Sunday, July 13, 2025

ಆರೋಗ್ಯ ತಪಾಸಣೆಯ ಐಸಿಯು ಬಸ್ ಅಮ್ಟೂರಿಗೆ

ಬಂಟ್ವಾಳ: ಅಮ್ಟೂರು ಗ್ರಾಮದ ಗ್ರಾಮಸ್ಥರಿಗಾಗಿ ಆರೋಗ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಬಂಟ್ವಾಳ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜೇಶ್ ನಾಯ್ಕ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ತೆರಳಿ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸುವ ಐಸಿಯು ಬಸ್ ಈ ದಿನ ಅಮ್ಟೂರು ಗ್ರಾಮಕ್ಕೆ ಆಗಮಿಸಿತು.

ಅಮ್ಟೂರಿನ ಗ್ರಾಮಸ್ಥರು ಅದರ ಸದುಪಯೋಗ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಿಪಿ ಹಾಗೂ ಶುಗರ್ ತಪಾಸಣೆ ಮಾಡುವ ಮೂಲಕ ಗೋಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು, ಬಾಜಪ ಬೂತ್ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಗೋಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಲಕ್ಷ್ಮಿ ಪ್ರಭು, ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಪೂವಳ, ಚಾಲನೆ ನೀಡಿದರು. ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿಗಾರ್, ಕರಿಂಗಾಣ ಗ್ರಾಮ ಪಂಚಾಯತ್ ಸದಸ್ಯರಾದ  ಪ್ರವಿತ್ರ ಗೋಪಾಲ್,  ಸುಷ್ಮಾ ಆನಂದ್,  ಪ್ರೇಮ ಗುರುವಪ್ಪ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ವಿಜಯಶಂಕರ ಆಳ್ವ ಹಾಗೂ ವೈದ್ಯಾಧಿಕಾರಿಗಳಾದ ಡಾಕ್ಟರ್ ಕೀರ್ತನ್, ಚಂದನಾ, ಪ್ರಮುಖರಾದ  ಇಂದಿರಾ ರೈ,  ದೇವಕಿ, ದಿವಾಕರ ಪೂಜಾರಿ, ವಿಖ್ಯಾತ್ ಶೆಟ್ಟಿ ಬಾಳಿಕೆ, ತಾರನಾಥ ಪೂಜಾರಿ, ರೋಹಿತ್ ಕುಮಾರ್, ಪ್ರವೀಣ್ ಪೂಜಾರಿ, ಹರೀಶ್ ಬಟ್ಟೆ ಹಿತ್ತಲು, ಮಂಜುನಾಥ್, ಹಾಗೂ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.

More from the blog

‘ಭೂಮಿಯಲ್ಲಿ ಜೀವನ’ ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ..

ಬಂಟ್ವಾಳ :  ಸಹ್ಯಾದ್ರಿ ಕಾಲೇಜು ಮಂಗಳೂರು ಇಲ್ಲಿನ ಎಂ.ಬಿ.ಎ.ವಿದ್ಯಾರ್ಥಿಗಳ ಕಾರ್ಪೋರೆಟ್ ಸಾಮಾಜಿಕ ಜವಬ್ದಾರಿ ಕ್ಲಬ್ ಆಯೋಜಿಸಿದ "ಭೂಮಿಯಲ್ಲಿ ಜೀವನ" ಗದ್ದೆಯಲ್ಲಿ ನೇಜಿ‌ ನೆಡುವ ವಿಶೇಷ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಾವೂರದ ಸಾಮಾಜಿಕ ನೇತಾರ...

ತುಂಬೆಯ ಕಾವ್ಯ ಕೆ. ನಾಯಕ್ ಗೆ ಪಿ.ಎಚ್.ಡಿ ಪದವಿ..

ಬಂಟ್ವಾಳ: ತುಂಬೆಯ ಕಾವ್ಯ. ಕೆ. ನಾಯಕ್ ಇವರು ಐಐಎಸ್‌ಸಿ‌ನ ಅಂತರ್‌ಶಿಸ್ತಿನ ವಿಜ್ಞಾನ ವಿಭಾಗದ ಡೀನ್ ಹಾಗೂ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಕೇಂದ್ರದ ಪ್ರಾಧ್ಯಾಪಕ ಪ್ರೊ. ನವಕಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ “ಎಲೆಕ್ಟ್ರೋಕೆಮಿಕಲ್...

ಫರಂಗಿಪೇಟೆ: ಸಂಕಲ್ಪ ಸಿದ್ಧಿಗಾಗಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭೇಟಿ..

ಬಂಟ್ವಾಳ : ಸಂಕಲ್ಪ ಸಿದ್ಧಿಗಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಜು.12ರಂದು ಫರಂಗಿಪೇಟೆಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯಿಂದ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...