ವಿಟ್ಲ: ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ಮೇಗಿನಪೇಟೆ ಹೊರೈಝನ್ ಆಂಗ್ಲ ಮಾಧ್ಯಮ ಶಾಲೆಯ ನೂತನ ತರಗತಿ ಕೊಠಡಿಯನ್ನು ಮಸೀದಿಯ ಅಧ್ಯಕ್ಷ ವಿ.ಎಂ.ಇಬ್ರಾಹಿಂ ಮೇಗಿನಪೇಟೆ ಉದ್ಘಾಟಿಸಿದರು. ಶಾಲೆಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಭಾಗವಹಿಸಿದ್ದರು.
ಮಸೀದಿಯ ಖತೀಬ್ ಮಹಮ್ಮದ್ ಅಲಿ ಫೈಝಿ ದುವಾ ನೆರವೇರಿಸಿದರು. ಶಾಲೆಯ ಉಪಾಧ್ಯಕ್ಷ ಗಫೂರ್ ಮೇಗಿನಪೇಟೆ, ಕಾರ್ಯದರ್ಶಿ ಇಕ್ಬಾಲ್ ಮೇಗಿನಪೇಟೆ, ಜತೆ ಕಾರ್‍ಯದರ್ಶಿ ಹನೀಫ್ ಎಂ.ಎ.,ಕೋಶಾಧಿಕಾರಿ ವಿ.ಎಚ್,ಅಶ್ರಫ್, ಸುರಕ್ಷಾ ಸಮಿತಿಯ ಅಬೂಬಕರ್ ಅನಿಲಕಟ್ಟೆ, ಸಂಚಾಲಕ ನೋಟರಿ ಅಬೂಬಕರ್, ಸದರ್ ಉಮರ್ ಸಅದಿ, ಮೇಲ್ವಿಚಾರಕ ವಿ.ಕೆ.ಎಂ.ಆಶ್ರಫ್, ಮುಖ್ಯ ಶಿಕ್ಷಕಿ ವಿಲಾಸಿನಿ, ಮಸೀದಿಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ, ಜತೆ ಕಾರ್‍ಯದರ್ಶಿ ಇಕ್ಬಾಲ್ ಶೀತಲ್, ಟ್ರಸ್ಟಿಗಳಾದ ಶೇಕ್ ಆದಂ ಸಾಹೇಬ್, ಸಿದ್ದೀಕ್ ಮಾಲಮೂಲೆ, ವಿ.ಎ.ರಶೀದ್, ಅಂದುಞಿ ಗಮಿ, ರಫೀಕ್ ಹಾಜಿ, ಅಬ್ದುಲ್ ರಹಿಮಾನ್, ದೀಪಕ್ ಮುಂತಾದವರು ಉಪಸ್ಥಿತರಿದ್ದರು.
