Saturday, January 31, 2026

ಇಂದಿರಾ ಕ್ಷೇಮ ನಿಧಿ ಯೋಜನೆಗೆ ಬಿಸಿರೋಡಿನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ

ಬಂಟ್ವಾಳ : ಕೊರೊನಾ ಸೊಂಕು ಬಾಧಿತ ಪ್ರತಿಕುಟುಂಬಗಳಿಗೆ ನೆರವಾಗು ನಿಟ್ಟಿನಲ್ಲಿ ಇಂದಿರಾ ಕ್ಷೇಮ ನಿಧಿ ಪ್ರಾರಂಬಿಸಲಾಗಿದ್ದು ಈ ಮೂಲಕ ಪ್ರತಿ ಮನೆಗೆ ದಿನಸಿ ಸಾಮಾಗ್ರಿಗಳ ಕಿಟ್ ನೀಡಲಾಗುತ್ತದೆ ಎಂದು ಮಾಜಿ ಸಚಿವ ಬಿ‌.ರಮಾನಾಥ ರೈ ಹೇಳಿದರು.

 

ಬಿ.ಸಿ.ರೋಡಿನಲ್ಲಿ ಸೋಮವಾರ ಬೆಳಿಗ್ಗೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೊಂಕು ಬಾದಿತರಿಗೆ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ಕೊರೋನಾ ಮಹಾಮಾರಿ ಯಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೇಸ್ ಜನರಿಗೆ ಅಗತ್ಯ ನೆರವು ನೀಡುವುದರ ಜೊತೆಯಲ್ಲಿ ಕಾಲಕಾಲಕ್ಕೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ನಡೆಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

 ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಯೋಜನೆ ರೂಪಿಸಬೇಕು ಎಂದರು. 

ಔಷಧಿಗಳು ಕಾಳ ಸಂತೆಯಲ್ಲಿ 

ರೆಡಿಸೀವರ್ ಹಾಗೂ ಬ್ಲಾಕ್ ಫಂಗಸ್ ನ ಔಷಧಿಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ, ಆದರೆ ಕಾಳಸಂತೆಯಲ್ಲಿ ದೊರಕುತ್ತಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.

ಕರ್ನಾಟಕದ ಎಲ್ಲಾ ಕಾಂಗ್ರೇಸ್ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಸಹಿತ ಒಟ್ಟು 100 ಕೋಟಿ ಅನುದಾನವನ್ನು ಕೊರೋನಾ‌ಲಸಿಕೆಗೆ ಬಳಸಲು ಅನುಮತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಈ ಕುರಿತು ಮಂಜೂರಾತಿ ನೀಡಿಲ್ಲ ಎಂದವರು ಆರೋಪಿಸಿದರು.

ಕಾಂಗ್ರೇಸ್ ನಿಂದ ನಿರಂತರ ನೆರವು 

 ಕೊರೋನಾ‌ ನಿಗ್ರಹಕ್ಕೆ ಕಾಂಗ್ರೇಸ್ ಪಕ್ಷ ಅಗತ್ಯ ನೆರವನ್ನು ನೀಡುತ್ತಿದ್ದು, ದಕಗಷಿಣ ಕನ್ನಡದ ಪ್ರತೀಬ್ಲಾಕ್ ನಲ್ಲೂ ಅಂಬ್ಯುಲೆನ್ಸ್ ಅನ್ನು ಪಕ್ಷದ ವತಿಯಿಂದ ಒದಗಿಸಲಾಗಿದೆ. ಮಂಗಳೂರಿನ‌ಲ್ಲಿ ಜಿಲ್ಲಾ ಕಾಂಗ್ರೇಸ್ ನ ವಾರ್ ರೂಂ. ದಿನದ 24 ಗಂಟೆ ಕೆಲಸ ಮಾಡ್ತಾ ಇದ್ದು, ಜನರಿಗೆ ಅಗತ್ಯವಾದ ಬೆಡ್, ಆಕ್ಸಿಜನ್ , ಶವ ಸಂಸ್ಕಾರಕ್ಕೆ ನೆರವು ಮಾತ್ರವಲ್ಲದೇ, ಪ್ಲಾಸ್ಮಾ ನೀಡಿಕೆಯಲ್ಲೂ ಶ್ರಮ ವಹಿಸಿದೆ ಎಂದರು.

 ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣಕ್ಕೆ ಆಹಾರ ಒದಗಿಸುವ ಕೆಲಸ‌ವನ್ನು ಬಂಟ್ವಾಳ ಸಹಿತ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ನಡೆಸುತ್ತಿದ್ದೇವೆ.  

ಸರ್ಕಾರಗಳ ತಪ್ಪು‌ನಿರ್ಧಾರ ಕೊರೋನಾ ಉಲ್ಭಣಕ್ಕೆ ಕಾರಣ

 ಆರಂಭಿಕ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡ ತಪ್ಪು ನಿರ್ಧಾರದಿಂದ ಕೊರೋನಾ‌ ಉಲ್ಭಣಗೊಂಡಿದೆ ಎಂದ‌ ಅವರು, ಕೊರೋನಾ‌ನಿಗ್ರಹದ ಪ್ರತೀ ಹಂತದಲ್ಲೂ ಸರ್ಕಾರ ಎಡವಿದೆ. ಕೊರೋನಾ‌ ರೋಗಿಗಳಿಗೆ ಆಮ್ಲಜನಕ‌ ಸಿಗದೇ ಇದ್ದಾಗ, ಜನರಿಗೆ ಆಕ್ಸಿಜನ್ ಒದಗಿಸಲು ಸುಪ್ರೀಂ ಕೋರ್ಟ್ ಆರ್ಡರ್ ಮಾಡಬೇಕಾಯಿತು. ಇದು ದುರ್ದೈವ ಎಂದರು.

