(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಸಂಸಾರ ಕಟ್ಟಿ, ಸಂಸ್ಕೃತಿ ಉಳಿಸಿ ಬೆಳೆಸುವ ಸ್ರೀಯರು ಎಂದಿಗೂ ಅಬಲೆಯರಲ್ಲ. ಸ್ತ್ರೀಯರು ಸಬಲೆಯರು ಆಗಿದ್ದು ಪುರುಷರಷ್ಟೇ ಸಮಾನತೆ ತೋರಿ ಜಾಗತಿಕವಾಗಿ ಮೆರೆದಿದ್ದಾರೆ. ದೇವರ ಸೃಷ್ಠಿಯಂತೆ ದೈಹಿಕ ಮತ್ತು ಮಾನಸಿಕವಾಗಿ ವ್ಯತ್ಯಾಯವಿದ್ದರೂ ಸದ್ಯ ನಾರಿ ತಾಕತ್ತು ಅರಳುಮುತ್ತುಗಿಂತ ಮೌಲ್ಯಯುತವಾಗುದೆ. ಆದುದರಿಂದ ಸ್ತ್ರೀಯರು ಸಧೃಢ ಮನೋಭಾವಿಗಳಾಗಬೇಕು ಎಂದು ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಇದರ ಕಾರ್ಯಾಧ್ಯಕ್ಷೆ ಮತ್ತು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾ ಆರ್.ಶೆಟ್ಟಿ ಅಭಿಪ್ರಾಯ ಪಟ್ಟರು.
ಇಂದಿಲ್ಲಿ ರವಿವಾರ ಸಂಜೆ ಉಪನಗರದ ಡೊಂಬಿವಲಿ ಪಶ್ಚಿಮದಲ್ಲಿನ ಠಾಕೂರ್ ಸಭಾಗೃಹದಲ್ಲಿ ಜಗಜ್ಯೋತಿ ಕಲಾವೃಂದ (ರಿ). ತನ್ನ 33ನೇ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಸಂಭ್ರಮಿಸಿದ್ದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿತ್ರಾ ಶೆಟ್ಟಿ, ಮಕರಜ್ಯೋತಿ ಕಾಣುವ ಮುನ್ನಾ ದಿನದ ಈ ಸಂಭ್ರಮ ಜಗಜ್ಯೋತಿಯಾಗಿ ಬೆಳೆದಿದೆ. ಅಖಿಲ ಭಾರತ ಮಟ್ಟದಲ್ಲಿ ನಾರಿಯರಿಬ್ಬರಿಗೆ ಸ್ತ್ರೀಕುಲಕ್ಕೆ ಮಾದರಿಯಾದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನಿಸಿ ಗೌರವಿಸುವುದೇ ಸ್ತ್ರೀಶಕ್ತಿಯ ಬಲಾಢ್ಯತೆಗೆ ಸಾಕ್ಷಿಯಾಗಿದೆ. ರಾಷ್ಟ್ರದ ಸವಿಂಧಾನದಲ್ಲೇ ಸಮಾನತಾ ಹಕ್ಕು ಪಡೆದ ಸ್ತ್ರೀಯರು ಸಾಧನೆ ಮಾಡಬೇಕು. ಮಹಿಳೆಯರಿಗೆ ಸಮಾಜದಲ್ಲಿ ಸಮಾನತೆ ತೋರಲು ತುಂಬಾ ವಿಧಗಳಿವೆ. ಆದರೆ ಯಾವುದೇ ಕಾರಣಕ್ಕೂ ತನ್ನ ನೈತಿಕತೆ ಮರೆಯದೆ, ಸಮಾಜಕ್ಕೆ ಕಳಂಕಿತರಾಗದೆ, ಆಶಾಂತಿಗೆ ಭಂಗ ತರದೆ ಸಮಾಜದ ಹಿತಕಾಪಾಡುತ್ತಾ ನಮ್ಮ ಸಂಸ್ಕಾರ, ಭವ್ಯ ಸಂಸ್ಕೃತಿ ಉಳಿಸಿಬೆಳೆಸು ಸಾಧನೆ ಸ್ತ್ರೀಯರಿಂದಾಗಲಿ. ಆ ಮೂಲಕ ಸ್ನೇಹಮಯಿ ಸಮಾಜ ಕಟ್ಟಿ ಭವ್ಯ ಭಾರತದ ಶ್ರೇಷ್ಠತೆಗೆ ಬದ್ಧರಾಗೋಣ ಎಂದ ಮಹಿಳೆಯರಿಗೆ ಸಲಹಿದರು.
