Saturday, January 31, 2026

ಬೆಲೆ ಕಟ್ಟಲಾಗದ ಮೂರು ಸಾವಿರ ರೂಪಾಯಿ ನೀಡಿದ ಐತಪ್ಪ ನಾಯ್ಕ್!

“ಮಾನ್ಯ ರಶೀದ್ ರವರೇ… ನನ್ನ ಕೈಯಲ್ಲಾಗುವ ಒಂದು ಕಿರು ಸಹಾಯ ರೂ. 3,000 ವನ್ನು ನಿಮ್ಮ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಧಿಗೆ ವರ್ಗಾಯಿಸುತ್ತೇನೆ. ನೀವಿದನ್ನು ಕೋವಿಡ್ ಜಿಲ್ಲಾಸ್ಪತ್ರೆಯ ರೋಗಿಗಳ ಸಹವರ್ತಿಗಳ ಊಟಕ್ಕಾಗಿ ಬಳಸಬಹುದು. ಸಾಲ, ಮನೆ ಖರ್ಚು, ತಂದೆ ತಾಯಿಯ ಔಷಧಿ ವೆಚ್ಚ ಇವೆಲ್ಲವೂ ನನ್ನ ತಲೆ ಮೇಲಿರುವಾಗ ಮೊತ್ತ ಚಿಕ್ಕದಾಗಿರುವುದಕ್ಕೆ ಕ್ಷಮಿಸಿ.”

ಇದು ಮಾನವೀಯ ಗುಣವುಳ್ಳ ಕಾನತ್ತಡ್ಕ ಶ್ರೀ ಕೃಷ್ಣ ವಿದ್ಯೋದಯ ಹಿ.ಪ್ರಾ. ಶಾಲೆಯ ಸಹೃದಯಿ ಸಹಶಿಕ್ಷಕ ಐತಪ್ಪ ನಾಯ್ಕ್ (+91 7892182868) ಅವರ ಉದಾರತೆಯ ಮಾತು. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಳೆದ ಮೂರೂವರೆ ವರ್ಷಗಳಿಂದ ವೆನ್ಲಾಕ್ ಜಿಲ್ಲಾಸ್ಪತ್ರೆಯ ರೋಗಿಗಳ ಸಹವರ್ತಿಗಳಿಗೆ ಪ್ರತಿದಿನ ರಾತ್ರಿಯ ಉಚಿತ ಭೋಜನ ವ್ಯವಸ್ಥೆ ಮಾಡುತ್ತಿದ್ದು, ಕೋವಿಡ್ 19ರ ನಂತರ ಕಳೆದೊಂದು ವರ್ಷದಿಂದ ಸರಕಾರಿ ಕೋವಿಡ್ ಜಿಲ್ಲಾಸ್ಪತ್ರೆಗೂ ಈ ವ್ಯವಸ್ಥೆಯನ್ನು ವಿಸ್ತರಿಸಿದೆ. ಕೋವಿಡ್ ಫುಡ್ ಗೆ ಪ್ರಸ್ತುತ ದಿನನಿತ್ಯ 1,600 ರೂ. ಖರ್ಚು ಇದ್ದು ಎಂ.ಫ್ರೆಂಡ್ಸ್ ನಿಧಿ ಬರಿದಾದಾಗ ಸಾರ್ವಜನಿಕರಿಗೆ ಕನಿಷ್ಟ 1,600 ನೀಡಿ ಸಹಕರಿಸುವಂತೆ ವಿನಂತಿಸಲಾಗಿತ್ತು. ಇದಕ್ಕೆ ಹಲವಾರು ಸಹೃದಯರು ಸ್ಪಂದಿಸಿದ್ದರು.

