ಬಿ.ಸಿ.ರೋಡ್: ಮನುಷ್ಯನಿಗೆ ಭಕ್ತಿ ಬೇಕು. ಅನನ್ಯವಾದ ಚಿಂತನೆಯನ್ನು ಮಾಡುವವನನ್ನು ಭಗವಂತ ನೋಡುತ್ತಾನೆ. ಆದರೆ ಈಗ ಜನರು ಕಷ್ಟ ಬಂದಾಗ ಮಾತ್ರ ಭಗವಂತನ ನೆನಪಾಗುತ್ತದೆ. ಎಲ್ಲಾ ಆತ್ಮಗಳು ಅಂತಸ್ಥವಾಗಿ ಪವಿತ್ರವಾಗಿದೆ. ರಾಜಯೋಗ, ಕರ್ಮಯೋಗ, ಧ್ಯಾನಯೋಗ ಹಾಗೂ ಭಕ್ತಿ ಯೋಗದಿಂದ ದೇವರನ್ನು ಒಲಿಸಬಹುದು ಕನ್ಯಾಡಿ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಅವರು ನೂತನವಾಗಿ ನಿರ್ಮಾಣಗೊಂಡ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ ೧೮ರಂದು ಪ್ರಾಣ ಪ್ರತಿಷ್ಠೆ, ಜೀವಕಲಶಾಭಿಷೇಕ ನಡೆಯಲಿದ್ದು ಇದರ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ ನಮ್ಮ ಶರೀರ ೨೪ ತತ್ವಗಳಿಂದ ರಚಿತವಾಗಿದೆ. ಎಲ್ಲರೂ ಕಣ್ಣುಮುಚ್ಚಿ ಧ್ಯಾನ ಮಾಡಬೇಕು. ಈ ಅಭ್ಯಾವನ್ನು ರೂಢಿಸಿಕೊಂಡರೆ ಅಪರಿಮಿತವಾದ ಧೈರ್ಯಬರುತ್ತದೆ. ಇದರಿಂದ ವಿಶ್ವವನ್ನೇ ಗೆಲ್ಲಬಹುದು. ಪರಸ್ವರ ದ್ವೇಷವನ್ನು ಬಿಟ್ಟು ಸಹೋದರರಾಗಿ ಒಳ್ಳೆಯ ಕೆಲಸವನ್ನು ಒಗ್ಗಟ್ಟಾಗಿ ಮಾಡೋಣ ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ಉದ್ಯಮಿ ಬಿ. ರಘುನಾಥ ಸೋಮಯಾಜಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನರಹರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಶಾಂತ ಮಾರ್ಲ, ಉದ್ಯಮಿ ಜಗನ್ನಾತ ದೌಟ ಬದಿಗುಡ್ಡೆ, ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ, ಪುತ್ತೂರು ಅರುಣ್ ಕುಮಾರ್ ಪುತ್ತಿಲ, ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುದ್ರೋಳಿ ದೇವಸ್ಥಾನದ ಪದ್ಮರಾಜ್, ಉದ್ಯಮಿ ಅನಿಲ್ ಶೆಟ್ಟಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ನ್ಯಾಯವಾದಿ ರಮೇಶ್ ಉಪಾಧ್ಯಾಯ, ಕನಪಾಡಿ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಾಥ ರೈ, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿ ಪಿಯೂಸ್ ರೋಡ್ರಿಗಸ್, ಕರಿಯಂಗಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪಂಚಾಯತ್ ಸದಸ್ಯ ಸುದೀಪ್ ಶೆಟ್ಟಿ ಮಾಣಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ರೆಂಜೋಡಿ ಸ್ವಾಗತಿಸಿದರು.