ಕೊರೋನಾ ಲಸಿಕೆ ನೀಡಿಕೆಯಲ್ಲೂ ಸರ್ಕಾರ ಎಡವಿದ್ದು, ಇದರ ವಿಳಂಬಕ್ಕೆ ಕಾಂಗ್ರೇಸ್ ಕಾರಣ ಎನ್ನುವ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ ಎಂದ ಅವರು, ಮಾಡಿರುವ ತಪ್ಪುಗಳನ್ನು ಬಿಜೆಪಿ ತಿದ್ದಿ ನಡೆದುಕೊಳ್ಳಬೇಕು ಎಂದರು. 

 

ಜನತೆಗೆ ಬೆಲೆ ಏರಿಕೆ ಶಾಪ

 

ಕೊರೋನಾ ಸಂಕಷ್ಟದ ಕಾಲದಲ್ಲಿಯೂ ‌ಡೀಸೆಲ್ ಪೆಟ್ರೋಲ್ ದರದ ಏರಿಕೆ ಜನರಿಗೆ ಶಾಪವಾಗಿದ್ದು, ಇತರ ದಿನಬಳಕೆಯ ವಸ್ತುಗಳ ಬೆಲೆಏರಿಕೆಗೂ ಕಾರಣವಾಗಿದೆ ಎಂದರು. ಇಂತಹಾ ಸ್ಥಿತಿಯಲ್ಲಿ ಮಾಧ್ಯಮಗಳೂ ಕಾಂಗ್ರೇಸ್ ಪಕ್ಷದ ಜೊತೆ ಧ್ವನಿಯಾಗಬೇಕಿದೆ ಎಂದವರು ಹೇಳಿದರು.

 

ಗುತ್ತಿಗೆದಾರರ ಹೆಸರಲ್ಲಿ ಕಾರ್ಯಕರ್ತರ ಕೆಲಸ

 

ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಪಡೆದು, ಅದನ್ನು ಪಕ್ಷದ ಕಾರ್ಯಕರ್ತರು ನಿರ್ವಹಿಸುವ ಘಟನೆಗಳು ಬಂಟ್ವಾಳ ಕ್ಷೇತ್ರದಲ್ಲಿ ಕಂಡು ಬರುತ್ತಿದೆ, ತನ್ನ ಅವಧಿಯಲ್ಲಿ ಇಂತಹಾ ಕೆಲಸವನ್ನು ತಾನು ಮಾಡಿಲ್ಲ ಎಂದರು. ತನ್ನ ಅಧಿಕಾರವಧಿಯಲ್ಲಿಯೂ ಅನೇಕ ಪ್ರಾಥಮಿಕ‌ ಆರೋಗ್ಯ ಕೇಂದ್ರಗಳು‌ ಸ್ಥಾಪನೆಯಾಗಿದೆ, ಒಂದೇ ದಿನ 23 ಆರೋಗ್ಯ ಉಪ ಕೇಂದ್ರಗಳಿಗೆ ಶಂಕು ಸ್ಥಾಪನೆ ಮಾಡಿದ್ದೆ. ಆದರೆ ನಡೆಯುತ್ತಿರುವ ಅಪಪ್ರಚಾರ ಖೇದ ತಂದಿದೆ ಎಂದ ಅವರು,

ರದ್ದು ಮಾಡಿರುವ ಬಿಪಿಎಲ್ ಕಾರ್ಡ್ ಅನ್ನು ವಾಪಾಸು ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.

  ಈವೆರಗೆ ಸರಕಾರ ಒಂದೇಒಂದು ಮನೆ ನೀಡಿಲ್ಲ, ನೀಡಿದ ದಾಖಲೆಗಳಿದ್ದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಅವರು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್,ಉಪಾಧ್ಯಕ್ಷೆ ಜೆಸಿಂತಾ, ಜಿ.ಪಂ.ಸದಸ್ಯ ರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ,ಎಂ.ಎಸ್.ಮಹಮ್ಮದ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಬಂಟ್ಚಾಳ ಬ್ಲಾಕ್ ಆಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಭೂಬ್ಯಾಂಕ್ ನ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ಯೂತ್ ಕಾಂಗ್ರೇಸ್ ಅಧ್ಯಕ್ಷ ಸುರೇಶ್ ಜೋಹರ, ಪಾಣೆಮಂಗಳೂರು ಬ್ಲಾಕ್ ನ ಯೂತ್ ಕಾಂಗ್ರೇಸ್ ಆದ್ಯಕ್ಷ ಇಬ್ರಾಹಿಂ ನವಾಜ್ ,

ಪುರಸಭಾ ಸದಸ್ಯ ರಾದ ಗಂಗಾಧರ ಪೂಜಾರಿ, ಜನಾರ್ಧನ‌ಚೆಂಡ್ತಿಮಾರ್, ಸಿದ್ದೀಕ್ ಬೊಗೋಡಿ ಉಪಸ್ಥಿತರಿದ್ದರು.

 

More from the blog

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...