ರೋಟರಿ ಕ್ಲಬ್ ಬಿಸಿರೋಡು ಸಿಟಿ ಇದರ ವತಿಯಿಂದ ಸೆ.15ರಂದು ಕ್ಲಬ್ಬಿನ GSR PHF ಪದ್ಮನಾಭ ಇವರ ಮನೆಯಲ್ಲಿ ವಾರದ ಸಭೆಯು ನಡೆಯಿತು.

ಸಭೆಯಲ್ಲಿ ಭಾರತದ ಅತ್ಯುತ್ತಮ ಇಂಜಿನಿಯರ್ ಅನಿಸಿಕೊಂಡಿರುವ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ಸ್ಮರಣಾರ್ಥ ಇಂಜಿನಿಯರ್ಸ್ ಡೇ ಆಚರಿಸಲಾಯಿತು.


ಕ್ಲಬ್ಬಿನ ಸಕ್ರಿಯ ಸದಸ್ಯರು ಹಾಗೂ ಕಾರ್ಯಶೀಲ ಇಂಜಿನಿಯರ್ಗಳು ಆದಂತಹ ರೋಟೇರಿಯನ್ ಸುಧೀರ್ ಶೆಟ್ಟಿ , ಸಂದೀಪ್ ಶೆಟ್ಟಿ , ಸಂತೋಷ್ ಪೂಜಾರಿ, ಸುಭಾಷ್ ರೈ, ನಿಶಾಂತ್ ರೈ ಇವರನ್ನು ಕ್ಲಬ್ಬಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ ಸತೀಶ್ ಕುಮಾರ್ ಅವರು ಮಾತನಾಡಿ
ಯಾವುದೇ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು ನಮ್ಮ ಜೀವನವನ್ನು ನಿಜವಾಗಿಯೂ ಬದಲಿಸಿದ ನಿಮ್ಮ ಉತ್ತಮ ಆಲೋಚನೆಗಳು ಮತ್ತು ನಾವಿನ್ಯತೆ ಗಳನ್ನು ನಾವು ಅಭಿನಂದಿಸುತ್ತೇವೆ ಕ್ಲಬ್ಬಿನ ಎಲ್ಲಾ ಇಂಜಿನಿಯರ್ಸ್ ಗಳಿಗೂ ಶುಭಾಶಯಗಳು ಎಂದರು
ಪದ್ಮನಾಭ ರೈ ಇವರು ಹೆಚ್ಚಿನ ಜ್ಞಾನ ಅಥವಾ ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಸಾಮಾನ್ಯವಾಗಿ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ.
ಶ್ರೇಷ್ಠನಾದ ಪ್ರತಿಯೊಬ್ಬ ಮನುಷ್ಯನೂ ತನ್ನ ಸಾಧನೆಗೆ ನಿರಂತರ ಶ್ರಮವಹಿಸಿರುತ್ತಾನೆ. ಹಣದಿಂದ ಖರೀದಿಸಬಹುದಾದ ಅಥವಾ ಅಳೆಯುವಂತಹದ್ದನ್ನು ಹೊರತುಪಡಿಸಿ ಬೇರೆ ಏನನ್ನಾದರೂ ಸೇರಿಸಿದರೆ ಮಾತ್ರ ನಿಜವಾದ ಸೇವೆ ನೀಡಬಹುದು.
ಪದವಿ ಪ್ರಜಾಸೇವೆಗೆ ಹೊರತು ಸ್ವಂತ ಲಾಭಕ್ಕಾಗಿ ಅಲ್ಲ ಶಿಸ್ತುಬದ್ಧ ರೀತಿಯ ಕಠಿಣ ಪರಿಶ್ರಮ ಹೆಚ್ಚಿನ ಸಂದರ್ಭಗಳಲ್ಲಿ ಕೆಲಸಗಾರನನ್ನು ಸದೃಢವಾಗಿರಿಸುತ್ತದೆ ಮತ್ತು ಅವನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಹಣವಿದ್ದರೆ ಸಾಲದು, ಒಳ್ಳೆಯ ವ್ಯಕ್ತಿತ್ವ ಇದ್ದರಷ್ಟೇ ಸಮಾಜ ಗೌರವಿಸುತ್ತದೆ ಎಂದು ನುಡಿದರು.