ಬಂಟರ ಸಂಘ ಮುಂಬಯಿ ಇದರ ಡೊಂಬಿವಿಲಿ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ದಿನೇಶ್ ಎನ್.ಶೆಟ್ಟಿ, ಅಕ್ಷಯ ಕೋ.ಅಪರೇಟಿವ್ ಕ್ರೇಡಿಟ್ ಸೊಸೈಟಿ ಇದರ ಕಾರ್ಯಧ್ಯಕ್ಷ ವಾಸು ಎಸ್.ದೇವಾಡಿಗ ಗೌರವ ಅತಿಥಿಗಳಾಗಿದ್ದು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಧ್ಯಕ್ಷ ಸುಬ್ಬಯ್ಯ ಎ.ಶೆಟ್ಟಿ ಅವರು ‘ಜಗಜ್ಯೋತಿ ಸ್ಮರಣಿಕೆ’ ಬಿಡುಗಡೆ ಗೊಳಿಸಿದರು. ಸಂಘದ ಮಾ| ದರ್ಶಿತ್ ಸುರೇಂದ್ರ ನಾಯಕ್ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ಜಗಜ್ಯೋತಿ ಕಲಾ ವೃಂದವು ವಾರ್ಷಿಕವಾಗಿ ಕೊಡಮಾಡುವ ಸ್ವರ್ಗೀಯ ಸುಶೀಲಾ ಎಸ್.ಶೆಟ್ಟಿ ಕಥಾ ಪ್ರಶಸ್ತಿಯನ್ನು ಅತಿಥಿಗಳು ಆಶಾ ಜಗದೀಶ ಗೌರಿಬಿದನೂರು (ಚಿಕ್ಕಬಳ್ಳಾಪುರ) ಮತ್ತು ಕಾವ್ಯ ಪ್ರಶಸ್ತಿಯನ್ನು ಸ್ಮಿತಾ ಅಮೃತರಾಜ ಸಂಪಾಜೆ (ಕೊಡಗು) ಇವರಿಗೆ ಪ್ರದಾನಿಸಿ ಗೌರವಿಸಿದರು.
ಮುಂಬಯಿ ವಾತಾವರಣವೇ ಅತ್ಮೀಯವಾದುದು. ಇಲ್ಲಿನ ಅನ್ಯೋನ್ಯತೆ ಮತ್ತು ಕೌಟುಂಬಿಕ ಪರಿವೇಷ್ಟನೆ ಸಾಮರಸ್ಯತ್ವದ್ದು. ನಾನು ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ಆದರೆ ಸಾಹಿತ್ಯಾಸಕ್ತ ಸಾಧನೆಗಳ ಬಹುಮಾನಗಳೇ ನನ್ನನ್ನು ಬೆಳೆಸಿದೆ. ಮಹಿಳಾಮನಿಯರಿಗೆಳೆ ಇಂತಹ ಪ್ರಶಸ್ತಿಗಳು ಉತ್ತೇಜನ ನೀಡುತ್ತವೆ ಎಂದು ಆಶಾ ಜಗದೀಶ್ ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದರು.
