ವಿಟ್ಲ: ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ವಿಟ್ಲಪಡ್ನೂರು-ಕೊಳ್ನಾಡು-ಸಾಲೆತ್ತೂರು ಗ್ರಾಮದ ಫಲಾನುಭವಿಗಳಿಗೆ ಉಜ್ವಲ ಅನಿಲ ಸಂಪರ್ಕ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ ನಡೆಯಿತು.
ಮಂಗಳೂರು ಲೋಕಸಭಾ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ಸರಕಾರದಿಂದ ದೊರಕುವ ಎಲ್ಲಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿ ಗುತ್ತು ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಂತರ ೧೯೬ ಫಲಾನುಭವಿಗಳಿಗೆ ಗ್ಯಾಸ್‌ಸ್ಟವ್
ವಿತರಣೆ ಮಾಡಲಾಯಿತು.ಈ ಸಭೆಯಲ್ಲಿ ಇಂಡೇನ್ ಗ್ಯಾಸ್ ಮಾಲೀಕರಾದ ಸತೀಶ್ ಕುಮಾರ್ ಆಳ್ವ ಇವರು ಉಜ್ವಲ ಯೋಜನೆಯ ಬಗ್ಗೆ ಮತ್ತು ಸಂಸದರ ಸಾಧನೆಯ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿದರು,
ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಸುಧಾ ಎಸ್ ಶೆಟ್ಟಿ, ಸದಸ್ಯರುಗಳಾದ ಅಬ್ದುಲ್ಲ ಕುಕ್ಕಿಲ, ನಾಗೇಶ್ ಕುಮಾರ್, ಭಾಸ್ಕರ್ ಶೆಟ್ಟಿಗಾರ್, ಪ್ರೇಮಲತಾ ಹಾಗೂ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು, ಬಾಲಕೃಷ್ಣ ಸೆರ್ಕಳ, ಸತೀಶ್ ಭಟ್ ಪಂಜಿಗದ್ದೆ, ಅಭಿಷೇಕ್ ರೈ ರಾಧುಕಟ್ಟೆ, ವಿಶ್ವನಾಥ ಪೂಜಾರಿ ಕಟ್ಟತ್ತಿಲ, ವಿಧ್ಯೇಶ್ ಉಪಸ್ಥಿತರಿದ್ದರು.
ವಿಟ್ಲಪಡ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ ಸ್ವಾಗತಿಸಿದರು. ಪಂಚಾಯಿತಿ ಸದಸ್ಯರಾದ ಜಯಂತ ಪಿ ವಂದಿಸಿದರು. ಗಣೇಶ್ ಬಾರೆಬೆಟ್ಟು ಕಾರ್‍ಯಕ್ರಮ ನಿರೂಪಿಸಿದರು.