ತೀರಾ ಆರ್ಥಿಕ ಸಂಕಷ್ಟದಲ್ಲಿದ್ದವರು ಕೂಡಾ ಐನೂರು, ಸಾವಿರ ನೀಡಿ ಯೋಜನೆಯನ್ನು ಪ್ರೋತ್ಸಾಹಿಸಿದ್ದರು. ಈ ನಡುವೆ ಐತಪ್ಪ ನಾಯ್ಕ್ ಕಾನತ್ತಡ್ಕ ಅವರು ತಮ್ಮ ವೈಯಕ್ತಿಕ ಆರ್ಥಿಕ ಸಮಸ್ಯೆ, ಸಾಲ, ತಂದೆ – ತಾಯಿ ಅನಾರೋಗ್ಯದ ಶುಶ್ರೂಷೆ ನಡುವೆಯೂ ಎಂ.ಫ್ರೆಂಡ್ಸ್ ನಿಧಿಗೆ 3,000 ನೀಡಿ “ಸಣ್ಣ ಮೊತ್ತ ನೀಡಿದ್ದಕ್ಕೆ ಕ್ಷಮಿಸಿ” ಅಂತ ಹೇಳಿ ತಮ್ಮ ದೊಡ್ಡ ಹೃದಯ ವೈಶಾಲ್ಯತೆಯನ್ನು ತೋರಿಸಿದ್ದಾರೆ. ಈ ಮಾತು ಕೇಳಿದಾಗ ಒಮ್ಮೆ ಕಣ್ತುಂಬಿ ಬಂತು. ಅವರ ಮೇಲಿರುವ ಅಭಿಮಾನ ಮೇಲೈಸಿತು. ಇಂತಹವರೂ ಸಮಾಜದಲ್ಲಿದ್ದಾರಲ್ಲಾ ಅಂತ ಹೆಮ್ಮೆಯಾಯಿತು.

ಇತ್ತೀಚೆಗೆ ಅವರು ಎಂ.ಫ್ರೆಂಡ್ಸ್ ಕೋವಿಡ್ ಫುಡ್ ಯೋಜನೆಯ ಫೇಸ್ಬುಕ್ ಪೋಸ್ಟಿಗೆ ಉತ್ತರಿಸಿ “ನೆರೆಮನೆಯವ ಸತ್ತರೂ ನನಗೆ ಚಿಂತೆಯಿಲ್ಲ, ತಾನು ಸುಖವಾಗಿರಬೇಕು ಎಂದು ಹೆಚ್ಚಿನವರು ಬಯಸುವ ಈ ಸಮಾಜದಲ್ಲಿ ಎಂ.ಫ್ರೆಂಡ್ಸ್ ನವರ ಈ ಸೇವೆಗೆ ಬೆಲೆ ಕಟ್ಟಲಾಗದು. ಕೊಡುವ ಕೈಗಳನ್ನು ದೇವರು ಬರಿದಾಗಲು ಬಿಡುವುದಿಲ್ಲ. ಇದ್ದೂ ಕೊಡದವನಿಗೆ ಎಂದಿಗೂ ಯಾವುದಾದರೊಂದು ರೀತಿಯಲ್ಲಿ ಮಾನಸಿಕ ಶಾಂತಿ ದೊರಕಲ್ಲ ಎಂದು ಹಿರಿಯರ ಮಾತಿದೆ.” ಎಂದು ಕಮೆಂಟ್ ಹಾಕಿದ್ದರು.

ಐತಪ್ಪ ನಾಯ್ಕ್ ಕೆಲವು ವರ್ಷಗಳ ಹಿಂದೆ ತಾನು ಸಹಶಿಕ್ಷಕನಾಗಿರುವ ಕಾನತ್ತಡ್ಕ ಶಾಲೆಯ ಬಾವಿಗೆ ಮೂಕಪ್ರಾಣಿ ಆಡು ಬಿದ್ದಾಗ ಅದರ ಆಕ್ರಂದನ ಕೇಳಿ ಯಾರೂ ಸ್ಪಂದಿಸದಿದ್ದಾಜ ಸ್ವತಃ ಐತಪ್ಪ ನಾಯ್ಕ್ ಅವರು ಜೀವದ ಹಂಗು ತೊರೆದು ತಕ್ಷಣ ಬಾವಿಗಿಳಿದು ಆ ಆಡಿಗೆ ಮರುಜೀವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

– ರಶೀದ್ ವಿಟ್ಲ
+91 9741993313

ಎಂ.ಫ್ರೆಂಡ್ಸ್ ನಿಧಿಗೆ ನಿಮಗೂ ಸಹಕರಿಸಲು ಆಸಕ್ತಿ ಇದ್ದರೆ ಈ ಖಾತೆ ಬಳಸಬಹುದು.
M Friends Charitable Trust
A/C No: 3058101003352
Bank: Canara Bank
Branch : Vittal
IFSC : CNRB0003058
Mob: +91 9741993313

More from the blog

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...