ಬಂಟ್ವಾಳ : ಮಾಜಿ ಸಚಿವ ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇವರ ವತಿಯಿಂದ ಪೂಜಿಸುವ 16 ನೇ ವರ್ಷದ ಗಣೇಶನ ವಿಸರ್ಜನಾ ಶೋಭಾಯಾತ್ರೆ ಬಹಳ ಅದ್ದೂರಿಯಾಗಿ ನೆಡೆಯಿತು.

8.30 ರ ವೇಳೆ ಗಣಪನನಿಗೆ ವಿಸರ್ಜನಾ ಪೂಜೆ ನಡೆದ ಬಳಿಕ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆಯಲ್ಲಿ ಹುಲಿ ವೇಷ, ವಿವಿಧ ಅಪಕರ್ಷಣ ಟ್ಯಾಬ್ಲೋಗಳು, ನಾಸಿಕ್ ಬ್ಯಾಂಡ್ , ತಾಲೀಮು ಮೆರವಣಿಗೆಯಲ್ಲಿ ಸಾಗಿದವು.
ದಕ್ಷ ಪ್ರಮಾಣಿಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ರಾಜೀನಾಮೆ ಬಹಳ ನೋವು ತಂದಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ಬಂಟ್ವಾಳ ಇವರ ವತಿಯಿಂದ ಪೂಜಿಸುವ 16 ನೇ ವರ್ಷದ ಗಣಪತಿ ಶೋಭಾಯಾತ್ರೆಯ ವಿಸರ್ಜನಾ ಪೂಜೆಯ ಸಭಾ ಕಾರ್ಯಕ್ರಮದ ವೇಳೆ ತಿಳಿಸಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಪ್ರತಿಯೊಂದು ಅಂಗವೂ ಬಲಿಷ್ಠ ವಾಗಿ ಉಳಿಯಬೇಕು, ಆರ್ಥಿಕ ವ್ಯವಸ್ಥೆಯೂ ಹಾಳಾಗಬಾರದು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅವರು ಈ ಸಂದರ್ಭದಲ್ಲಿ ಹೇಳಿದರು.
