಯ ಸಿಗಲಿ. ಮಾನಸಿಕವಾಗಿ, ದೈಹಿಕವಾಗಿ ಅವರು ಸ್ವತಂತ್ರರಾಗಲು ಬಿಡೋಣ. ನೀವೇನಂತೀರಿ?

@ಪ್ರೇಮ್@