ಬಂಟ್ವಾಳ: ಡಿಸೆಂಬರ್ 25 ಮಂಗಳವಾರದಂದು ಇರಾ ಮೂಲೆಯಲ್ಲಿ SSF ಮೂಲೆಯ ಯುನಿಟಿನ ಅಧೀನದಲ್ಲಿ ಮುಡಿಪ್ಪು ರೆಂಜಿನ ಪ್ರತಿಭಾ ಸಂಗಮ ನಡೆಯಿತು. ಹನ್ನೆರಡು ಮದರಸದ ವಿಧ್ಯಾರ್ಥಿಗಳ ಹಲವಾರು ಕಲಾ ಸ್ಪರ್ಧೆಗಳು ನಡೆಯಿತು.




ಸಭೆಯಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಝ್ಝಾಕ್ ಕುಕ್ಕಾಜೆ C. T. M ತಂಙಲ್, N. D ಮದನಿ ಅಬೂಬಕ್ಕರ್ ಮದನಿ, K. B ಅಬ್ದುರ್ರಹ್ಮಾನ್ ಮದನಿ, ಅಬ್ದುಲ್ ಲತೀಫ್ ಮದನಿ, ಮೊಯ್ದೀನ್ ಕುಂಞ, ಎಂ ಬಿ ಉಮ್ಮರ್ ಮುಂತಾದ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ C. M ನಗರ ವಿಧ್ಯಾರ್ಥಿಗಳಿಗೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝ್ಝಾಕ್ ಕುಕ್ಕಾಜೆಯವರು ಬಹುಮಾನ ವಿತರಿಸಿ ಅಭಿನಂದಿಸಿದರು.