Monday, February 10, 2025

ಜೇಸಿಐ ಜೋಡುಮಾರ್ಗ ನೇತ್ರಾವತಿಯಿಂದ ಪರಿಸರ ದಿನಾಚರಣೆ

 

ಬಂಟ್ವಾಳ: ಜನರಲ್ಲಿ ಮರ ಗಿಡಗಳನ್ನು ಬೆಳೆಸುವದರ ಬಗ್ಗೆ ಜಾಗೃತಿ ಮತ್ತು ಜಾಗತಿಕ ತಾಪಮಾನ, ಮಾಲಿನ್ಯ ತಡೆಗಟ್ಟಲು ಪರಿಸರ ದಿನಾಚರಣೆಯನ್ನು ಆಚರಿಸುವುದು ಒಂದು ಉತ್ತಮ ಮಾರ್ಗ, ಹಸಿರು ಉಳಿಸಿ ಬೆಳೆಸುವುದರ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಯವರು ಒಂದು ಉತ್ತಮ ವಾತಾವರಣದಲ್ಲಿ ಬದುಕಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಸ್. ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪಾಂಡುರಂಗ ನಾಯಕ್ ರವರು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬಿ.ಸಿ.ರೋಡಿನ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಆವರಣದಲ್ಲಿ ಮಾವು, ಚಿಕ್ಕು, ಬಿಲ್ವಪತ್ರೆ ಗಿಡಗಳನ್ನು ನೆಟ್ಟು ಅದಕ್ಕೆ ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಟಾಚಾರಕ್ಕೆ ಗಿಡನೆಡುವುದರ ಬದಲು ಅವುಗಳನ್ನು ಪೋಷಿಸಿ ಬೆಳೆಸಿ ಅವುಗಳಿಗೆ ಪ್ರತೀ ವರ್ಷ ಹುಟ್ಟು ಹಬ್ಬ ಆಚರಿಸುವುದರ ಮೂಲಕ ಪರಿಸರ ಕಾಳಜಿ ತೋರಿಸಿ ಇತರರಿಗೆ ಮಾದರಿಯಾಗಬೇಕೆಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೇಸಿ ಘಟಕದ ಪೂರ್ವಾಧ್ಯಕ್ಷರೂ ಶಿಕ್ಷಕರೂ ಆಗಿರುವಂತಹ ಶ್ರೀ ರಾಮಚಂದ್ರ ರಾವ್ ರವರು ತಿಳಿಸಿದರು.
ಪತ್ರಕರ್ತರಾದ ಶ್ರೀ ಹರೀಶ್ ಮಾಂಬಾಡಿ, ಜೇಸಿ ಅಧ್ಯಕ್ಷ ಹರ್ಷರಾಜ್ ಸಿ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಉಪಾಧ್ಯಕ್ಷರಾದ ಜಯರಾಜ್ ಬಂಗೇರ, ಧೀರಜ್ ಹೆಚ್, ನಿರ್ದೇಶಕರಾದ ಸುಧಾಕರ್ ವೈ, ಖಜಾಂಚಿ ಹರಿಶ್ಚಂದ್ರ ಆಳ್ವ, ಸದಸ್ಯರುಗಳಾದ ಶ್ರೀನಿಧಿ ಭಟ್, ಕೃಷ್ಣರಾಜ್ ರಾವ್, ಸುಬ್ರಹ್ಮಣ್ಯ ರಾವ್, ಜೇಜೇಸಿಗಳಾದ ವರುಣ್ ರಾಜ್, ಆದಿತ್ಯ, ತನಿಷ್ಕಾ ಉಪಸ್ಥಿತರಿದ್ದು ಪರಿಸರ ಉಳಿಸುವ ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

 

More from the blog

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...

ಪಣೋಲಿಬೈಲು ಕ್ಷೇತ್ರದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ & ಕೋಲ ಸೇವೆ ಇಲ್ಲ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ನಂದಾವರ ಶ್ರೀ ವಿನಾಯಕ ಶಂಕರ...