ಕ್ಲಬ್ಬಿನ ಉಪಾಧ್ಯಕ್ಷರು ಹಾಗೂಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ PHF ಜಗನ್ನಾಥ ಚೌಟ ಮಾತನಾಡಿ
ಸರ್ ಎಂ ವಿಶ್ವೇಶ್ವರಯ್ಯ. ಕರುನಾಡಿನ ಹೆಮ್ಮೆಯ ಪುತ್ರ. ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಇವರು. ಇವರ ಇಂಜಿನಿಯರಿಂಗ್ ಕೌಶಲ್ಯ, ದೂರದರ್ಶಿತ್ವದ ಯೋಜನೆಗಳು, ಜ್ಞಾನ ಎಲ್ಲವೂ ಅದ್ಭುತ. ನಮ್ಮ ನೆಲದ ಸಾಕ್ಷಿ ಪ್ರಜ್ಞೆ ಇವರು. ಇವರ ಜೀವನ, ಆದರ್ಶ, ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪ ವಿಶ್ವೇಶ್ವರಯ್ಯನವರ ಸಾಧನೆ ಈ ಭೂಮಿ ಇರುವ ತನಕ ಶಾಶ್ವತ. ಇವರ ದೂರದರ್ಶಿತ್ವವುಳ್ಳ ಯೋಜನೆಗಳು ಇಂದಿಗೂ ವಿಶ್ವೇಶ್ವರಯ್ಯನವರ ಸಾಧನೆ, ಬುದ್ಧಿವಂತಿಕೆಗೆ ಸಾಕ್ಷಿಯಾಗಿ ನಿಂತಿವೆ. ಈ ದೇಶಕ್ಕೆ ಸರ್ ಎಂ ವಿ ನೀಡಿದ ಕೊಡುಗೆ ಅಪೂರ್ವ. ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರುರ್ ಎಂ ವಿಶ್ವೇಶ್ವರಯ್ಯ… ಕರುನಾಡಿನ ಹೆಮ್ಮೆಯ ಪುತ್ರ. ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಇಂಜಿನಿಯರ್ ಇವರು. ಇವರ ಇಂಜಿನಿಯರಿಂಗ್ ಕೌಶಲ್ಯ, ದೂರದರ್ಶಿತ್ವದ ಯೋಜನೆಗಳು, ಜ್ಞಾನ ಎಲ್ಲವೂ ಅದ್ಭುತ. ನಮ್ಮ ನೆಲದ ಸಾಕ್ಷಿ ಪ್ರಜ್ಞೆ ಇವರು. ಇವರ ಜೀವನ, ಆದರ್ಶ, ಸಂದೇಶಗಳು ಇಂದಿಗೂ ಎಲ್ಲರಿಗೂ ದಾರಿದೀಪ. ಇದೇ ಕಾರಣಕ್ಕೆ ಸರ್ ಎಂ ವಿ ಅವರ ಜನ್ಮದಿನವನ್ನು ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರತಿಕ್ಷಣವನ್ನು ಮೌಲ್ಯಯುತವಾಗಿ ಶ್ರಮಿಸಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಅಕ್ರಮ ಸಂಪಾದನೆಯಿಂದ ಮಾಡುವ ಭೂರಿ ಭೋಜನಕ್ಕಿಂತ ಕಷ್ಟಪಟ್ಟು ಕುಡಿಯುವ ಗಂಜಿನೀರು ತುಂಬಾ ಸಂತೃಪ್ತಿ ನೀಡುತ್ತದೆ.
ನೀವು ಕೂಡ ಪ್ರಾಮಾಣಿಕತೆ ಮತ್ತು ನಂಬಿಕೆಯಿಂದ ನಿಮ್ಮ ಕರ್ತವ್ಯವನ್ನು ನಿರ್ವಹಿಸಿಶ್ರೇಷ್ಠಮಟ್ಟದ ಇಂಜಿನಿಯರ್ ಗಳಾಗಿ ಎಂದು ಶುಭ ಹಾರೈಸಿದರು.

