Thursday, February 13, 2025

ಯುವಕನಿಗೆ ಮಾರಣಾಂತಿಕ ಹಲ್ಲೆ

ಬಂಟ್ವಾಳ: ಯುವಕನೊರ್ವ ರಸ್ತೆ ಬದಿಯಲ್ಲಿ ಬೈಕಿ ನಿಲ್ಲಿಸಿ ಮೊಬೈಲ್ ನಲ್ಲಿ ಮಾತಾನಾಡುವ ವೇಳೆ ಮೂವರು ಸೇರಿ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟೊ ಎಂಬಲ್ಲಿ ರಾತ್ರಿ ವೇಳೆ ನಡೆದಿದೆ.

 

ನಿತಿನ್ ಪೂಜಾರಿ ಎಂಬವರು ಮಾರಣಾಂತಿಕ ವಾಗಿ ಹಲ್ಲೆಗೊಳಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತಿನ್ ಪೂಜಾರಿ ಮೂಲತಃ ಲೊರೆಟ್ಟೊ ಸಮೀಪದ ಪೆದಮಲೆಯಲ್ಲಿ ವಾಸವಾಗಿದ್ದರು.
ಆದರೆ ಕೆಲವೊಂದು‌ ಕಾರಣದಿಂದ ಇವರು ಮಾರ್ನಬೈಲು ಸಮೀಪದ ಬೊಳ್ಳಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ನಿತಿನ್ ವಿದೇಶದಲ್ಲಿ ಉದ್ಯೋಗ ದಲ್ಲಿದ್ದು ಮೂರು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು.

ಪೆದಮಲೆಯಲ್ಲಿರುವ ಜಾಗದಲ್ಲಿ ಮನೆ ನಿರ್ಮಾಣ ಹಾಗೂ ಬೊರೆವೆಲ್ ಕೊರೆಸುವ ಯೋಚನೆ ಮಾಡಿದ್ದು , ಈ ಕಾರಣಕ್ಕಾಗಿ ಇವರು ಸಂಜೆಯ ವೇಳೆ ತನ್ನ ಬುಲೆಟ್ ಬೈಕ್ ನಲ್ಲಿ ಪೆದಮಲೆ ಜಾಗದ ಕಡೆಗೆ ಹೋಗಿ ಬಳಿಕ ವಾಪಾಸು ಬರುವ ವೇಳೆ ಲೊರೆಟ್ಟೊ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನಿಂತು ಕೊಂಡು ವಿದೇಶದಲ್ಲಿರುವ ಅಣ್ಣನ ಜೊತೆ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತಿರುವಾಗ ವಾಸು ಪೂಜಾರಿ ಅವರು ಅವ್ಯಾಚ್ಚ ಶಬ್ದಗಳಿಂದ ಬೈದು ಅಲ್ಲಿಂದ ಹೋಗುವಂತೆ ಹೇಳಿದರು. ‌
ಅಲ್ಲಿಂದ ಕೆಳಭಾಗ ಕ್ಕೆ ಬಂದು ಬೈಕ್ ನಿಲ್ಲಿಸಿ ಮತ್ತೆ ಅಣ್ಣನ ಜೊತೆ ಮಾತನಾಡುವ ವೇಳೆ ವಾಸು ಪೂಜಾರಿಯವರ ಇಬ್ಬರು ಮಕ್ಕಳಾದ ರಾಕೇಶ್ ಮತ್ತು ಚೇತನ್ ಅವರು ಆಕ್ಟೀವ್ ಹೊಂಡಾದಲ್ಲಿ ಬಂದು ಅದರಲ್ಲಿದ್ದ ರಾಡ್ ತೆಗೆದು ನಿನ್ನನ್ನು ಕೊಲ್ಲತ್ತೇವೆ ಎಂದು ಹೇಳಿ ಮಾರಣಾಂತಿಕ ವಾಗಿ ಹಲ್ಲೆ ನಡೆಸಿದಾಗ ಜೀವ ಉಳಿಸಲು ರಕ್ತದ ಜೊತೆಯಲ್ಲಿ ಒಡಿ ಬಂದಿದ್ದೇನೆ ಎಂದು ನಿತಿನ್ ತಿಳಿಸಿದ್ದಾರೆ.

ಕಿಸೆಯಲ್ಲಿ ಅರುವತ್ತು ಸಾವಿರ ರೂ. ನಗದು ಹಣವಿದ್ದು ಅದನ್ನು ಅವರು ದೋಚಿದ್ದಾರೆ ಎಂದು ನಿತಿನ್ ತಿಳಿಸಿದ್ದಾರೆ. ಅಲ್ಲದೆ ಇವರ ಬುಲೆಟ್ ಬೈಕ್ ನ್ನು ಹೊಡೆದು ಹಾನಿಗೊಳಿಸಿದ್ದಾರೆ ಎಂದು ಅವರು ಠಾಣೆ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನಿತಿನ್ ಕೂಡಾ ನಮಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ ರಾಕೇಶ್ ಚೇತನ್ , ವಾಸು ಪೂಜಾರಿ ಅವರು ಸಮುದಾಯ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.‌
ಇವರ ನಡುವಿನ ವೈಯಕ್ತಿಕ ವಿಚಾರಕ್ಕೆ ಗಲಾಟೆ ನಡೆದಿರಬಹುದು ಎಂದು ಪೋಲೀಸರು ತಿಳಿಸಿದ್ದಾರೆ.
ಆಸ್ಪತ್ರೆ ಗೆ ಬಂಟ್ವಾಳ ನಗರ ಠಾಣಾ ಎಸ್. ಐ. ಚಂದ್ರಶೇಖರ್ ಬೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...