ವಿಟ್ಲ : ವಿಟ್ಲ ಜೇಸಿಐ ಸಪ್ತಾಹವವನ್ನು ಸೋಮವಾರ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ದಿನಾಚರಣೆಯ ಹೆಸರಲ್ಲಿ ಉದ್ಘಾಟಿಸಲಾಯಿತು.
ಜೇಸಿಐ ವಲಯ ಉಪಾಧ್ಯಕ್ಷ ಉದಯ ಕ್ರಾಸ್ತಾ ಉದ್ಘಾಟಿಸಿ, ಮಾತನಾಡಿ, ಜೇಸಿಐಯ ಆಂದೋಲನ ಶಾಲೆಗಳಲ್ಲಿ ನಡೆಯುತ್ತಿರುವುದು ಹೆಚ್ಚು. ಯುವಜನತೆ ತೊಡಗಿಸಿ ಕೊಳ್ಳುವುದಕ್ಕೆ ಇದು ಪ್ರೇರಣೆಯಾಗುತ್ತದೆ ಎಂದರು.
ವಿಟ್ಲ ಜೇಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ಶಂಕರ ಪಾಟಾಳಿ, ನಾರ್ಶ ಸರಕಾರಿ ಪ.ಪೂ ಕಾಲೇಜಿನ ಸಹಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ, ಜೇಸಿಐ ಆಡಳಿತ ವಿಭಾಗದ ನಿರ್ದೇಶಕ ಪ್ರಶಾಂತ್ ರೈ, ವಲಯಾಧಿಕಾರಿ ಬಾಬು ಕೆ.ವಿ., ಕಾಲೇಜಿನ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಜ್ಯೋತಿ ಪಿ., ಡಾ.ಶ್ರೀಜಾ ಮತ್ತಿತರರು ಭಾಗವಹಿಸಿದ್ದರು.
ಮಾಜಿ ಅಧ್ಯಕ್ಷ ಮೋಹನ ಎ., ಐಪಿಪಿ ಸೋಮಶೇಖರ್, ಕಾರ್ಯದರ್ಶಿ ಸಂದೀಪ್, ಸಪ್ತಾಹ ನಿರ್ದೇಶಕ ಆರ್ತಿಕ್ ಪಿ., ಜೇಸಿರೆಟ್ ಅಧ್ಯಕ್ಷೆ ಮಲ್ಲಿಕಾ, ಶಿವಾನಿ ರೈ ಮತ್ತಿತರರು ಉಪಸ್ಥಿತರಿದ್ದರು.