ಸ್ಮಿತಾ ಅಮೃತರಾಜ್ ಗೌರವಕ್ಕೆ ಉತ್ತರಿಸಿ ಕನ್ನಡದ ಮಣ್ಣು ನನ್ನಂತಹ ಕವಯತ್ರಿರ ಕನಸು ನನಸಾಗಿಸಿದೆ. ಕಾವ್ಯಲೋಕದಲ್ಲಿ ಧಕ್ಕಿದ ಅವಕಾಶ, ಅದೃಷ್ಟ ನನ್ನನ್ನು ಬೆಳೆಸಿದೆ. ಕನ್ಯೆಯರು ಮನಸ್ಸು ಮಾಡಿದರೆ ಕನಸುಗಳು ಈಡೇರಿಸುವುದು ತ್ರಾಸದಾಯಕವಲ್ಲ. ಈ ಗೌರವ ಸ್ತ್ರೀಯರ ಸ್ವಮೌಲ್ಯಮಾಪನಕ್ಕೆ ಪ್ರೋತ್ಸಾಹಕರವಾಗಿದೆ ಎಂದರು.
ಸುಬ್ಬಯ್ಯ ಶೆಟ್ಟಿ ಮಾತನಾಡಿ ಡೊಂಬಿವಲಿಗೆ ಬರುವುದೇ ಒಂದು ಹರ್ಷೋಲ್ಲಾಸ ಅನ್ನಿಸುತ್ತದೆ ಕಾರಣ ಇಲ್ಲಿನ ತುಳು ಕನ್ನಡಿಗರ ಆತ್ಮೀಯತೆ, ಸಹೋದರತ್ವದ ಸೆಳೆತ ಅತ್ಯಾದ್ಭುತವಾದುದು. ಇಲ್ಲಿನ ಜನತೆಯಲ್ಲಿ ಸಮಾಜ, ಭಾಷೆ, ಸಂಸ್ಕೃತಿಯ ಉತ್ಸಹ ಅತ್ಯಾದ್ಭುತವಾದುದು. ಸಂಸ್ಥೆಯ ಕಲಾರಾಧನೆ ಸದಾ ಜ್ಯೋತಿಯಾಗಿಯೇ ಕಂಗೋಳಿಸಿ ನೂರಾರು ವರ್ಷ ಬೆಳಗುತ್ತಾ ಜಗದ್ವಾಪಿ ಬೆಳೆಯಲಿ ಎಂದು ಶುಭಾರೈಸಿದರು.
ಈಗೀನ ಮಕ್ಕಳಿಗೆ ಕಷ್ಟವಿಲ್ಲ ಎಲ್ಲವೂ ಇಷ್ಟದಂತೆ ದೊರೆಯುತ್ತದೆ. ಆದುದರಿಂದ ಕಷ್ಟನಷ್ಟ, ಸಂಬಂಧಗಳ ಮಹತ್ವ ಮರೆಯಾಗುತ್ತಿದೆ. ಆದರೆ ಶಾಲಾದಿನಗಳ ಗೆಳೆತನದಿಂದ ಹುಟ್ಟಿಬೆಳೆದ ಈ ಸಂಸ್ಥೆ ಮಿತತ್ವದ ದೃಢ ನಂಬಿಕೆ, ಅಚಲ ವಿಶ್ವಾಸ ಉಳಿಸಿ ಬೆಳೆದಿರುವುದು ಶ್ಲಾಘನೀಯ. ಈ ಸಂಸ್ಥೆ ಆದರ್ಶಮಯವಾಗಲಿ ಎಂದು ದಿನೇಶ್ ಶೆಟ್ಟಿ ತಿಳಿಸಿದರು.
