ವಿಟ್ಲ: ಪಂಚಾಯಿತಿ ಸದಸ್ಯರೆಲ್ಲರ ಒಗ್ಗೂಡುವಿಕೆಯಿಂದ, ಗ್ರಾಮಸ್ಥರ ಸಹಕಾರದೊಂದಿಗೆ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಇಡ್ಕಿದು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ನೋಂದಾಯಿತ ಉದ್ಯೋಗ ಚೀಟಿ ಹೊಂದಿರುವ ಅಕುಶಲ ಕಾರ್ಮಿಕರನ್ನು ಬಳಸಿಕೊಂಡು ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ಇಡ್ಕಿದು-ಕುಳ ಗ್ರಾಮ ವ್ಯಾಪ್ತಿಯ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಮಿತ್ತೂರು- ಆಲದಗುಂಡಿ – ಕಬಕ ಕೂಡುರಸ್ತೆ ಕಾಂಕ್ರೀಟೀಕರಣದ ಉದ್ಘಾಟನೆ, ಕುಳ ಗ್ರಾಮದ ಕಬಕ -ಅಡ್ಯಾಲು ರಸ್ತೆ ಅಭಿವೃದ್ದಿ ಮತ್ತು ಇಡ್ಕಿದು ಗ್ರಾಮದ ಕಲ್ಲಸರ್ಪೆ ಜನತಾ ಕಾಲನಿ ರಸ್ತೆ ಅಭಿವೃದ್ದಿ ಕಾಮಗಾರಿಗಗಳಿಗೆ ತಲಾ ರೂ 10.00 ಲಕ್ಷ ಅನುದಾನವನ್ನು ಮೀಸಲಿರಿಸಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪಂ.ಅಧ್ಯಕ್ಷರಾದ ಚಂದ್ರಾವತಿ, ಜಿಲ್ಲಾ ಪಂ.ಸದಸ್ಯರಾದ ಜಯಶ್ರೀ ಕೋಡಂದೂರು, ತಾ.ಪಂ.ಸದಸ್ಯೆ ವನಜಾಕ್ಷಿ ಎಸ್.ಭಟ್, ಪುತ್ತೂರು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ , ಸ.ಕಾ.ನಿ.ಅಭಿಯಂತರರಾದ ಷಣ್ಮುಗಂ, ಕಿರಿಯ ಇಂಜಿನಿಯರರಾದ ಪ್ರೀತಂ, ಪಂ.ಸದಸ್ಯರುಗಳಾದ ಜಯರಾಮ ಕಾರ್ಯಾಡಿಗುತ್ತು, ವಸಂತಿ, ಜಗದೀಶ್ವರಿ, ಶಾರದಾ, ರಸಿಕಾ, ಇಡ್ಕಿದು ಸೇ.ಸ.ಬ್ಯಾಂಕಿನ ನಿರ್ದೆಶಕರಾದ ರಮೇಶ್ ಭಟ್ ಮಿತ್ತೂರು, ಸುರೇಶ್ ಮುಕ್ಕುಡ, ಅಂಗನವಾಡಿ ಹಾಗೂ ಗ್ರಾಮಸ್ಥರು ಹಾಜರಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.














