Thursday, January 29, 2026

ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ನ್ನು ಉದ್ಘಾಟಿಸಿದ ರೇಯ್ಮಂಡ್ ಡಿ ಸೋಜ

ಮಡಂತ್ಯಾರು : ಇಂದಿನ ಯುವಕರು ತಮ್ಮ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಉತ್ತಮ ಆರೋಗ್ಯ ಹೊಂದಿದ್ದರೆ ದೇಹಕ್ಕೆ, ಮನಸಿಗೆ ನೆಮ್ಮದಿ ದೊರಕುವುದು ಮತ್ತು ಜಿಮ್ ಗಳಿಗೆ ತೆರಳುವುದರಿಂದ ದುಶ್ಚಟಗಳಿಂದ ದೂರವಾಗಬಹುದು ಎಂದು ಸೇಕ್ರೆಡ್ ಹಾರ್ಟ್ ಅರ್ನಾಲ್ಡ್ ಮಲ್ಟಿ ಜಿಮ್ ಉದ್ಘಾಟಿಸಿದ ಭಾರತದ ಮೊದಲ “ಮಿಸ್ಟರ್ ವರ್ಲ್ಡ್”  ರೇಯ್ಮಂಡ್ ಡಿಸೋಜ ಹೇಳಿದರು.

ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ಸುಸಜ್ಜಿತ ಒಳಕ್ರೀಡಾಂಗಣವು ಈಗಾಗಲೇ ಬ್ಯಾಡ್ಮಿಂಟನ್ , ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್ ಮುಂತಾದ ಸೇವೆಗಳನ್ನು ನೀಡುತ್ತಿದ್ದು ಈಗ ಮಲ್ಟಿ ಜಿಮ್ ಉದ್ಘಾಟನೆಯಾಗುವ ಮೂಲಕ ಸಂಸ್ಥೆಗೆ ಮತ್ತೊಂದು ಗರಿ ಲಭಿಸಿದೆ ಎಂದು ಸಂಸ್ಥೆಯ ಸಂಚಾಲಕರಾದ ರೆ ಫಾ ಬೇಸಿಲ್ ವಾಸ್ ರವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಸಂಸ್ಥೆಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಪ್ರೋತ್ಸಾಹಕರಾದ ಬಿಗ್ ಬ್ರದರ್ ಲೇನ್ಸಿ ಪಿಂಟೋ, ತಾಲೂಕ ಪಂಚಾಯತ್ ಸದಸ್ಯ ಜೋಯಲ್ ಮೆಂಡೋನ್ಸ ,ಜಿಮ್ ತರಬೇತುದಾರ ಮತ್ತು ಅರ್ನಾಲ್ಡ್ ಜಿಮ್ ನ ಮಾಲೀಕರಾದ ರೋನಾಲ್ಡ್ ಡಿಸೋಜ , ರಾಷ್ಟ್ರ ಮಟ್ಟದ ಕಬಡ್ಡಿ ತೀರ್ಪುಗಾರ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಫ್ರಾನ್ಸಿಸ್ ವಿವಿ ,ಹಾಗೂ ಸಾಮಾಜಿಕ ದುರಿಣರು ಹಾಗೂ ಅತ್ಯಂತ ಖ್ಯಾತಿಯ ತೀರ್ಪುಗಾರ ಸಂಜೀವ್ ಶೆಟ್ಟಿ ಮುಗೆರೋಡಿ ,ನಿಸರ್ಗ ಸ್ಟುಡಿಯೋಸ್ ಮತ್ತು ವೀಡಿಯೊಸ್ ನ ಮಾಲೀಕ ಸುಬ್ರಹ್ಮಣ್ಯ, ಅಬ್ದುಲ್ ರಹೆಮಾನ್ ಪಡ್ಪು, ಜಿಮ್ನಲ್ಲಿ ಅಸಕ್ತಿಯಿದ್ದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ಜೋಸೆಫ್ ಎನ್ ಎಂ ರವರು ಆಗಮಿಸಿದ ಎಲ್ಲರಿಗೂ ಸ್ವಾಗತಿಸಿದರು ಮತ್ತು ಗ್ರಾಮೀಣ ಮಟ್ಟದಿಂದ ಸಾಗಿ ಇಂದು ಜಿಮ್ ನಲ್ಲಿ ಭಾರತದ ಮೊದಲ ಪುರುಷ ವಿಶ್ವ ವಿಜೇತ ರಾದ ರೇಮನ್ಡ್ ರ ಸಾಧನೆಯನ್ನು ಹೊಗಳಿದರು ಹಾಗೂ ಇನ್ನೂ ಅನೇಕ ಪ್ರತಿಭೆಗಳು ಮುಂದೆ ಇಂತಹ ಸಾಧನೆ ಮಾಡಬೇಕು ಎಂದು ಹೇಳಿದರು.ಉಪಸ್ಥಿತರಿದ್ದ ಎಲ್ಲರಿಗೂ ದೈಹಿಕ ಶಿಕ್ಷಕರಾದ ಪ್ರಕಾಶ್ ಡಿಸೋಜ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮವನ್ನು  ನೆಲ್ಸನ್ ಮೋನಿಸ್ ನಿರೂಪಿಸಿದರು

More from the blog

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...