ವಾಸು ದೇವಾಡಿಗ ಮಾತನಾಡಿ ರಾತ್ರಿಶಾಲೆ ಓದುತ್ತಲೇ ಒಟ್ಟುಗೂಡಿದ ಸಹಪಾಠಿ ವಿದ್ಯಾಥಿಗಳ ದೂರತ್ವದ ಒಗ್ಗೂಡುವಿಕೆ, ಸಾಂಘಿಕನಡೆ ಸ್ತುತ್ಯರ್ಹವಾದುದು. ಇದು ಬಹುಶಃ ಜಗತ್ತಿಗೆ ಮಾದರಿ. ಸುಮಾರು ಮೂರುವರೆ ದಶಕದ ಮುನ್ನಡೆಯಲ್ಲೂ ಮಿತ್ರತ್ವದ ಒಗ್ಗಟ್ಟು ಬಲಶಾಲಿಯಾಗಿ ಬೆಳೆದಿದ್ದು ಇದೇ ರೀತಿ ಮುನ್ನಡೆಯಲಿ. ತಮ್ಮ ಕಲಾವೃಂದ ಜಾಗತಿಕವಾಗಿ ಮೆರೆಯಿರಿ ಎಂದು ಆಶಯ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಲಾವೃಂದದ ಸದಸ್ಯರು ಮತ್ತು ಮಕ್ಕಳು ನೃತ್ಯವೈಭವ ಸಾದರ ಪಡಿಸಿದರು. ಮತ್ತು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಯಕ್ಷಗಾನ ಕಲಾವಿದರ ತಂಡವು ಪತ್ರಕರ್ತ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ| ದಿನೇಶ್ ಶೆಟ್ಟಿ ರೆಂಜಾಳ ಸಾರಥ್ಯ ಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನ ಮತ್ತು ಗಣೇಶ್ ಮಯ್ಯ ವರ್ಕಾಡಿ ಹಾಗೂ ಹರೀಶ್ ಶೆಟ್ಟಿ ಕಟೀಲು ಭಾಗವತಿಕೆಯಲ್ಲಿ ‘ಮಹಿಷಾಸುರ ಮರ್ಧಿನಿ’ ಯಕ್ಷಗಾನ ಪ್ರದರ್ಶಿಸಿದರು.
ಯೋಗಿನಿ ಎಸ್.ಶೆಟ್ಟಿ, ಸುನಂದಾ ಶೆಟ್ಟಿ, ವಿನಾಕ್ಷಿ ವಿ.ಸುವರ್ಣ ಪ್ರಾರ್ಥನೆಯನ್ನಾಡಿದರು. ಕಲಾವೃಂದದ ಅಧ್ಯಕ್ಷ ರಮೇಶ್ ಎ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಉಪಸ್ಥಿತ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸಿದರು. ಜತೆ ಕಾರ್ಯದರ್ಶಿ ತಾರನಾಥ್ ಅವಿನ್, ಸ್ಥಾಪಕ ಸದಸ್ಯ ರಾಜು ಆರ್.ಸುವರ್ಣ, ಸಂಘಟನಾ ಕಾರ್ಯದರ್ಶಿ ಸಂತೋಷ್ ಪಿ.ಶೆಟ್ಟಿ, ಸುರೇಂದ್ರ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಪಡುಕುಡೂರು ಜಯಕರ ಶೆಟ್ಟಿ , ಗೌ| ಪ್ರ| ಕಾರ್ಯದರ್ಶಿ ಬಾಬು ಕೆ.ಮೊಗವೀರ, ಕೋಶಾಧಿಕಾರಿ ಚಂದ್ರ ಎನ್.ನಾಯ್ಕ್, ಜತೆ ಕೋಶಾಧಿಕಾರಿ ಸಂದೀಪ್ ಕೋಟ್ಯಾನ್, ಸದಾಶಿವ ಶ್ರೀಯಾನ್ ಅತಿಥಿಗಳಿಗೆ ಪುಷ್ಫಗುಪ್ಚ-ಸ್ಮರಣಿಕೆಗಳನ್ನೀಡಿ ಗೌರವಿಸಿದರು. ಮಾಜಿ ಅಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಕಲಾವೃಂದದ ೨೨ನೇ ವಾರ್ಷಿ ಪ್ರಶಸ್ತಿ ಬಗ್ಗೆ ತಿಳಿಸಿ ಪುರಸ್ಕೃತರನ್ನು ಪರಿಚಯಿಸಿದರು. ಮಾಜಿ ಗೌ| ಪ್ರ| ಕಾರ್ಯದರ್ಶಿ ವಸಂತ್ ಎನ್. ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.