ದುಬೈ: ಐಪಿಎಲ್ 13 ನೇ ಆವೃತ್ತಿಯ ಇಂದಿನ ಪಂದ್ಯವು ಶಾರ್ಜಾ ಮೈದಾನದಲ್ಲಿ ಸ್ಟೀವನ್ ಸ್ಮಿತ್ ಬಳಗವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನ್ ಆಡಿರುವ ಐದು ಪಂದ್ಯಗಳಲ್ಲಿ ಮೊದಲೆರಡು ಪಂದ್ಯ ಗೆದ್ದು, ನಂತರ ಮೂರು ಪಂದ್ಯಗಳಲ್ಲಿ ಸೋತಿದೆ. ಹಾಗೇಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯ ಸೋತಿದೆ. ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಡೆಲ್ಲಿ ತಂಡ ಉತ್ತಮವಾಗಿ ಮುನ್ನಡೆಯುತ್ತಿದ್ದು, ಇಂದಿನ ಪಂದ್ಯ ಗೆದ್ದರೆ ಅಂಕ ಪಟ್ಟಿಯಲಗಲಿ ಅಗ್ರ ಸ್ಥಾನಕ್ಕೆರುವ ಸಾದ್ಯತೆ ಇದೆ.














