ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದಿ ಭಾಷ ಶಿಕ್ಷಕ ಸಂಘದ ವತಿಯಿಂದ ಬಿಸಿರೋಡು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಿಂದಿ ದಿವಸ ಆಚರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಮಾತನಾಡಿ ದೇಶವನ್ನು ಸುಧಾರಣೆ ಮಾಡುವ ಶಕ್ತಿ ಶಿಕ್ಷಕರಲ್ಲಿದ್ದು , ಉತ್ತಮ ಶಿಷ್ಯರನ್ನು ರೂಪುಗೊಳಿಸುವ ಕೆಲಸ ಶಿಕ್ಷಕರ ಮೂಲಕ ಆಗಬೇಕು ಎಂದು ಅವರು ಹೇಳಿದರು.
ಶಿಕ್ಷಣ ಜೀವನಕ್ಕಾಗಿ ಇರಬೇಕು,
ಚಿತ್ರದ ರೂಪದಲ್ಲಿ ಶಿಕ್ಷಣ ವನ್ನು ವಿದ್ಯಾರ್ಥಿ ಗಳಿಗೆ ನೀಡುವ ಕೆಲಸ ಶಿಕ್ಷಕರ ಮೂಲಕ ಆಗಬೇಕಾಗಿದೆ.
ಮನಸ್ಸಿಗೆ ಖುಷಿಯಾಗುವ ರೀತಿಯಲ್ಲಿ ಶಿಕ್ಷಣವನ್ನು ನೀಡಬೇಕು.
ವಿದ್ಯಾರ್ಥಿಗಳು ಹಿಂದಿ ಭಾಷೆಯ ನ್ನು ಸರಿಯಾಗಿ ಕಲಿತು ಜ್ಞಾನಿಯಾದರೆ ಅದುವೇ ಶಿಕ್ಷಕರ ಸಾರ್ಥಕ ಕ್ಷಣ.

ಪ್ರತಿಯೊಬ್ಬ ಶಿಕ್ಷಕರು ಮೊದಲು ಕೆಲಸ ಮಾಡುವ ಸ್ಥಳ ಸ್ವರ್ಗ ವಾಗುವಂತೆ ರೂಪಿಸಿಕೊಳ್ಳಿ.
ಒಳ್ಳೆಯತನವನ್ನು ಗುರುತಿಸಿ ಸಂಭ್ರಮಪಡುವ ಮನಸ್ಸು ನಮ್ಮದಾಗಬೇಕಾಗಿದೆ.
ಉತ್ತಮ ಶಿಷ್ಯರನ್ನು ಶಿಕ್ಷಕರು ರೂಪಿಸಿದಾಗ ಬದುಕಿನ ಕೊನೆಯಕ್ಷಣದವರೆಗೂ ನೆನೆಪಿಟ್ಟುಕೊಳ್ಳುತ್ತಾರೆ ಹಾಗಾಗಿ ಅವರು ಎಲ್ಲರೂ ಗ್ರೇಟ್ ಶಿಕ್ಷಕರಾಗಲು ಪ್ರಯತ್ನ ಮಾಡಿ ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿ.ಆರ್.ಸಿ.ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ ಅವರು ಮಾತನಾಡಿ ಕೊರೊನಾ ಸಂಕಷ್ಟದ ಅವಧಿಯಲ್ಲಿ ವಿದ್ಯಾರ್ಥಿ ಗಳ ಜೊತೆ ಸಂಭಾಷಣೆ ಯ ಸಂಪರ್ಕ ಕಳೆದುಕೊಂಡಿರುವುದು ಶಿಕ್ಷಕರಿಗೆ ದೊಡ್ಡ ಹೊಡೆತ ಬಿದ್ದಿದೆ.ವಿದ್ಯಾರ್ಥಿ ಗಳ ಕೌಶಲ್ಯ ಕ್ಕೂ ಪೆಟ್ಟು ಬಿದ್ದಿದೆ.
ಇದು ಮುಂದಿನ ಜನಾಂಗಕ್ಕೆ ಕೊರತೆಯಾಗಿ ಪರಿಣಮಿಸಬಹುದು.
ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗಲಿದ್ದು ಬಹುದೊಡ್ಡ ಸವಾಲು ನಿಮ್ಮ ಮುಂದಿದೆ.
ಶಾಲೆಗೆ ಆಗಮಿಸುವ ವಿದ್ಯಾರ್ಥಿ ಗಳಿಗೆ ಗೌರವ ನೀಡುವ ಕೆಲಸ ಆಗಬೇಕಾಗಿದೆ, ಅವರನ್ನು ಖುಷಿಯಿಂದ ಬರಮಾಡಿಕೊಂಡು ಶಿಕ್ಷಣ ನೀಡಿದರೆ ಅವರ ಶಿಕ್ಷಣ ಕ್ಕೆ ಪ್ರೇರಣೆ ಆಗಬಹುದು.
