ಬಂಟ್ವಾಳ: ಚೈತನ್ಯ ಕಾರ್ಯಕ್ರಮದಿಂದ ಎಲ್ಲರಿಗೂ ಹೊಸ ಅವಕಾಶಗಳು ಸಿಗಲಿ. ಎಲೆಮರೆಯ ಕಾಯಿಯಂತೆ ಇರುವ ಪ್ರತಿಭೆಗಳು ಬೆಳಕಿಗೆ ಬರಲಿ. ಇದೊಂದು ವಿಶೇಷವಾದ ಕಾರ್ಯಾಗಾರ ನಿರಂತರವಾಗಿ ನಡೆಯಲಿ ಎಂದು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೆನ್ನಕೇಶವ ತಿಳಿಸಿದರು.


ಆದಿತ್ಯವಾರ ಪೊಸಳ್ಳಿ ಕುಲಾಲ ಭವನದಲ್ಲಿ ನಡೆದ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಹಮ್ಮಿಕೊಂಡಿದ್ದ ಚೈತನ್ಯ ಬದುಕಿಗೊಂದು ಬೆಳಕು ನಿರಂತರ ಕಾರ್ಯಾಗಾರವನ್ನು ಹಣತೆಗಳನ್ನು ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ ಮಾತನಾಡಿ ನಾವು ಸಣ್ಣವರಿರುವಾಗ ಅವಕಾಶಗಳಿರಲಿಲ್ಲ, ನಮ್ಮ ಪ್ರತಿಭೆಗಳನ್ನು ಬೆಳಕಿಗೆ ತರಬೇಕಾದರೆ ತುಂಬಾ ಕಷ್ಟಗಳನ್ನು ಪಟ್ಟಿದ್ದೇವೆ. ಆದರೆ ಈಗಿನ ಮಕ್ಕಳಿಗೆ ಚೈತನ್ಯ ಕಾರ್ಯಾಗಾರದ ಮುಖಾಂತರ ಹೊಸ ವೇದಿಕೆ ದೊರೆತಂತಾಗಿದೆ. ಅದನ್ನು ಸರಿಯಾದ ಎಲ್ಲರೂ ಬಳಸಿಕೊಳ್ಳಿ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ನಾರಾಯಣ ಸಿ. ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ಪ್ರಾರ್ಥನೆ ಸಾನ್ವಿ, ಲೇಖನ್, ಮಿಥ್ವಿ, ವೈಷ್ಣವಿ ಪ್ರಾರ್ಥನೆ ಮಾಡಿದರು.
ಕುಲಾಲ ಸೇವಾದಳದ ಕಾರ್ಯದರ್ಶಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಸ್ವಾಗತಿಸಿದರು. ಸೇವಾದಳಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗಣೇಶ್ ಕುಲಾಲ್ ದುಗನಕೋಡಿ ಮತ್ತು ದರ್ಶನ್ ಮೊಡಂಕಾಪು ಅತಿಥಿಗಳ ಪರಿಚಯ ಮಾಡಿದರು.
ನಿಶ್ಮಿತಾ ಕನಪಾದೆ ಮತ್ತು ಚಿರಾಗ್ ಮೈಯ್ಯರಬೈಲು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಭಂಡಾರಿಬೆಟ್ಟು ಧನ್ಯವಾದ ನೀಡಿದರು.
ದೇವದಾಸ ಅಗ್ರಬೈಲು, ರಾಘವೇಂದ್ರ ಮೈರಾನ್‌ಪಾದೆ, ರಾಜೇಶ್ ರಾಯಿ, ನೂತನ್ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ಸಭಾಕಾರ್ಯಕ್ರಮದ ನಂತರ ಡ್ಯಾನ್ಸ್‌ಕೊರೀಯೋಗ್ರಾಫರ್ ಮಹೇಶ್ ಕುಲಾಲ್‌ರವರು ಮಕ್ಕಳಿಗೆ ಡ್ಯಾನ್ಸ್ ತರಬೇತಿಗೆ ಚಾಲನೆ ನೀಡಿದರು.












