Friday, July 4, 2025

ಗುಡ್ಡ ಕುಸಿದು ನಾಲ್ಕು ಮನೆಯೊಳಗೆ ನುಗ್ಗಿದ ನೀರು

ಬಂಟ್ವಾಳ : ಗುಡ್ಡ ಕುಸಿದು ನಾಲ್ಕು ಮನೆಯೊಳಗೆ ಮಳೆ ನೀರು ನುಗ್ಗಿದ ಘಟನೆ ಪೆರಾಜೆ ಗ್ರಾಮದ ಬುಡೋಳಿ ಸೈಟ್ ಎಂಬಲ್ಲಿ ನಡೆದಿದೆ.

ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುಡೋಳಿ ನಿವಾಸಿಗಳಾದ ಜೊಹರಾ ಅಬುಬಕ್ಕರ್ ,

ನಬೀಶಾ ಬಶೀರ್ , ಅವ್ವಮ್ಮ ಹಾಗೂ ಸುಲೈಮಾನ್ ಅವರ ಮನೆಯೊಳಗೆ ನುಗ್ಗಿದೆ.

ನಾಲ್ಕು ಮನೆಗೆ ನೀರು ನುಗ್ಗಿದ್ದು ಸಂಪೂರ್ಣ ಜಲಾವೃತಗೊಂಡಿದೆ.

ಕಳೆದ ಎರಡು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುವ ಮಳೆಗೆ ಬುಡೋಳಿ ಸೈಟ್ ನಲ್ಲಿರುವ

ಮನೆಯ ಹಿಂಬದಿಯಲ್ಲಿ ರುವ ಗುಡ್ಡ ಕುಸಿದು ಮಳೆ ನೀರು ಹರಿದು ಹೋಗಲು ಸಾಧ್ಯವಿಲ್ಲದೆ ಅಲ್ಲೇ ಮನೆಯಂಗಳದಲ್ಲಿದ್ದ ಬಾವಿಗೆ ತುಂಬಿದೆ,ಬಾವಿ ಸಂಪೂರ್ಣ ಮಳೆ ನೀರಿನೊಂದಿಗೆ ಮಣ್ಣು ತುಂಬಿದ್ದು ಬಾವಿ ಸಂಪೂರ್ಣ ಮುಚ್ಚಿಹೋಗಿದೆ.

ಅಬಳಿಕ ನೀರು ಅಲ್ಲೇ ತಾಗಿಕೊಂಡಿರುವ ನಾಲ್ಕು ಮನೆಗಳ ಒಳಗೆ ನೀರು ತುಂಬಿದೆ.

 

ಕೂಡಲೇ ಸ್ಥಳಕ್ಕೆ ಬೇಟಿ ನೀಡಿದ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಉಪಾಧ್ಯಕ್ಷ ಉಮ್ಮರ್ , ಸದಸ್ಯರಾದ ಕುಶಾಲಪ್ಪ ಗೌಡ ಮಂಜೊಟ್ಟಿ, ಸುನೀತಾ,

ಪೆರಾಜೆ ಗ್ರಾಮ ಪಂಚಾಯತ್ ಪಿ.ಡಿ‌.ಒ. ಶಂಭುಕುಮಾರ ಶರ್ಮ, ಗ್ರಾಮ ಕರಣೀಕೆ ಸುರಕ್ಷ ,ಗ್ರಾ.ಪಂ.ಸಿಬ್ಬಂದಿ ದಿನೇಶ್, ದಿವಾಕರ ಬೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದರು, ನಾಲ್ಕು ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅವರನ್ನು ಹತ್ತಿರದ ಸಂಬಂಧಿ ಕರ ಮನೆಗೆ ಸ್ಥಳಾಂತರ ಮಾಡಿ ಮನೆಯೊಳಗಿನ ನೀರನ್ನು ತೆಗೆಯುವ ಕೆಲಸ ಆರಂಭಿಸಲಾಗಿದೆ. ಜೊತೆಗೆ ಮಳೆ ನೀರು ಹರಿದು ಹೋಗಲು ಪ್ರತ್ಯೇಕ ಚರಂಡಿ ವ್ಯವಸ್ಥೆ ನಿರ್ಮಾಣ ದ ಕಾರ್ಯ ನಡೆಯುತ್ತಿದೆ.

More from the blog

ಮಧ್ವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಿಡ ನಾಟಿ ಹಾಗೂ ಪರಿಸರ ಜಾಗ್ರತಿ ಮಾಹಿತಿ ಕಾರ್ಯಕ್ರಮ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ) ಬಂಟ್ವಾಳ ಇದರ,ವಗ್ಗ ವಲಯದ ಮಧ್ವ ಒಕ್ಕೂಟದ ವತಿಯಿಂದ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ನ್ಯಾಯಕ್ಕಾಗಿ ಡಿವೈಎಸ್ಪಿ ಗೆ ಮನವಿ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ನ್ಯಾಯಕ್ಕಾಗಿ ದ.ಕ.ಜಿಲ್ಲಾಧಿಕಾರಿಗಳು, ಎಸ್ಪಿಯವರು ಹಾಗೂ ಬಂಟ್ವಾಳ ನಗರ ಇನ್ಸ್‌ಪೆಕ್ಟರ್ ಅವರ ಮೂಲಕ...

ದ. ಕ., ಉಡುಪಿ ಜಿಲ್ಲೆಗಳ ಭೂ ಸಮಸ್ಯೆ ಬಗೆಹರಿಸಲು ನಗರಾಭಿವೃದ್ಧಿ ಸಚಿವರಿಗೆ ಮತ್ತು ಸರ್ಕಾರದ ಕಾರ್ಯದರ್ಶಿಗೆ ಸ್ಪೀಕರ್ ಪತ್ರ

ಮಂಗಳೂರು : ಕರ್ನಾಟಕ ವಿಧಾನ ಸಭೆಯ ಗೌರವಾನ್ವಿತ ಸ್ಪೀಕರ್ ಯು. ಟಿ. ಖಾದರ್ ರವರನ್ನು ಭೇಟಿ ಮಾಡಿದ ನಗರಾಭಿವೃದ್ಧಿ ಪ್ರಾಧಿಕಾರ ದ ಒಕ್ಕೂಟ ದ ಅಧ್ಯಕ್ಷ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ...

ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ: ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಣೆ

ಬಂಟ್ವಾಳ : ತಾಲೂಕಿನ ಇರ್ವತ್ತೂರು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಂಟು ಗ್ರಾಮಗಳ ವ್ಯಾಪ್ತಿಯ ಕ್ಷಯರೋಗಿಗಳಿಗೆ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ ಯೋಜನೆಯಡಿ ಪೌಷ್ಠಿಕಾಂಶವುಳ್ಳ ಆಹಾರದ ಕಿಟ್ ವಿತರಣಾ...