ಅ ಮೂಲಕ ಕಲಿಕೆಗೆ ಪೂರಕವಾದ ಅಂಶಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ ಒಂದಷ್ಟು ಅಪಸ್ವರಗಳು ಪದೇ ಪದೇ ಕೇಳಿ ಬಂದರೂ ಕೂಡ ಶಿಕ್ಷಕರು ವಿದ್ಯಾರ್ಥಿ ಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಯಲ್ಲಿ ಕೊರತೆಯಾಗಿಲ್ಲ.
ಬಂಟ್ವಾಳ ತಾಲೂಕಿನ ಹಿಂದಿ ಶಿಕ್ಷಕರು ಪಾದರಸದ ಗುಣಗಳನ್ನು ಹೊಂದಿದ್ದಾರೆ.
ಹಿಂದಿ ವರ್ಕ್ ಬುಕ್ ತಯಾರು ಮಾಡಲು ತೊಡಗಿಸಿಕೊಂಡ ಕ್ರಮ ಅನುಕರಣೀಯ, ಪುಸ್ತಕ ತಯಾರು ಮಾಡಿ ಜಿಲ್ಲಾಮಟ್ಟದಲ್ಲಿ ಹೆಜ್ಜೆಗುರುತು ಇಡುವ ರೀತಿಯಲ್ಲಿ ಕೆಲಸ ಮಾಡಿರುವ ಹಿಂದಿ ಶಿಕ್ಷಕರ ಶ್ರಮ ಶ್ಲಾಘನೀಯ.
ಪತ್ರಕರ್ತ ಹರೀಶ್ ಮಾಂಬಾಡಿ ಅವರು ಮಾತನಾಡಿ , ಹಿಂದಿ ಭಾಷೆಯ ಮೇಲೆ ಭಾರತೀಯರಿಗೆ ವಿಶೇಷ ಅಭಿಮಾನ ಇದೆ.
ಕನ್ನಡಿಗರು ಮಾತೃ ಭಾಷೆಯ ಜೊತೆ ಅನ್ಯ ಭಾಷೆಯನ್ನು ಪ್ರೀತಿಸುತ್ತಾರೆ .
ಹಿಂದಿ ಭಾಷೆಯ ವೈವಿಧ್ಯತೆ ಗಳನ್ನು ಶಾಲೆಯ ಮೂಲಕ ಮಾತ್ರ ಕಲಿಯಬೇಕಾಗಿದೆ.
ಹಿಂದಿ ಸಾಹಿತ್ಯ ವನ್ನು ವಿಚಾರ ವೈವಿಧ್ಯತೆ ಯನ್ನು ಕಲಿಯುವ ಅವಕಾಶ ಗಳು ಇನ್ನಷ್ಟು ವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಹಿಂದಿ ಶಿಕ್ಷಕರ
ಸಂಘದ ಅಧ್ಯಕ್ಷ
ಇಂಮ್ತಿಯಾಜ್ ಅಹಮ್ಮದ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಮಹೇಶ್ ಆಚಾರ್ ಅವರು ಹಿಂದಿ ಭಾಷೆಯ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಪದೋನ್ನೊತಿ ಹೊಂದಿದ ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರ ನ್ನು ಕಾರ್ಯಕ್ರಮ ದಲ್ಲಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸೂರ್ಯ ಶಾಲೆಯ ಶಿಕ್ಷಕ ಶಿವಕುಮಾರ್ ಹಿಚ್ಕಡ್ , ಗೋಳ್ತಮಜಲು ಶಾಲಾ ಶಿಕ್ಷಕ ಶಂಕರ್ ಪಾವಸ್ಕರ್ ಕ್ರೀಡಾ ಪಟುಗಳನ್ನು ಗೌರವಿಸಲಾಯಿತು.
ಹಿಂದಿ ಸಂಘದ ಸದಸ್ಯರ ಸಮಿತಿಯ ಮೂಲಕ ವಿಶೇಷವಾಗಿ ಹಿಂದಿ ವರ್ಕ್ ಬುಕ್ ತಯಾರು ಮಾಡಿದ್ದು ಸಮಿತಿ ಸದಸ್ಯರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ದೀಪಿಕಾ ಸ್ವಾಗತಿಸಿ, ಉಪಾಧ್ಯಕ್ಷ ಪಂಚಾಕ್ಷರಿ ಧನ್ಯವಾದ ನೀಡಿದರು.
ಶಿಕ್ಷಕ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

