Monday, January 26, 2026

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಜಯ

ಮುಂಬೈ: ಡೇವಿಡ್ ಮಿಲ್ಲರ್ ಅರ್ಧಶತಕ ಹಾಗೂ ಆಲ್ ರೌಂಡರ್ ಕ್ರಿಸ್ ಮೊರಿಸ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್‌ನ 7ನೇ ಪಂದ್ಯವನ್ನು 3 ವಿಕೆಟ್‌ಗಳಿಂದ ರೋಚಕ ಜಯ ದಾಖಲಿಸಿದೆ.

ಗೆಲ್ಲಲು 148 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 19.4 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಔಟಾಗದೆ 36 ರನ್ (18 ಎಸೆತ, 4 ಬೌಂಡರಿ) ಗಳಿಸಿದ ಮೊರಿಸ್ ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನಕ್ಕೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

9.2 ಓವರ್‌ಗಳಲ್ಲಿ 42 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ರಾಜಸ್ಥಾನ ಸೋಲಿನ ಭೀತಿಯಲ್ಲಿತ್ತು. ಆಗ ತಂಡವನ್ನು ಆಧರಿಸಿದ ಮಿಲ್ಲರ್ (62, 43 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ರಾಹುಲ್ ತೆವಾಟಿಯಾ (19, 17 ಎಸೆತ)6ನೇ ವಿಕೆಟಿಗೆ 48 ರನ್ ಜೊತೆಯಾಟ ನಡೆಸಿದರು. ತೆವಾಟಿಯಾ ಹಾಗೂ ಮಿಲ್ಲರ್ ಔಟಾದಾಗ ರಾಜಸ್ಥಾನದ ಸ್ಕೋರ್ 7ಕ್ಕೆ104 ರನ್.

ಕ್ರಿಸ್ ಮೋರಿಸ್ ಹಾಗೂ ಜೈದೇವ್ ಉನದ್ಕಟ್ 8ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 46 ರನ್ ಸೇರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಡೆಲ್ಲಿಯ ಪರವಾಗಿ ಅವೇಶ್ ಖಾನ್ (3-32), ಕ್ರಿಸ್ ವೋಕ್ಸ್(2-22) ಹಾಗೂ ಕಾಗಿಸೊ ರಬಾಡ(2-30)7 ವಿಕೆಟ್ ಹಂಚಿಕೊAಡರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್ ಅರ್ಧಶತಕದ ಕೊಡುಗೆ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್‌ಗಳಿಸಿದೆ.

More from the blog

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು – ವಜ್ರದೇಹಿ ಶ್ರೀ

ವಿಟ್ಲ: ಹಿಂದು ಸಮಾಜ ಪ್ರಸಕ್ತ ಪರಿಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಜಾತಿ ಸಮುದಾಯಗಳು ಒಟ್ಟಾಗಿ ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು. ಹೀಗಾದಾಗ ಮಾತ್ರ ರಾಜಕೀಯ ಷಡ್ಯಂತ್ರಗಳನ್ನು ಮೆಟ್ಟಿ ಮುನ್ನಡೆಯ...