ಬಂಟ್ವಾಳ: ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ನಿನ್ನೆ ಸಂಜೆ ಮಳೆಯ ಜೊತೆಗೆ ಸಿಡಿಲು ಬಡಿದು ಈ ಘಟನೆ ನಡೆದಿದೆ.ಬುದ್ಧ ನಾಯ್ಕ ಎಂಬವರಿಗೆ ಸೇರಿದ ಮನೆ ಭಾಗಶಃ ಹಾನಿಯಾಗಿದ್ದು,ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ಸಂಪರ್ಕ,ವಯರಿಂಗ್ ಸಂಪೂರ್ಣ ಹಾನಿಯಾಗಿದೆ.



ಮನೆಯ ಪೀಠೋಪಕರಣಗಳು ,ಟಿವಿ, ಡಿಶ್, ಕಿಟಕಿ, ಬಾಗಿಲು ಹಾನಿಯಾಗಿದೆ. ಸಿಡಿಲಿನ ತೀವ್ರತೆಗೆ ಮನೆಯ ಹಂಚು,ವಿದ್ಯುತ್ ಮಾಪಕ ಸಿಡಿದು ಪುಡಿಪುಡಿಯಾಗಿದೆ. ಘಟನಾ ಸ್ಥಳಕ್ಕೆ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿಠಲ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು, ಮಳೆ ನೀರು ಸೋರದಂತೆ ತರ್ಪಾಲ್ ಒದಗಿಸಲಾಗಿದೆ. ಕಂದಾಯ ಅಧಿಕಾರಿಗಳು ಮಹಜರು ನಡೆಸಿ, ಪರಿಹಾರ ಕ್ರಮ ಕೈಗೊಂಡಿದ್ದಾರೆ.












