Friday, June 27, 2025

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿ.ಸಿ.ರೋಡಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಜಾಥ

ಬಂಟ್ವಾಳ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನಸೌಧ ಬಳಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆ ಜಾಥಕ್ಕೆ ಭಾನುವಾರ ಮಧ್ಯಾಹ್ನ ಚಾಲನೆ ನೀಡಲಾಯಿತು.

ಈ ಸಂದರ್ಭ ಸುದ್ದಿಗಾರರೊಂದೊಗೆ ಮಾತನಾಡಿದ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪ. ಜಾತಿ ,ಪಂಗಡದವರ ಮತ್ತು ಇತರ ಸಮುದಾಯದ ಕಲೋನಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ‘ರಸ್ತೆ ಸಂಪರ್ಕ ಸಹಿತ ಇತರ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಈ ಕಾಲ್ನಡಿಗೆ ಜಾಥ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ನಮ್ಮ ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ನೀಡಲಾಗುವುದು, ನಮ್ಮ ಯಾವ ಬೇಡಿಕೆಗೂ ಜಿಲ್ಲಾಧಿಕಾರಿಯಾಗಲಿ,ಜಿಲ್ಲೆಯ ಜನಪ್ರತಿನಿಧಿಗಳ್ಯಾರು ಈವರೆಗೂ ಸ್ಪಂದಿಸದಿದ್ದು, ಈ ಪ್ರತಿಭಟನೆಗೂ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಂಬರುವ ತಾ.ಪಂ.,ಜಿಪಂ.ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೆವೆ  ಎಂದವರು ತಿಳಿಸಿದರು.

ಸಮಿತಿ ಪ್ರಮುಖರಾದ ನಾಗೇಶ್ ಮಂಜನಾಡಿ,ಶ್ರೀಧರ ಮಂಜನಾಡಿ,ಸಂಜೀವ ಹೆಗ್ಗಡೆಕೋಡಿ, ಮಂಜನಾಡಿ ಸಂಜೀವ ಹೆಗಡಕೋಡಿ ಜಗದೀಶ್ ಮಂಜನಾಡಿ, ಎಂಆರ್.ಗೋಪಾಲ್ ಸಹಿತ ಐವತ್ತಕ್ಕು ಹೆಚ್ಚು ಮಂದಿ ಕಾಲ್ನಡಿಗೆ ಜಾಥದಲ್ಲಿದ್ದರು.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...