ವಿಟ್ಲ: ಮಕ್ಕಳ ಭವಿಷ್ಯತ್ತಿಗೆ ಬಡಜನರ ಕಷ್ಟ ಸುಖಗಳಿಗೆ ನಿರಂತರ ಸ್ಪಂದಿಸುವ ಮಾದರಿ ಸಂಘಟನೆಗಳಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ನಮ್ಮೆಲ್ಲರ ಮಧ್ಯೆ ಗುರುತಿಸಿಕೊಂಡಿದೆ. ವಿಕಾಸ ವಾಹಿನಿ ಸ್ವ-ಸಹಾಯ ಸಂಘಗಳು, ಘಟಸಮಿತಿ ಮುಖಾಂತರ ಸಾಮಾಜಿಕ ಸೇವಾ ಕಾರ್‍ಯಗಳು ನಡೆಯುತ್ತಿವೆ. ಸುಸಂಸ್ಕೃತರ ಒಡನಾಟದಿಂದ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದರು.
ಅವರು ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಅಂಗವಾಗಿ ಇರ್ವತ್ತೂರು ಘಟ ಸಮಿತಿ ವತಿಯಿಂದ ಮೂಡಪಡುಕೋಡಿ ಸರಕಾರಿ ಹಿರಿಯ ಪ್ರಥಮಿಕ ಶಾಲೆಯ ರಂಗಮಂದಿರದಲ್ಲಿ ನಡೆದ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಪ್ರಸ್ತಾವನೆಗೈದು ಪೂಜ್ಯ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವ ಆಚಾರಣೆಯ ಉದ್ದೇಶಗಳನ್ನು ತಿಳಿಸಿದರು. ಈ ಸಂದರ್ಭ 60ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಹಾಫ್ ಕಾಮ್ಸ್ ಮಂಗಳೂರು ಇದರ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ, ಧನ್ವಂತರಿ ಕ್ಲಿನಿಕ್ ಡಾ. ರಾಮಕೃಷ್ಣ ಎಸ್, ಇರ್ವತ್ತೂರು ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಶಂಕರಶೆಟ್ಟಿ ಬೆದ್ರಮಾರ್, ಸದಸ್ಯರಾದ ಸುಧೀರ್ ಶೆಟ್ಟಿ ಎರ್ಮೆನಾಡು, ದಯಾನಂದ ಕುಲಾಲ್, ಎಸ್.ಡಿ.ಎಮ್.ಸಿ ಇದರ ಅಧ್ಯಕ್ಷರಾದ ಶ್ರೀನಿವಾಸ, ಶಾಲಾ ಸಹ ಶಿಕ್ಷಕರಾದ ಸುನೀಲ್ ಸಿಕ್ವೇರಾ, ದಲಿತ ಸಂಘಟನಾ ಸಮಿತಿ ನೇರಳಕಟ್ಟೆ ಇದರ ಅಧ್ಯಕ್ಷರಾದ ಸುಂದರ್ ಸಾಲ್ಯನ್, ಶ್ರೀದುರ್ಗಾ ಫ್ರೆಂಡ್ಸ್ ಕಲ್ಲಡ್ಕ ಇದರ ಅಧ್ಯಕ್ಷರಾದ ರಮೇಶ್, ಶಿವಾಜಿ ಫ್ರೆಂಡ್ಸ್ ಇರ್ವತ್ತೂರು ಇದರ ಸದಸ್ಯರಾದ ದಯಾನಂದ, ಚೆನ್ನೈತ್ತೋಡಿ ಘಟ ಸಮಿತಿ ಅಧ್ಯಕ್ಷರಾದ ಹರೀಶ್, ಪಿಲಾತಬೆಟ್ಟು ಘಟ ಸಮಿತಿ ಅಧ್ಯಕ್ಷರಾದ ಮೋಹನ್ ಸಾಲ್ಯಾನ್, ಇರ್ವತ್ತೂರು ಘಟ ಸಮಿತಿ ಅಧ್ಯಕ್ಷರಾದ ಗಂಗಯ್ಯ ಡಿ.ಎನ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಕಿರಣ್ ಉರ್ವ, ಸಂಯೋಜಕಿ ಜಯಶ್ರೀಯವರು ಉಪಸ್ಥಿತರಿದ್ದರು.
ಜತೆ ಕಾರ್‍ಯದರ್ಶಿ ಮೋಹಿನಿ ಆಶಯ ಗೀತೆ ಹಾಡಿದರು. ಘಟ ಸಮಿತಿ ಸಂಘಟನಾ ಕಾರ್‍ಯದರ್ಶಿ ಸುಧಾಕರ ಸ್ವಾಗತಿಸಿದರು. ಕಾರ್‍ಯದರ್ಶಿ ಶೇಖರ್ ವಂದಿಸಿದರು. ಗ್ರಾಮದ ಸೇವಾದೀಕ್ಷಿತೆ ವಿಜಯ ಕಾರ್‍ಯಕ್ರಮ ನಿರೂಪಿಸಿದರು. ಸೇವಾದೀಕ್ಷಿತೆ ಪುಷ್ಪಾವತಿ, ಘಟಸಮಿತಿ ಪದಾಧಿಕಾರಿಗಳು, ಗುಂಪಿನ ಸದಸ್ಯರು ಸಹಕರಿಸಿದರು.
