ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ ‘ಬಾರೆಬೆಟ್ಟು ಮಂಟಮೆ’ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು.


ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ ದೈವದ ಒಲಸರಿ ಮತ್ತು ಹರಿಕೆ ನೇಮೋತ್ಸವವು ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗತರಂಗ ಕಲಾವಿದರು ಕಾಪು ಇವರಿಂದ ತುಳು ಹಾಸ್ಯಮಯ ನಾಟಕ “ಒರಿಯೆ” ಪ್ರದರ್ಶನವಾಯಿತು.
ತದನಂತರ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶ್ರೀಧಾಮ ಮಾಣಿಲ ಇವರಿಂದ ‘ಚಕ್ರವ್ಯೂಹ- ಕರ್ಣ ಪರ್ವ ಪ್ರಸಂಗದ ಆಖ್ಯಾನ ಪ್ರದರ್ಶನಗೊಂಡಿತು.