ವಿಟ್ಲ: ಇಲ್ಲಿಯ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯು ವಿಟ್ಲ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ವಿಟ್ಲ ರೇಂಜ್ ಮದರಸ ಮೆನೇಜ್‌ಮೆಂಟ್ ಆಶ್ರಯದಲ್ಲಿ ಕೆಲಿಂಜದಲ್ಲಿ ನಡೆದ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಮಿಲಾದ್ ಫೆಸ್ಟ್‌ನಲ್ಲಿ ದ್ವಿತೀಯ ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದೆ.
ಜೂನಿಯರ್ ವಿಭಾಗದ ಕನ್ನಡ ಹಾಡಿನಲ್ಲಿ ರಿಜ್ವಾನ್, ಕನ್ನಡ ಕಥಾಪ್ರಸಂಗದಲ್ಲಿ ಸೈಫ್ ಸೊಂಡೆ, ಡ್ರಾಯಿಂಗ್‌ನಲ್ಲಿ ಸಲ್ಮಾನ್ ಫಾರೀಸ್, ಕ್ವಿಜ್‌ನಲ್ಲಿ ರಶೀದ್. ಸಬ್ ಜ್ಯೂನಿಯರ್ ವಿಭಾಗದಲ್ಲಿ ಹಿಫಿಲ್‌ನಲ್ಲಿ ತಸ್ರೀಪ್ ಹಾಗೂ ಕನ್ನಡ ಹಾಡಿನಲ್ಲಿ ತಬೀಸ್, ಸೀನಿಯರ್ ವಿಭಾಗದ ಬಾಂಗ್‌ನಲ್ಲಿ ಮಹಮ್ಮದ್ ತಾನೀಸ್, ಹಿಫಿಲ್‌ನಲ್ಲಿ ಮಹಮ್ಮದ್ ಅಜೀಮ್, ಕನ್ನಡ ಭಾಷಣದಲ್ಲಿ ಹಾಸೀಂ ಅಹ್ಮದ್, ಅರಬಿ ಭಾಷಣದಲ್ಲಿ ಮಹಮ್ಮದ್ ತೌವೀದ್, ಹಾಗೂ ಕನ್ನಡ ಪ್ರಬಂಧದಲ್ಲಿ ಮಹಮ್ಮದ್ ಸಲೀತ್ ಪ್ರಶಸ್ತಿ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಆವರಣದಲ್ಲಿ ಬುಧವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಸಮಿತಿ ಅಧ್ಯಕ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಉಪಾಧ್ಯಕ್ಷ ಗಫುರ್ ಮೇಗಿನಪೇಟೆ, ಕಾರ್‍ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್‍ಯದರ್ಶಿ ಹನೀಫ್ ಎಂ.ಎ., ಮಸೀದಿಯ ಆಡಳಿತ ಸಮಿತಿ ಕಾರ್‍ಯದರ್ಶಿ ನೋಟರಿ ಅಬೂಬಕರ್ ವಿಟ್ಲ, ಶಾಲಾ ಮೇಲ್ವಿಚಾರಕ ವಿ.ಕೆಎಂ.ಅಶ್ರಫ್, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಸದರ್ ಉಮರ್ ಸಅದಿ ಇಸ್ಮಾಯಿಲ್ ಹನೀಫಿ, ಹಕೀಂ ಅರ್ಷದಿ, ಅಬೂಬಕರ್ ಮುಸ್ಲಿಯಾರ್, ಮಹಮ್ಮದ್ ಮುಸ್ಲಿಯಾರ್ ಭಾಗವಹಿಸಿದ್ದರು.

