Wednesday, February 12, 2025

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್​ ಹಿಂತಿರುಗಿಸಿ ಮಾನವೀಯತೆ ಮೆರೆದ ಹೋಟೆಲ್ ಸಮುದ್ರ ಮಾಲಕ ಕರುಣಾಕರ ಶೆಟ್ಟಿ

ಬಂಟ್ವಾಳ: ಹೋಟೆಲ್ ಗೆ ಚಹಾ ಕುಡಿಯಲು ಬಂದು ಅಲ್ಲೇ ಬಿಟ್ಟು ಹೋಗಿದ್ದ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದು ಬ್ಯಾಗ್ ನ್ನು ವಾರಸುದಾರರಿಗೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದ ಘಟನೆ ಕಲ್ಲಡ್ಕದ ಕುದ್ರೆಬೆಟ್ಟು ಎಂಬಲ್ಲಿನ ಹೋಟೆಲ್ ಒಂದರಲ್ಲಿ ನಡೆದಿದೆ.

ತಮಿಳುನಾಡು ಮೂಲದ ವ್ಯಕ್ತಿಗಳು ಮಂಗಳೂರಿಗೆ ಕೆಲಸದ ‌ನಿಮಿತ್ತ ಆಗಮಿಸಿ, ವಾಪಾಸು ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನೂತನ ವಾಗಿ ಆರಂಭವಾದ ಸಮುದ್ರ ಹೋಟೆಲ್ ಗೆ ಚಹಾ ಕುಡಿಯಲು ಹೋಗಿದ್ದರು. ಚಹಾ ಕುಡಿಯುವ ವೇಳೆ ಟೇಬಲ್ ಮೇಲೆ ಲಕ್ಷಾಂತರ ರೂ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ನ್ನು ಇಟ್ಟಿದ್ದರು. ಆದರೆ ಚಹಾ ಕುಡಿದ ಬಳಿಕ ಈ ಕುಟುಂಬ ಬ್ಯಾಗ್ ನ ಅರಿವಿಲ್ಲದ ಸೀದಾ ಕಾರು ಹತ್ತಿ ತೆರಳಿದ್ದರು. ಆದರೆ ಹೋಟೆಲ್ ಮಾಲಕ ‌ಕರುಣಾಕರ ಶೆಟ್ಟಿ ಅವರು ಬ್ಯಾಗ್ ನ್ನು ಗಮನಿಸಿ ಸೇಫ್ ಆಗಿ ಇಟ್ಟಿದ್ದರು. ಜೊತೆಗೆ ಇದರಲ್ಲಿ ಕಂಡು ಬಂದ ಮೊಬೈಲ್ ಸಂಖ್ಯೆ ಯ ಮೂಲಕ ಬ್ಯಾಗ್ ಮಾಲಕರ ಪತ್ತೆ ಮಾಡವಲ್ಲಿ ಯಶಸ್ವಿಯಾದರು.

ಅದಾಗಲೇ ಬ್ಯಾಗ್ ಮಾಲಕರು ಇದರ ಅರಿವಿಲ್ಲದ ಬೆಂಗಳೂರು ತಲುಪಿದ್ದರು. ಪೋನ್ ಕರೆಗೆ ಎಚ್ಚರಗೊಂಡ ಅವರು ಅಲ್ಲಿಂದಲೇ ವಾಪಾಸು ಬಂದು ಬ್ಯಾಗ್ ನ್ನು ಪಡೆದುಕೊಂಡಿದ್ದಾರೆ. ಹೋಟೆಲ್ ಮಾಲಕನ ಮಾನವೀಯ ಗುಣಗಳ ಬಗ್ಗೆ ಅವರು ಕೊಂಡಾಡಿ ಅವರಿಗೆ ಧನ್ಯವಾದ ಹೇಳಿದ್ದಾರೆ.

ಬ್ಯಾಗ್ ಸೇಫ್ ಆಗಿ ಪಡೆದ ಕುಟುಂಬ ಹೋಟೇಲ್ ಮಾಲಕರಿಗೆ ಗಿಪ್ಟ್ ನೀಡಲು ಮುಂದಾಗಿತ್ತು. ಆದರೆ ಹೋಟೆಲ್ ಮಾಲಕ ಎಲ್ಲವನ್ನು ನಿರಾಕರಣೆ ಮಾಡಿ ಅವರು ಉತ್ತಮ ರೀತಿಯಲ್ಲಿ ಉಪಚರಿಸಿ ವಾಪಾಸು ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ

More from the blog

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...