ಮಂಗಳೂರು : ಗೃಹ ರಕ್ಷಕದಳದ ಸಿಬ್ಬಂದಿಯ ವ್ಯಥೆಯ ಕತೆ! ಎಂಬ ” ನಮ್ಮ ಬಂಟ್ವಾಳ ” ವರದಿಗೆ ಬಿಗ್ ಇಂಪ್ಯಾಕ್ಟ್ ಸಿಕ್ಕಿದೆ.
ಅನಾರೋಗ್ಯದಿಂದಿರುವ ನಿಷ್ಠಾವಂತ ಮಹಿಳಾ ಹೋಂ ಗಾರ್ಡ್ ಸಿಬ್ಬಂದಿ ಶಕ್ತಿನಗರ ಮೊಗರೋಡಿ ನಿವಾಸಿ ಚಂಪಾ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಗೆ ದಾಖಲಿಸುವ ಭರವಸೆಯ ಮಾತುಗಳು ಸಿಕ್ಕಿದೆ.
ಚಂಪಾ ಅವರ ಮನೆಗೆ ಕದ್ರಿ ಟ್ರಾಫಿಕ್ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ಗೋಪಾಲಕೃಷ್ಣ ಭಟ್ ಅವರು ಭೇಟಿ ನೀಡಿ ನಾಳೆ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲು ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
ಅಲ್ಲದೆ ಗೃಹ ರಕ್ಷಕ ದಳದ ಕಮಾಂಡೆಂಟ್ ಮುರಳಿ ಮೋಹನ್ ಚೂತಾಂರು ಹಾಗೂ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಅವರು ಭೇಟಿ ನೀಡಿ ಊಟಕ್ಕೆ ಅಕ್ಕಿ ನೀಡಿ ಭರವಸೆಯ ಮಾತುಗಳನ್ನಾಡಿದ್ದಾರೆ ಎಂದು ಚಂಪಾ ಅವರು “ನಮ್ಮ ಬಂಟ್ವಾಳ” ಕ್ಕೆ ತಿಳಿಸಿದ್ದಾರೆ.


ಅಲ್ಲದೆ ಇವರ ನೆರವಿಗೆ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಈಗಾಗಲೇ ಮಂಗಳೂರು ಯೋಗ ಗ್ರೂಪ್(spyss) ನಿಂದ 15 ದಿನಗಳಿಗೆ ಬೇಕಾದ ದಿನಬಳಕೆಯ ಕಿಟ್ ನ್ನು ಒದಗಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಅವಿವಾಹಿತೆ ಚಂಪಾ ಅವರು ಕಳೆದ 26 ವರ್ಷಗಳಿಂದ ಗೃಹ ರಕ್ಷಕದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಬಳಿಕ 11 ವರ್ಷಗಳಿಂದ ಕದ್ರಿ ಟ್ರಾಫಿಕ್ ಪೋಲೀಸ್ ಠಾಣೆ ಸರಹದ್ದಿನಲ್ಲಿ ಟ್ರಾಫಿಕ್ ಕೆಲಸವನ್ನು ಮಾಡುತ್ತಾ ಬಂದಿದ್ದರು. ಆದರೆ ಕಳೆದ 2 ತಿಂಗಳಿನಿಂದ ಇವರು ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲಿದ್ದಾರೆ. ಅವರು ನಡೆದಾಡಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಒಂದು ಕಡೆಯಿಂದ ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲದೆ ಔಷಧಿಗಳನ್ನು ಪಡೆಯಲು ಸಾಧ್ಯ ವಿಲ್ಲ, ಊಟಕ್ಕೂ ಕಷ್ಟದ ಸ್ಥಿತಿಯಾಗಿದೆ ಎಂಬ ಬಗ್ಗೆ ವರದಿ ಮಾಡಲಾಗಿತ್ತು.
ತಂದೆ ತಾಯಿಯನ್ನು ಕಳೆದುಕೊಂಡಿರುವ ಅವಿವಾಹಿತೆ ಚಂಪಾ ಅವರಿಗೆ ತಂಗಿಯ ಆಶ್ರಯದಲ್ಲಿದ್ದಾರೆ. ಆದರೆ ತಂಗಿ ಗಂಡ ಉದಯ ಅವರೂ ಕೂಡ ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಮನೆಯಲ್ಲಿ ದುಡಿಯುವ ಕೈಗಳಿಲ್ಲ. ಈ ವರದಿಗೆ ಕೂಡಲೇ ಇಲಾಖಾ ಅಧಿಕಾರಿಗಳು ಸ್ಫಂದಿಸಿ ಅವರ ಸಹಾಯಕ್ಕೆ ನಿಂತಿದ್ದಾರೆ.
ಇವರ ಮೊಬೈಲು ಸಂಖ್ಯೆ ಮತ್ತು ಬ್ಯಾಂಕ್ ಡಿಟೈಲ್ ಇಲ್ಲಿದೆ. ಸಹಕಾರ ನೀಡುವವರು ಸಂಪರ್ಕ ಮಾಡಬಹುದು.
Mobile No. 8123869879
SBI Branch :State Bank SB Ac No. 20210215667

