ಮುಂಬಯಿ,ಎ.೦೨: ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾಗಿರುವ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್‍ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕಳೆದ ಶುಕ್ರವಾರ (ಮಾ.೨೯) ಭೇಟಿಗೈದು ಶೀಘ್ರದಲ್ಲೇ ಬಿಡುಗಡೆ ಗೊಳ್ಳುವ ತನ್ನ ಜೀವನ ಚರಿತ್ರೆ ಕೃತಿಗೆ ಶುಭಾರೈಕೆ ಯಾಚಿಸಿ ಸಾಂಪ್ರದಾಯಿಕವಾಗಿ ಬಿನ್ನಹ ಗೈದರು.

ಕಾರ್ಕಳ ಅತ್ತೂರು ಗ್ರಾಮದ ಹಳ್ಳಿ ಹುಡುಗನೋರ್ವ ತನ್ನ ಸಮುದಾಯದ ಕುಲಕಸಬು ಕೇಶ ಛೇದನವನ್ನೇ ಜೀವನ ಉದ್ಯಮವಾಗಿಸಿ ವೃತ್ತಿನಿಷ್ಠೆಯಿಂದಲೇ ಗೌರವ ಡಾಕ್ಟರೇಟ್‌ಗೆ ಭಾಜನರಾಗಿ ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಶಿವರಾಮ ಭಂಡಾರಿ ಅವರ ಸಾಧನೆಗೆ ಡಾ| ಹೆಗ್ಗಡೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪ್ರೊ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ, ಪತ್ರಕರ್ತ ಆರೀಫ್ ಕಲಕಟ್ಟಾ ಉಪಸ್ಥಿತರಿದ್ದರು.