ವಿಟ್ಲ: ಜೆಸಿಐ ವಿಟ್ಲ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿಟ್ಲ ನಾಡಕಚೇರಿಯಿಂದ ಕಾಲ್ನಡಿಗೆ ಜಾಥಾ “ರನ್ ಫಾರ್ ನೈನ್” ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ Region-G ವಲಯ ಉಪಾಧ್ಯಕ್ಷರಾದ JC. Royan Crasta ಅವರು ಚಾಲನೆ ನೀಡಿದರು. ಬಳಿಕ ಸ್ತ್ರೀಯರ ಮಾಸಿಕ ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳ ಕುರಿತಾಗಿ ಅರಿವು ಮೂಡಿಸುವ ಬಗ್ಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು Ln.Dr. ಗಾಯತ್ರಿ ಜಿ. ಪ್ರಕಾಶ್ ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು JFM ಬಾಲಕೃಷ್ಣ ವಿಟ್ಲ ವಹಿಸಿದ್ದರು. ಈ ಸಂಧರ್ಭದಲ್ಲಿ ವಲಯಾಧಿಕಾರಿಯಾದ JC ಬಾಬು ಕೆ. ವಿ.,Jcrt ಅಧ್ಯಕ್ಷೆ ಮಲ್ಲಿಕಾ B.S., ಲಯನ್ಸ್ ಕ್ಲಬ್ ಅಧ್ಯಕ್ಷೆ Ln. ವಿ. ಜಯ, JC ಮರಿಯಾ ಜ್ಯೋತಿ, ಪೂರ್ವಾಧ್ಯಕ್ಷರುಗಳಾದ JC ಅಣ್ಣಪ್ಪ ಸಾಸ್ತಾನ, JC.ರಮೇಶ್ B.K., JC.ಸಂಜೀವ M., JC ಲೂಯಿಸ್, JC. ಚಂದ್ರಹಾಸ, Jcrt ಶಿವಾನಿ ಬಿ. ಶೆಟ್ಟಿ, Jcrt ಉಷಾ ದಿನೇಶ್,Jcrt ಮಮತಾ ಸಂಜೀವ, Jcrt ಅಭಿಜ್ಞಾ J.Rai, B.C.M.C. ಹಾಸ್ಟೆಲ್ ನ ಮೇಲ್ವಿಚಾರಕಿಯಾದ ಭವಾನಿ ಮತ್ತು JCI ನ ಎಲ್ಲಾ ಸದಸ್ಯರು, ವಿದ್ಯಾರ್ಥಿನಿಯರು ಭಾಗವಹಿಸಿದರು.

