Thursday, July 3, 2025

ಗುಜರಾತ್ ರಾಜ್ಯದಲ್ಲಿ ತುಳು ಸಂಘ ಅಹ್ಮದಾಬಾದ್ ಅಸ್ತಿತ್ವಕ್ಕೆ ತುಳುಭಾಷೆ ಬದುಕು ರೂಪಿಸುವ ಶಕ್ತಿಯಾಗಿಸೋಣ : ಶಶಿಧರ್ ಬಿ.ಶೆಟ್ಟಿ

(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಸೆ.೨೯: ನಾವು ಬದುಕುವ ಸಂಸ್ಕೃತಿಯೇ ತುಳುವಾಗಿದ್ದು ಇದು ತುಳುನಾಡು ಮಾತ್ರವಲ್ಲ, ಕರ್ನಾಟಕ ರಾಜ್ಯ ಸೇರಿದಂತೆ ಸಮಗ್ರ ಭಾರತ, ವಿಶ್ವವ್ಯಾಪಿಯಾಗಿ ಬೆಳೆಯಬೇಕು. ಹಲವು ಭಾಷಿಗರ ಏಕೈದ ಭಾಷೆ ತುಳು ಆಗಿದ್ದು ಇದು ಸಾಮರಸ್ಯತ್ವದ ಧ್ಯೋತಕವಾಗಿದೆ. ತುಳು ಅಂದರೆ ಜಾತಿ, ಮತ, ಧರ್ಮ, ಜನಾಂಗದ ಪರಿದಿಯಿಲ್ಲ. ಆದುದರಿಂದ ಪ್ರಾಚೀನ ಇತಿಹಾಸ ಇರುವ ತುಳುಭಾಷೆ ಬದುಕು ರೂಪಿಸುವ ಶಕ್ತಿಯಾಗಲಿ. ಇದಕ್ಕೆ ತುಳು ಸಂಸ್ಕೃತಿ ಸಂರಕ್ಷಣೆಗೆ ಕಟಿಬದ್ಧರಾಗೋಣ ಎಂದು ತುಳು ಸಂಘ ಬರೋಡಾ ಇದರ ಅಧ್ಯಕ್ಷ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡಾ ಇದರ ಆಡಳಿತ ನಿರ್ದೇಶಕ ಶಶಿಧರ್ ಬಿ.ಶೆಟ್ಟಿ ಬೆಳ್ತಂಗಡಿ ನುಡಿದರು.

ಇಂದಿಲ್ಲಿ ಆದಿತ್ಯವಾರ ಸಂಜೆ ಗುಜರಾತ್‌ನ ಅಹಮಬಾದ್ ಇಲ್ಲಿನ ಲಾ ಗಾರ್ಡನ್‌ನಲ್ಲಿ ಇರುವ ಠಾಕೋರ್ ಭಾಯಿ ದೇಸಾಯಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದು ಗುಜರಾತ್ ರಾಜ್ಯದ ಅಹ್ಮದಾಬಾದ್‌ನಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಮತ್ತೊಂದು ತುಳು ಸಂಸ್ಥೆ ತುಳು ಸಂಘ ಅಹಮದಾಬಾದ್ ಇದರ ಸಮಾಲೋಚನಾ ಸಭೆ ಮತ್ತು ತೌಳವ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಶಶಿಧರ್ ಶೆಟ್ಟಿ ಮಾತನಾಡಿ ಜಾಗತಿಕವಾಗಿ ತುಳುವಿನ ಕೊಡುಗೆ ಅನನ್ಯವಾದುದು ಆದುದರಿಂದ ತುಳು ಬಗ್ಗೆ ಜಾಗತಿಕ ಜಾಗೃತಿ ಮೂಡಬೇಕಾದಗಿದೆ. ತವರೂರ ಭಾರತ ರಾಷ್ಟ್ರದಲ್ಲೇ ಇದರ ಮಹತ್ವ ಬಲಿಷ್ಠವಾಗಿ ನೆಲೆಯೂರಿದಾಗ ವಿಶ್ವವ್ಯಾಪಿಯಾಗಿ ಈ ಭಾಷೆ ವಿಸ್ತಾರಬಲ್ಲದು. ಆ ಮುನ್ನ ಕರ್ನಾಟಕದಲ್ಲಿ ತುಳುವಿಗೆ ದ್ವಿತೀಯ ಭಾಷಾ ಮಾನ್ಯತೆ, ಆದ್ಯತೆ ಸಿಗಬೇಕು. ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇಯದಲ್ಲೂ ಮೆರೆಯಬೇಕು. ಇವೆಲ್ಲಕ್ಕೂ ತುಳುಭಾಷಾ ಮೇಲಿನ ಹಿಡಿತದಲ್ಲಿ ನಮ್ಮಲ್ಲಿನ ಅಡಿಪಾಯ ಗಟ್ಟಿಯಾಗಿಸಬೇಕು ಎಂದರು.

