ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಯುವಕರು ಈಜಾಟ, ನೀರಾಟ ಆಡುವ ಮೂಲಕ ಸಾಹಸ ಪ್ರದರ್ಶನಕ್ಕೆ ಮುಂದಾಗುತ್ತಿದ್ದ ಕ್ಷಣ ಕಂಡು ಬಂತು.

ನೇತ್ರಾವತಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು, ಯಾವುದೇ ಹಂತದಲ್ಲಿ ಅಪಾಯ ಸಂಭವಿಸುವ ಲಕ್ಷಣಗಳು ಕಂಡು ಬರುತ್ತಿದೆ. ಈ ನಡುವೆ ಸ್ಥಳೀಯ ಈಜುಪಟು ಯುವಕರು ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ನೇರವಾಗಿ ನೇತ್ರಾವತಿಯ ತುಂಬಿ ಹರಿಯುತ್ತಿರುವ ನೀರಿಗೆ ಧುಕುತ್ತಿರುವ ಭಯಾನಕ ದೃಶ್ಯದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಸೇತುವೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದರಿಂದ ಉಳಿದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರ ಎದುರಿನಲ್ಲಿಯೇ ನೀರಿಗೆ ಹಾರುವ ದೃಶ್ಯಕಂಡು ಬಂತು.