ಶಾರ್ಜಾ : 2020 ನೇ ಐ.ಪಿ.ಎಲ್. ಟೂರ್ನಿಯ ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 224 ರನ್ ಗಳನ್ನು ಕಲೆಹಾಕಿತು. ರಾಜಸ್ಥಾನ ರಾಯಲ್ಸ್ ತಂಡವು 19.3 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 226 ರನ್ ಗಳಿಸಿ ಹೆಲುವು ಸಾದಿಸಿಕೊಂಡಿತು. ಈ ಮೂಲಕ ತಾನಾಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ.
ರಾಜಸ್ಥಾನದ ಪರ ಸ್ಟೀವನ್ ಸ್ಮಿತ್ 27 ಎಸೆತಗಳಲ್ಲಿ 50, ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 85 ಹಾಗೂ ರಾಹುಲ್ ತಿವಾಟಿಯ 31 ಎಸೆತಗಳಲ್ಲಿ 53 ರನ್ ಸಿಡಿಸಿದರು. ಪಂಜಾಬ್ ಪರ ಮುಹಮ್ಮದ್ ಶಮಿ ಮೂರು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮಯಾಂಕ್ ಅಗರವಾಲ್ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಮಯಾಂಕ್ ಕೇವಲ 50 ಎಸೆತಗಳಲ್ಲಿ 106 ರನ್ (10 ಬೌಂಡರಿ, 6 ಸಿಕ್ಸ್) ಗಳಿಸಿ ಮಿಂಚಿದರು. ಮತ್ತೊಂದೆಡೆ ತಂಡದ ನಾಯಕ ಕೆ.ಎಲ್ ರಾಹುಲ್ 54 ಎಸೆತಗಳಲ್ಲಿ 69 ರನ್ ಗಳಿಸಿದ್ದರು.














