Tuesday, February 11, 2025

ಸಜೀಪಮೂಡದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಗ್ರಾಮ ಸಭೆ

ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಲ, ಕೊಲಕೆ, ಸಜೀಪಮೂಡದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಗ್ರಾಮ ಸಭೆಯು ನಡೆಯಿತು.
ಸಭೆಯ ಪ್ರಾರಂಭವನ್ನು ಅರ್ಚಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ಸುಬ್ರಮಣ್ಯ ಭಟ್ ಇವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮದ ಶುಭಾರಂಭವನ್ನು ಮಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ಪರಿಚಯವನ್ನು ಮಂಗಳೂರು ನಗರದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಪ್ರಭಾಕರ್ ನಾಯಕ್ ಇವರು ಮಾಡಿದರು.
“ಸಮಾಜಿಕ ದುಷ್ಪಪ್ರವೃತ್ತಿಯನ್ನು‌ ಹೋಗಲಾಡಿಸಲು ವಿಶ್ವವನ್ನು ವಸುಧೈವ ಕುಟುಂಬಕಂ ಎನ್ನುವ ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ”
 -ಶ್ರೀ. ಚಂದ್ರಮೊಗೇರ್, ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕರು 
ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಚಂದ್ರಮೊಗೇರ್ ಇವರು ಮಾತನಾಡಿ ” ಭಾರತ ಸ್ವಯಂಭೂ ಹಿಂದೂ ರಾಷ್ಟ್ರವಾಗಿದೆ. ಮಾತ್ರವಲ್ಲದೇ ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥಾಯ್ಲಾಂಡ್,ಮಲೇಷಿಯಾ, ಮತ್ತು ವಿಯೆಟ್ನಾಂ ಇತ್ಯಾದಿ ದೇಶಗಳಲ್ಲಿ ಈಗಲೂ ಕೂಡಾ ಹಿಂದೂ ಸಂಸ್ಕೃತಿಯ ಪುರಾವೆ ಇದೆ. ಹೀಗಿರುವಾಗಲೂ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ತಡವೇಕೆ?. ಇಂದು ಹಿಂದೂಗಳ ಮೇಲೆ ಅನ್ಯಾಯ ಮಾಡಲಾಗುತ್ತಿದೆ.ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ ಮಾಡಲಾಯಿತು. ಅಷ್ಟೇ ಅಲ್ಲದೇ ಹಿಂದೂ ದೇವಸ್ಥಾನಗಳನ್ನು ಸರ್ಕಾರೀಕರಣ ಎಂಬ ನೆಪದಲ್ಲಿ ಭಕ್ತರು ನೀಡಿದ ಹಣವು ಭ್ರಷ್ಟ ರಾಜಕಾರಣಿಗಳು ಜೇಬನ್ನು ತುಂಬುತ್ತಿದೆ ಮತ್ತು ಇದು ಹಿಂದೂ ದೇವಾಲಯಗಳನ್ನು‌ ಕೊಳ್ಳೆ ಹೊಡೆಯುತ್ತಿದೆ. ಅಷ್ಟೇ ಅಲ್ಲದೇ ಹಿಂದೂ ದೇವರಾದ ಭಗವಾನ್ ಶ್ರೀ ರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರೊ.ಕೆ.ಎಸ್ ಭಗವಾನ್ ಇವರು ಮೇಲೆ ಸರ್ಕಾರ ಇನ್ನೂ ಕೂಡಾ ಕಾನೂನು ಕ್ರಮ ಕೈಗೊಳ್ಳಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಹಿಂದೂ ನಾಯಕರ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿಲ್ಲ.ಹಿಂದುತ್ವವಾದಿಗಳ ಜೀವಕ್ಕೆ ಬೆಲೆ ಇಲ್ಲ ಎಂಬಂತೆ ಆಗಿದೆ. ಇಂದು ಪ್ರಜಾಪ್ರಭುತ್ವದ ಹೆಸರಿನಲ್ಲಿ ದೇಶದಲ್ಲಿ ಭ್ರಷ್ಟಾಚಾರ ,ನಿರುದ್ಯೋಗ, ಸ್ತ್ರೀಯರ ಮೇಲೆ ಅತ್ಯಾಚಾರ, ಅನ್ನ ನೀಡುವ ರೈತರ ಆತ್ಮಹತ್ಯೆ ದಿನೇ ದಿನೇ ಹೆಚ್ಚುತ್ತಿದೆ.ಮಾತ್ರವಲ್ಲದೇ ದೇಶದಲ್ಲಿ ಸಮಾಜಿಕ ದುಷ್ಟಪ್ರವೃತ್ತಿಗಳು ಹೆಚ್ಚುತ್ತಲೇ ಇದೆ. ವೈದ್ಯಕೀಯ ಕ್ಷೇತ್ರ, ಸಾಮಾಜಿಕ, ಶಿಕ್ಷಣ, ಹಣಕಾಸು ‌ಮುಂತಾದ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತುಂಬಿ ಹೋಗಿದೆ. ಇಂದು ದೇಶದ ಸ್ಥಿತಿ ಶೋಚನೀಯ ಎಂಬಂತೆ ಕಾಡುತ್ತಿದೆ‌. ಇದನ್ನೆಲ್ಲಾ ನಿಲ್ಲಿಸಲು ಒಂದೇ ಪರ್ಯಾಯ ಅದುವೇ ವಿಶ್ವವನ್ನು ನಮ್ಮ ಮನೆ ಅಂದರೆ ವಸುಧೈವ ಕುಟುಂಬಕಂ ಎನ್ನುವ ಹಿಂದೂ ರಾಷ್ಟ್ರದ ಸ್ಥಾಪನೆಯು ಅಗತ್ಯ ಇದೆ ಎಂದು ಗಮನಕ್ಕೆ ಬರುತ್ತದೆ “ಎಂದು ತಮ್ಮ ವಿಚಾರ ಮಂಡಿಸಿದರು.
ಸಭೆಯ ನಿರೂಪಣೆಯನ್ನು ಪ್ರಮೀಳಾ ಆರ್ ಇವರು ಮಾಡಿದರು. ಊರಿನ ಹೆಚ್ಚಿನ ಹಿಂದೂಗಳು ಈ ಸಭೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಫೆಕ್ಲ್ಸ್ ಪ್ರದರ್ಶನವು ಜನರ ಗಮನ ಸೆಳೆಯಿತು.

More from the blog

ಕಾರು ಡಿಕ್ಕಿ ಬೈಕ್ ಸವಾರ ಗಂಭೀರ

ಬಂಟ್ವಾಳ: ಮಣಿಹಳ್ಳ-ಮಾವಿನಕಟ್ಟೆ ರಸ್ತೆಯ ಮಣಿನಾಲ್ಕೂರು ಗ್ರಾಮದ ಎರ್ಮಳದಲ್ಲಿ ಸ್ಕೂಟರೊಂದಕ್ಕೆ ಎದುರಿನಿಂದ ಆಗಮಿಸಿದ ಕಾರೊಂದು ಢಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಫೆ. ೯ರಂದು ನಡೆದಿದೆ. ಸರಪಾಡಿ ಕಲ್ಕೊಟ್ಟೆ ನಿವಾಸಿ ಸುಂದರ ಬಾಬು ಶೆಟ್ಟಿ ಗಾಯಗೊಂಡವರು....

ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ 3ನೇ ಬ್ರಿಡ್ಜ್ ನಲ್ಲೂ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 135 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಇದೇ ಮೊದಲ ಬಾರಿಗೆ...

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...