Wednesday, July 16, 2025

ನಾವೂರ: ಜೆ‌.ಸಿ.ಸಪ್ತಾಹಕ್ಕೆ ಚಾಲನೆ

ಜೆ ಸಿ ಐ ಬಂಟ್ವಾಳ ಇದರ ಜೆ ಸಿ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜರಗಿತು.

ನಾವೂರು ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಜೀವನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೆ ಸಿ ಐ ಬಂಟ್ವಾಳ ದ ಈ ಕಾರ್ಯಕ್ರಮ ತುಂಬಾ ಪ್ರಶಂಸನೀಯ ಎಂದರು. ಕೊರೋನ ಸಂಕಷ್ಟದ ಸಮಯದಲ್ಲಿ ಕೂಡ ಜೆ ಸಿ ಐ ಬಂಟ್ವಾಳ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಉಚಿತ ಹೊಕ್ಸಿಮೀಟರ್ ನೀಡಿ ಸಹಕರಿಸಿದ್ದನ್ನು ಅವರು ಸ್ಮರಿಸಿದರು.

ಜೆ ಸಿ ಐ ಬಂಟ್ವಾಳ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಬಿ ಉಮೇಶ್ ಕುಲಾಲ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ದೇಶಕರಾದ ನ್ಯಾಯವಾದಿ ಸುರೇಶ್ ನಾವೂರ್, ವೈದ್ಯದಿಕಾರಿ ಜೀವನ್ ಶೆಟ್ಟಿ ಯವರನ್ನು ಕೊರೋನ ಸಮಯದ ಸೇವೆಯನ್ನು ಗೌರವಿಸಿ ಸನ್ಮಾನಿಸಿ ದರು, ಈ ಸಂದರ್ಭದಲ್ಲಿ ವಲಯಧಿಕಾರಿ ಯತೀಶ್ ಕರ್ಕೇರ, ಪೂರ್ವಧ್ಯಕ್ಷರಾದ ಸಂತೋಷ್ ಜೈನ್, ಲೋಕೇಶ್ ಸುವರ್ಣ, ಸಂದೀಪ್ ಸಾಲ್ಯಾನ್, ಸದಾನಂದ ಬಂಗೇರ, ಸದಸ್ಯರಾದ ಮನೋಜ್ ಕನಪಾಡಿ, ವಿದ್ಯಾ ಉಮೇಶ್ ಹಾಗು ಇತರರು ಉಪಸ್ಥಿತರಿದ್ದರು.

ಆಸ್ಪತ್ರೆ ಮೇಲ್ವಿಚಾರಕಿ ಚಂದ್ರಪ್ರಭಾ ಸ್ವಾಗತಿಸಿ, ಸಿಸ್ಟರ್ ಮೀನಾಕ್ಷಿ ವಂದಿಸಿದರು.

,ಕಾರ್ಯದರ್ಶಿ ರೋಷನ್ ರೈ ಕಾರ್ಯಕ್ರಮ ನಿರೂಪಿಸಿದರು.

More from the blog

ಗೋಳ್ತಮಜಲು : ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಅವಿರೋಧ ಆಯ್ಕೆ..

ಬಂಟ್ವಾಳ : ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆಯ 2025-26 ರ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಗೋಳ್ತಮಜಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಾ ಮ್ಯಾನೇಜಿಂಗ್...

ನೇರಳಕಟ್ಟೆ : ಸರಕಾರಿ ಶಾಲಾ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನೆ..

ಬಂಟ್ವಾಳ : ನೇರಳಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್. ಅನುದಾನ ಹಾಗೂ ಎನ್.ಎಮ್.ಪಿ.ಎ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ...

ಬಿ. ಸಿ. ರೋಡ್ ನಲ್ಲಿ ತೆಂಗು ಬೆಳೆ ಮಾಹಿತಿ ಸಂವಾದ

ಬಂಟ್ವಾಳ: ತೆಂಗು ಬೆಳೆಯ ಸೂಕ್ಷ್ಮತೆಯನ್ನು ತಿಳಿದುಕೊಳ್ಳಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತೆಂಗು ಬೆಳೆಗಾರ ಕೊಂಡಾಣ ಚಂದ್ರಶೇಖರ ಗಟ್ಟಿ ಹೇಳಿದರು. ಅವರು ಜು. 15ರಂದು ಬಿ ಸಿ ರೋಡ್ ರಂಗೋಲಿ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ...

ಅರಣ್ಯ ಗಸ್ತುಪಾಲಕ ಜಿತೇಶ್.ಪಿ.ಗೆ ಮುಖ್ಯಮಂತ್ರಿ ಪದಕ

ಮಂಗಳೂರು:  ಅರಣ್ಯ ಇಲಾಖೆಯ ಬಂಟ್ವಾಳ ವಲಯದ ಗಸ್ತುಪಾಲಕ ಜಿತೇಶ್.ಪಿ ಅವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆ. ಇವರು ಸುಮಾರು 20 ವರ್ಷಗಳಿಂದ ಪಂಜ, ಮಂಗಳೂರು, ಬಂಟ್ವಾಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಂಟ್ವಾಳ...