ಪೆರಾಜೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವರ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 15ರಂದು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಬೆಳಗ್ಗೆ ಗಣಪತಿ ಹವನ ಹಾಗೂ ವಿವಿಧ ವೈದಿಕ ಹೋಮಗಳು ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ಹಾಗೂ ಸಂಜೆ 6 ಗಂಟೆಗೆ ರಕ್ತೇಶ್ವರಿ ತಂಬಿಲ, ಭಜನೆ,ಶ್ರೀ ವಿಷ್ಣುಮೂರ್ತಿ ದೇವರಿಗೆ ಸಾರ್ವಜನಿಕ ಮಹಾ ರಂಗ ಪೂಜೆ ಬಳಿಕ ಕ್ಷೇತ್ರಪಾಲ ದೈವ ರಕ್ತೇಶ್ವರಿ ಗೆ ನೇಮ ನಡೆಯಲಿದೆ.
ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಅಧಿಕಾರಿಗಳು, ಜೀರ್ಣೋದ್ದಾರ ಸಮಿತಿಯವರು ಹಾಗೂ ಪೆರಾಜೆ ಗ್ರಾಮಸ್ಥರ ಪ್ರಕಟನೆ ತಿಳಿಸಿದೆ.