ಗುಜರತ್‌ನ ಹೆಸರಾಂತ ಹಿರಿಯ ಉದ್ಯಮಿ ಮೋಹನ್ ಸಿ.ಪೂಜಾರಿ (ಗೌರವಾಧ್ಯಕ್ಷ) ಮತ್ತು ಹಿರಿಯ ಪತ್ರಕರ್ತ ಎಂ.ಎಸ್ ರಾವ್ ಅಹ್ಮದಾಬಾದ್ ಸಹಯೋಗದೊಂದಿಗೆ ಉಗಮಗೊಂಡ ತುಳು ಸಂಘ ಅಹಮದಾಬಾದ್ ಇದರ ಪ್ರಾರಂಭಿಕ ಹಂತದ ಕಾರ್ಯಕ್ರಮಕ್ಕೆ ತುಳು ಸಂಘ ಅಹಮದಾಬಾದ್‌ನ ಚಿಣ್ಣರು ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ನಂದಾದೀಪವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಿಯೋಜಿತ ಪದಾಧಿಕಾರಿಗಳಾದ ಅಪ್ಪು ಪಿ.ಶೆಟ್ಟಿ (ಅಧ್ಯಕ್ಷ) ಸುಖಾಗಮನ ಬಯಸಿ ಗುಜರಾತ್‌ನ ತುಳುವ ಜನನಾಯಕ, ಅಪದ್ಭಾಂಧವ, ತುಳು ಸಂಘ ಅಹಮದಾಬಾದ್‌ನ ನಿರ್ಮಾತೃ, ಸ್ಪೂರ್ತಿಯ ಸೆಲೆ, ಅಪಾಧ್ಬಂದವ ಶಶಿಧರ್ ಶೆಟ್ಟಿ ಅವರು ತುಳು ಸಂಘ ಅಹಮದಾಬಾದ್ ಸಂಸ್ಥೆಗೆ ರೂಪಾಯಿ ೫ ಲಕ್ಷ ಧನ ಸಹಾಯ ನೀಡಿ ಸಂಸ್ಥೆಯ ಉನ್ನತೀಕರಣಕ್ಕೆ ಪ್ರೇರೇಪಿಸಿದ್ದಾರೆ. ಅವರ ಈ ಸಹಾಯ ಧನಕ್ಕಾಗಿ ತುಳು ಸಂಘದ ಎಲ್ಲ ಸದಸ್ಯರು ಹಾಗೂ ಸಮಸ್ತ ತುಳುವರು ಅತ್ಯಂತ ಕೃತಜ್ಞ ರಾಗಿದ್ದೇವೆ ಎಂದರು.

ಎಂ.ಎಸ್ ರಾವ್ ಅಹ್ಮದಾಬಾದ್ (ಸಲಹೆಗಾರ) ಮಾತನಾಡಿ ಶಶಿಧರ್ ಶೆಟ್ಟಿ ಸಾರಥ್ಯ ಮತ್ತು ಮುಂದಾಳುತ್ವದಲ್ಲಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮತ್ತೊಂದು ತುಳು ಸಂಸ್ಥೆ ಅಸ್ತಿತ್ವಕ್ಕೆ ತರಲಾಗಿದ್ದು ಈ ಮೂಲಕ ಗುಜರಾತ್‌ನಲ್ಲಿ ತುಳು ಸಂಘಸಂಸ್ಥೆಗಳ ಮುಕುಟಕ್ಕೆ ಇನ್ನೊಂದು ಗರಿ ಮೂಡಿದಂತಾಗಿದೆ. ಶಶಿಧರ್ ಅವರಿಗೆ ಋಣಿ ಅಂದರೆ ಅದು ಉಪಚಾರದ ಮಾತಾದೀತು, ಅವರ ಸಹಾಯ, ಸಹಕಾರ ಇಲ್ಲದಿದ್ದರೆ ತುಳು ಸಂಘ ಅಹಮದಾಬಾದ್ ಹುಟ್ಟು ಅಸಾಧ್ಯವಾಗುತಿತ್ತು, ಅವರ ಸಮಯೋಚಿತ ಸ್ಪಂದನೆ, ಸಹಯೋಗಕ್ಕಾಗಿ ಅತ್ಯಂತ ಆಭಾರಿ ಆಗಿದ್ದೇವೆ ಎಂದರು.

