ಮಂಗಳೂರು: ಗುರುಪುರದಲ್ಲಿ ಪ್ರಕೃತಿ ವಿಕೋಪದಲ್ಲಿ ಕೆಲವು ಮನೆಗಳು ಬೀಳುವ ಸ್ಥಿತಿಯಲ್ಲಿರುವುದರಿಂದ ಅವರನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಬೊಂಡಂತಿಲ ಗ್ರಾಮದ ಗೋಮಾಲದಲ್ಲಿ ಹಾಗೂ ಕುಮ್ಕಿ ಜಾಗದಲ್ಲಿ ಮನೆಗಳನ್ನು ನೀಡಲು ಜಿಲ್ಲಾಡಳಿತ ಹೊರಟಿದ್ದು, ಇದನ್ನು ವಿರೋಧಿಸಿ, ನೀಡುವುದಾದರೆ ತಮ್ಮದೇ ಗ್ರಾಮ ಪಂಚಾಯತ್ ನಲ್ಲಿ ಸುಮಾರು 1000 ಕ್ಕಿಂತ ಹೆಚ್ಚು ನಿರಾಶ್ರಿತರಿದ್ದು, ಸುಮಾರು 20 ವರ್ಷದಿಂದ ಯಾವುದೇ ಮನೆ ನಿವೇಶನವನ್ನು ನೀಡದಿರುವುದರಿಂದ ಮನೆ ನಿವೇಶನ ನೀಡುವುದಾದರೆ ತಮ್ಮ ಗ್ರಾಮದವರಿಗೆ ಮೊದಲ ಆದ್ಯತೆ ನೀಡಬೇಕು ಹಾಗೂ ತಮ್ಮ ಗ್ರಾಮದಲ್ಲಿ ಯಾವುದೇ ಸ್ಮಶಾನ ಇಲ್ಲದಿರುವುದರಿಂದ ಇದಕ್ಕೆ ಬೇಕಾದ ಜಾಗವನ್ನು ಕಾಯ್ದಿರಿಸಬೇಕು ಎಂದು ಇನ್ನೂ ಹಲವು ಬೇಡಿಕೆಗಳೊಂದಿಗೆ ಸಾರ್ವಜನಿಕವಾಗಿ ಮನವಿಯನ್ನು ಉಪ ತಾಹಶಿಲ್ದಾರ್ ರವರಿಗೆ ನೀರುಮಾರ್ಗ ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್ ಕುಮಾರ್ ಉಗ್ಗಕೊಡಿ ಅವರ ನೇತೃತ್ವದಲ್ಲಿ ನೀಡಲಾಯಿತು.

ಈ ಸಂಧರ್ಬದಲ್ಲಿ ತಾ.ಪಂ. ನಿಕಟ ಪೂರ್ವ ಅಧ್ಯಕ್ಷ ಗೋಕಲ್ ದಾಸ್ ಶೆಟ್ಟಿ, ನಿಕಟ ಪೂರ್ವ ಗ್ರಾ.ಪಂ. ಸದಸ್ಯ ಸಚಿನ್ ಹೆಗ್ಡೆ, ಸ್ಥಳೀಯರಾದ ಯಶ್ವಿನ್ ಏನ್.ಕುಂದರ್, ಗೋಪಾಲ್ ಕೊನಿಮಾರ್, ಸತೀಶ್ ಉಗ್ಗಾಕೊಡಿ, ಸಂಜೀವ ಮಜಲ್ ಉಪಸ್ಥಿತರಿದ್ದರು.
