Saturday, January 31, 2026

ಪೇರಿಮಾರ್- ನಾಣ್ಯ ಅಂಗನವಾಡಿ ಕೇಂದ್ರದಲ್ಲಿ 74ನೇ ಸ್ವಾತಂತ್ರ ದಿನಾಚರಣೆ

ಬಂಟ್ವಾಳ: ಪುದು ಗ್ರಾಮದ ಪೇರಿಮಾರ್ – ನಾಣ್ಯ ಅಂಗನವಾಡಿ ಕೇಂದ್ರದಲ್ಲಿ ಸರಳವಾಗಿ 74ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಪುದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ & ಹಾಲಿ ಸದಸ್ಯ, ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷ ಹಾಶೀರ್ ಪೇರಿಮಾರ್ ರವರು ಧ್ವಜಾರೋಹಣಗೈದರು.

ನಂತರ ಮಾತನಾಡಿದ ಅವರು, ದೇಶದಿಂದ ಬ್ರಿಟಿಷರನ್ನು ಅಹಿಂಸೆ, ಉಪವಾಸ, ಸತ್ಯಾಗ್ರಹದಂತಹ ಅಸ್ತ್ರಗಳ ಮೂಲಕ ಹಿಮ್ಮೆಟ್ಟಿಸಿರುವುದು ಭಾರತೀಯರ ಸಾತ್ವಿಕ ಶಕ್ತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸೇನಾನಿಗಳನ್ನು ಸ್ಮರಿಸಿಕೊಳ್ಳುತ್ತ, ಪ್ರತಿಯೊಬ್ಬರೂ ಅವರ ದೇಶ ಭಕ್ತಿಯ ಆದರ್ಶ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಂಡರೇ ಅಖಂಡ, ಬಲಿಷ್ಠ, ಸುಂದರ ಸೌಹಾರ್ಧ ಭಾರತ ಕಟ್ಟಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಸ್ಜಿದುಳ್ ಖಿಳರ್ ಖಜಾಂಚಿ ಹುಸೈನ್ ಬಾಲ್ದಬೋಟ್ಟು, ಬಾಲವಿಕಾಸ ಸಮಿತಿಯ ಸದಸ್ಯ ಉಮರಬ್ಬ ಪೇರಿಮಾರ್, ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ಶೌಕತ್ ಆಲಿ ಮಾರಿಪಳ್ಳ, ಫಾಝೀಲ್ ಪೇರಿಮಾರ್, ಹಮೀದ್ ಪೇರಿಮಾರ್, ಆಮೀನ್ ಮಾಲಿಕ್ ಬಾಲ್ದಬೋಟ್ಟು, ನಿಯಾಝ್ ಅಹ್ಮದ್ ಪೇರಿಮಾರ್, ಉನೈಸ್ ಬಾಲ್ದಬೋಟ್ಟು, ಸಲೀಂ ಪೇರಿಮಾರ್, ಇಕ್ಬಾಲ್ ಪೇರಿಮಾರ್, ಶಾಹೀದ್ ಪೇರಿಮಾರ್, ಹಫೀಝ್ ಪೇರಿಮಾರ್, ಜುನೈದ್ ಪೇರಿಮಾರ್ ಅಂಗನವಾಡಿಯ ಶಿಕ್ಷಕಿ ಕುಸುಮಾ, ಸಹಾಯಕ ಶಿಕ್ಷಕಿ ಅಶ್ವಿನಿ ಕುಮಾರಿ, ಆಶಾ ಕಾರ್ಯಕರ್ತೆ ಕುಸುಮಾ ನಾಣ್ಯ ಹಾಗೂ ಊರಿನ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.

ಮೇಲ್ಕಾರ್ ವುಮೆನ್ಸ್ ಕಾಲೇಜಿನ ಅಧ್ಯಾಪಕ ಮಾಜೀದ್ ಎಂ.ಎನ್. ಪೇರಿಮಾರ್ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...