ಓರ್ವ ಅಪ್ಪಟ ತುಳುವನಾಗಿದ್ದು ಮಾತೃ ಭಾಷೆ, ಸಂಸ್ಕೃತಿಯನ್ನು ಜೀವನ, ಜೀವಾಳವಾಗಿಸಿರುವ ಶಶಿಧರ್ ಶೆಟ್ಟಿ ಅವರು ಹೃಯಯಶ್ರೀಮಂತರು. ಅವರ ಈ ಸಹಾಯ, ಉತ್ತೇಜನ, ಒತ್ತಾಸೆ, ಪ್ರೋತ್ಸಾಹವನ್ನು ಗುಜರಾತ್ ನೆಲೆಯ ತುಳುವರಂದೂ ಮರೆಯಲಾರೆವು . ಅವರು ತಮ್ಮ ಬಿರುಸಿನ ಚಟುವಟಿಕೆ, ಕೆಲಸ, ಒತ್ತಡದ ಮಧ್ಯೆಯೂ ತುಳುವರಿಗಾಗಿ ಎಲ್ಲವನ್ನು ಬದಿಗಿಟ್ಟು ತುಳು ಸಂಘ ಅಹ್ಮದಾಬಾದ್ ನಿರ್ಮಾಣಕ್ಕಾಗಿ ಮಾಡಿದ ಚಿಂತನೆ, ರಚಿಸಿದ ಯೋಜನೆ ಅನನ್ಯವಾದುದು ಎಂದು ಗಣಪತಿ ಶೆಟ್ಟಿಗಾರ್ (ಪ್ರಧಾನ ಕಾರ್ಯದರ್ಶಿ) ನುಡಿದರು.

ಅಹ್ಮದಾಬಾದ್‌ನ ತುಳುವ ಧುರೀಣರಾದ ಆರ್.ಕೆ ಶೆಟ್ಟಿ, ಮನೋಜ್ ಎಂ.ಪೂಜಾರಿ, ಹರೀಶ್ ಎಂ.ಪೂಜಾರಿ, ಮನೋಜ್ ಶೆಟ್ಟಿ, ನಿತೀನ್ ಅವಿನ್, ಶವಿನಾ ಶೆಟ್ಟಿ, ಸುಮನ್ ಕೋಡಿಯಾಲ್‌ಬೈಲ್, ಬ್ರಿಜೇಶ್ ಪೂಜಾರಿ, ಅಶೋಕ್ ಸಸಿಹಿತ್ಲು ಸೇರಿದಂತೆ ಸ್ಥಾನೀಯ ಅನೇಕ ಗಣ್ಯರು ರಾಜ್ಯದಾದ್ಯಂತದ ವಿವಿಧ ತುಳುವ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಕಲಾವಿದರನ್ನು ಗೌರವಿಸಿದರು.

ಕಿಕ್ಕಿರಿರಿದು ತುಂಬಿದ ಸಭಾಗೃಹದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಇವರಿಂದ ಕೊಲ್ಲೂರು ಕ್ಷೇತ್ರ ಮಹಾತ್ಮೆ ತುಳು ಯಕ್ಷಗಾನ ಪ್ರದರ್ಶಿಸಿದ್ದು ನೋಡುಗರಿಗೆ ತುಳುನಾಡುವೇ ಸೃಷ್ಠಿ ಆಗಿರುವುದು ತುಳು ಬಲಾಢ್ಯತೆ, ಭವಿಷ್ಯಕ್ಕೆ ಸಾಕ್ಷಿಯಾಗಿರುವುದುದಾಗಿ ಗಣಪತಿ ಶೆಟ್ಟಿಗಾರ್ ವಂದನಾರ್ಪಣೆಯಲ್ಲಿ ಅಭಿಮತ ವ್ಯಕ್ತಪಡಿಸಿದರು.

More from the blog

Bantwal : BLO ಕೆಲಸದಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡುವಂತೆ ಒತ್ತಾಯ..

ಬಂಟ್ವಾಳ : ಸರಕಾರಿ ನೌಕರರಲ್ಲದ ಕಾರಣಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು BLO ಕೆಲಸದಿಂದ ಕೈಬಿಡುವಂತೆ ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ (ರಿ.)ದ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಅವರು ತಹಶಿಲ್ದಾರ್ ಅವರಿಗೆ...

ದ.ಕ. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ ಕೆಜಿ, ಯುಕೆಜಿ ಆರಂಭ!

ಮಂಗಳೂರು : ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲು ಸಿದ್ಧತೆ ನಡೆಸಿದೆ. ಈ ಉಪಕ್ರಮವು ದಕ್ಷಿಣ ಕನ್ನಡ ಜಿಲ್ಲೆಯ 70...

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ..

ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪೇಟೆಯಲ್ಲಿ ಕೆಲವು ದಿನಗಳಿಂದ ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಮಂಗಳವಾರ ಬೆಳಗ್ಗೆ ಏಕಾಏಕಿ ಅಟೋರಿಕ್ಷಾಗಳು ರಸ್ತೆಯಲ್ಲಿ...

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...