ಬಂಟ್ವಾಳ, ಮಾ. 23: ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖ್‌ದೇವ್ ಅವರ ಬಲಿದಾನದ ಸ್ಮರಣಾರ್ಥವಾಗಿ ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಬಿ.ಸಿ.ರೋಡಿನ ಕೈಕಂಬದಿAದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಸ್ಪರ್ಶ ಕಲಾಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಪ್ರಸಾದ್‌ಕುಮಾರ್ ರೈ ಮಾತನಾಡಿ, ದೇಶದ ಸ್ವಾತಂತ್ರ‍್ಯಕ್ಕಾಗಿ ಪ್ರಾಣವನ್ನು ಅರ್ಪಿಸಿದ ಭಗತ್ ಸಿಂಗ್‌ನ ರಕ್ತದಲ್ಲಿಯೇ ಸ್ವಾತಂತ್ರ‍್ಯದ ದೇವಿ ಹುಟ್ಟಿಕೊಂಡಿದ್ದು, ಜಲಿಯನ್ ವಾಲಾಬಾಗ್ ದುರಂತ ಆತನಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹೆಚ್ಚಿಸುತ್ತದೆ. ಈ ದುರಂತದಿAದ ಆತ ಭಾರತಕ್ಕಾಗಿ ಬದುಕಬೇಕು ಎಂಬ ತೀರ್ಮಾನ ಮಾಡುತ್ತಾನೆ. ಸ್ವಾತಂತ್ರ‍್ಯ ಬಳಿಕವೇ ಮದುವೆ ಎಂಬ ಸಂಕಲ್ಪ ಮಾಡಿ, ದೇಶಸೇವೆಯ ಮೂಲಕವೇ ಪ್ರಾಣಾರ್ಪಣೆ ಮಾಡುತ್ತಾನೆ ಎಂದು ಭಗತ್ ಸಿಂಗ್‌ನ ಬದುಕನ್ನು ವಿವರಿಸಿದರು.
ಮಂಗಳೂರು ಕಾಲೇಜು ಶಿಕ್ಷಣದ ಜಂಟಿ ನಿರ್ದೇಶಕರ ಕಚೇರಿಯ ವಿಶೇಷ ಅಽಕಾರಿ ದೇವಿಪ್ರಸಾದ್ ಮಾತನಾಡಿ, ಅಲ್ಪಕಾಲದ ಜೀವಿತಾವಽಯಲ್ಲೇ ದೇಶಕ್ಕೆ ಅದ್ಬುತ ಕೊಡುಗೆ ನೀಡಿದ ಭಗತ್ ಸಿಂಗ್ ಅವರಿಗೆ ನಾವು ನಿತ್ಯವೂ ನಮನ ಸಲ್ಲಿಸಬೇಕಿದೆ. ಜತೆಗೆ ಆತನ ಆದರ್ಶದೊಂದಿಗೆ ನಾವು ಕೂಡ ದೇಶಕ್ಕೆ ಸೇವೆ ನೀಡಲು ಸಂಕಲ್ಪ ಕೈಗೊಳ್ಳಬೇಕಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ| ನಾರಾಯಣ ಭಂಡಾರಿ, ಎಬಿವಿಪಿ ಜಿಲ್ಲಾ ಸಂಚಾಲಕ ಹರ್ಷಿತ್ ಕೊಯಿಲ, ತಾಲೂಕು ಸಂಚಾಲಕ ಅಖಿಲೇಶ್ ಉಪಸ್ಥಿತರಿದ್ದರು. ವಿಭಾಗ ಸಂಚಾಲಕ ಸಂದೇಶ್ ರೈ ಮಜಕ್ಕಾರು ಪ್ರಸ್ತಾವನೆಗೈದರು.
ಗುರುಪ್ರಸಾದ್ ಸಿದ್ದಕಟ್ಟೆ ಸ್ವಾಗತಿಸಿದರು. ದಿನೇಶ್ ಕೊಯಿಲ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕೈಕಂಬದಿAದ ಜಾಥಾ ನಡೆಯಿತು.
